ಶ್ರೀನಿವಾಸಪುರ ತಾಲ್ಲೂಕಿನ ಯರ್ರವಾರಿಪಲ್ಲಿ ಗ್ರಾಮದಲ್ಲಿ  ಏರ್ಪಡಿಸಿದ್ದ ಪೋಷಣ್‌ ಅಭಿಯಾನ್‌ ಕಾರ್ಯಕ್ರಮವನ್ನು ಪಿಡಿಒ ಏಜಾಜ್‌ ಪಾಷ ಉದ್ಘಾಟಿಸಿದರು

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

 

ಶ್ರೀನಿವಾಸಪುರ ತಾಲ್ಲೂಕಿನ ಯರ್ರವಾರಿಪಲ್ಲಿ ಗ್ರಾಮದಲ್ಲಿ  ಏರ್ಪಡಿಸಿದ್ದ ಪೋಷಣ್‌ ಅಭಿಯಾನ್‌ ಕಾರ್ಯಕ್ರಮವನ್ನು ಪಿಡಿಒ ಏಜಾಜ್‌ ಪಾಷ ಉದ್ಘಾಟಿಸಿದರು.

ಶ್ರೀನಿವಾಸಪುರ: ಗರ್ಭಿಣಿ ಮಹಿಳೆಯರು  ಪೌಷ್ಟಿಕ ಆಹಾರ ಸೇವನೆ ಮಾಡಬೇಕು.  ಅಗತ್ಯವಾದ ಚುಚ್ಚುಮದ್ದು ಪಡೆಯಬೇಕು ಎಂದು ಪಿಡಿಒ ಏಜಾಜ್‌ ಪಾಷ ಹೇಳಿದರು.

   ತಾಲ್ಲೂಕಿನ ಯರ್ರವಾರಿಪಲ್ಲಿ ಗ್ರಾಮದಲ್ಲಿ  ಸಾರ್ವಜನಿಕ ಆರೋಗ್ಯ ಇಲಾಖೆ, ಗ್ರಾಮ ಪಂಚಾಯಿತಿ, ಅಂಗನವಾಡಿ ವತಿಯಿಂದ ಏರ್ಪಡಿಸಿದ್ದ ಗ್ರಾಮ ಪಂಚಾಯಿತಿ ಮಟ್ಟದ ಪೋಷಣ್‌ ಅಭಿಯಾನ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಗರ್ಭಿಣಿಯರು ತಮ್ಮ ಗ್ರಾಮದ ಅಂಗನವಾಡಿಗೆ ಹೋಗಿ ಪೌಷ್ಟಿಕ ಆಹಾರ ಸೇವನೆ ಮಾಡಬೇಕು ಎಂದು ಹೇಳಿದರು.

  ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್‌.ಕೃಷ್ಣಾರೆಡ್ಡಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗರ್ಭಿಣಿಯರು ಆರೋಗ್ಯವೇ ಭಾಗ್ಯ ಎಂಬ ಮಾತನ್ನು ಮರೆಯಬಾರದು. ಸ್ವಸ್ಥ ಸಮಾಜ ನಿರ್ಮಾಣ, ಆರೋಗ್ಯವಂತ ಜನ ಸಮುದಾಯದಿಂದ ಮಾತ್ರ ಸಾಧ್ಯ ಎಂದು ಹೇಳಿದರು.

 ಈ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಯರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಸೀಮಂತ ಮಾಡಿ ಮಡಿಲು ತುಂಬಲಾಯಿತು. ಮಕ್ಕಳಿಗೆ ಅನ್ನ ಪ್ರಾಸನ ಮಾಡಿಸಲಾಯಿತು. ಪೌಷ್ಟಿಕ ಆಹಾರ ಸೇವನೆ ಮಹತ್ವ ಕುರಿತು ಅರಿವು ಮೂಡಿಸಲಾಯಿತು.

  ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಲಕ್ಷ್ಮೀನರಸಮ್ಮ, ಗ್ರಾಮ ಪಂಚಾಯಿತಿ ಸದಸ್ಯರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.