ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ,: ತಾಲೂಕಿನಾಧ್ಯಂತ ಜಾನುವಾರುಗಳಿಗೆ ಬಾಧಿಸುತ್ತಿರುವ ಮಾರಕ ಖಾಯಿಲೆಗಳಿಗೆ ಗುಣಮಟ್ಟದ ಚಿಕಿತ್ಸೆಯನ್ನು ನೀಡುವ ಜೊತೆಗೆ ವಿಶೇಷ ವೈದ್ಯರ ತಂಡ ರಚನೆ ಮಾಡಿ, ಸಂಚಾರಿ ವಾಹನ ಮತ್ತು ಕರಪತ್ರಗಳ ಮುಖಾಂತರ ರೈತರಲ್ಲಿ ಜಾಗೃತಿ ಮೂಡಿಸಬೇಕೆಂದು ಒತ್ತಾಯಿಸಿ ರೈತಸಂಘದಿಂದ ಪಶುಸಂಗೋಪನಾ ಇಲಾಖೆ ಸಹಾಯಕರಾದ ಸತ್ಯ ನಾರಾಯಣರವರಿಗೆ ಮನವಿ ನೀಡು ಒತ್ತಾಯಿಸಲಾಯಿತು.
ಹೋರಾಟದ ನೇತೃತ್ವವಹಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಲಕ್ಷಾಂತರ ಕುಟುಂಬಗಳ ಜೀವನಾಡಿಯಾಗಿರುವ ಹೈನೋದ್ಯಮ ಇತ್ತೀಚೆಗೆ ಜಾನುವಾರುಗಳಿಗೆ ಬಾಧಿಸುತ್ತಿರುವ ಚರ್ಮಗಂಟು ರೋಗ, ಕಾಲುಬಾಯಿ ಜ್ವರ ಮತ್ತು ಕಾಲುಗಳಲ್ಲಿ ಹುಳು ಬೀಳುತ್ತಿದ್ದು, ಅದನ್ನೇ ನಂಬಿ ಜೀವನ ಮಾಡುತ್ತಿದ್ದ ಬಡವರಿಗೆ ನುಂಗಲಾರದ ನೋವಾಗಿದೆ ಎಂದು ದೂರಿದರು.
ಮತ್ತೊಂದೆಡೆ ಗಡಿಭಾಗಗಳಲ್ಲಿ ಸೂಕ್ತವಾದ ಪಶುವೈದ್ಯರ ಸೇವೆಯಿಲ್ಲದೆ ಪಕ್ಕದ ರಾಜ್ಯಗಳ ಪಶು ಆಸ್ಪತ್ರೆಗಳನ್ನು ಅವಲಂಭಿಸಬೇಕಾದ ಪರಿಸ್ಥಿತಿ ಗಡಿಭಾಗಗಳಲ್ಲಿದೆ. ಇನ್ನು ಸರ್ಕಾರದಿಂದ ನೂರಾರು ಕೋಟಿ ಅನುದಾನಗಳು ಮಾರಕ ಕಾಯಿಲೆಗಳಿಗೆ ಅವಶ್ಯಕತೆಯಿರುವ ಔಷಧಿಗಳಿಗೆ ಬಿಡುಗಡೆಯಾಗುತ್ತಿದ್ದರೂ ಸಮರ್ಪಕ ಸೇವೆಯಿಲ್ಲದೆ ಖಾಸಗಿ ವೈದ್ಯರನ್ನು ಅವಲಂಭಿಸಬೇಕಾದ ಪರಿಸ್ಥಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಅಧ್ಯಕ್ಷ ತೆರ್ನಹಳ್ಳಿ ಅಂಜಿನಪ್ಪ ಮಾತನಾಡಿ, ಸಾಲಸೂಲ ಮಾಡಿ 60 ಸಾವಿರದಿಂದ 1 ಲಕ್ಷರೂವರೆಗೆ ಬಂಡವಾಳ ಹಾಕಿ ರೈತರು ಖರೀದಿಸುವ ಜಾನುವಾರುಗಳ ಸಂಕಷ್ಟಕ್ಕೆ ಮಾತ್ರ ಯಾವುದೇ ಪ್ರಯೋಜನವಾಗುತ್ತಿಲ್ಲ. ಹಸುಗಳು ತೊಂದರೆಗೆ ಸಿಲುಕಿದಾಗ ರೈತರು ಎಂಪಿಸಿಎಸ್ಗಳ ಮುಖಾಂತರ ಕೂಪನ್ ಹಾಕಿದಾಗ ವೈದ್ಯರು ಬರುವುದು 24 ಗಂಟೆಯಾಗುತ್ತಿದೆ. ಹೀಗಾಗಿ ಅನೇಕ ಹಸುಗಳು ಚಿಕಿತ್ಸೆ ವಿಳಂಭದಿಂದಾಗಿ ಮೃತಪಡುತ್ತಿವೆ ಎಂದು ದೂರಿದರು.
ಆದ್ದರಿಂದ ಮಾನ್ಯ ಸಹಾಯಕ ನಿರ್ದೇಶಕರು ತಾಲೂಕಿನಾಧ್ಯಂತ ಜಾನುವಾರುಗಳಿಗೆ ಬಾಧಿಸುತ್ತಿರುವ ಮಾರಕ ಖಾಯಿಲೆಗಳಿಗೆ ಗುಣಮಟ್ಟದ ಚಿಕಿತ್ಸೆಯನ್ನು ನೀಡುವ ಜೊತೆಗೆ ವಿಶೇಷ ವೈದ್ಯರ ತಂಡ ರಚನೆ ಮಾಡಿ, ಸಂಚಾರಿ ವಾಹನ ಮತ್ತು ಕರಪತ್ರಗಳ ಮುಖಾಂತರ ರೈತರಲ್ಲಿ ಜಾಗೃತಿ ಮೂಡಿಸಬೇಕು ಇಲ್ಲವಾದರೆ ಹೈನೋದ್ಯಮದ ಉಳಿವಿಗಾಗಿ ಸಾವಿರಾರು ಹಸುಗಳ ಸಮೇತ ಇಲಾಖೆ ಮುತ್ತಿಗೆ ಹಾಕಿ ನ್ಯಾಯ ಪಡೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮನವಿ ನೀಡುವಾಗ ಲೋಕೇಶ್, ಐತಾಂಹಳ್ಳಿ ಮಂಜುನಾಥ್, ವೆಂಕಿ, ಶಪಿವುಲ್ಲಾ, ಈಕಂಬಳ್ಳಿ ಮಂಜು, ಸಹದೇವಣ್ಣ,ನಾರಯಣಸ್ವಾಮಿ ಸುಪ್ರೀಂಚಲ, ಸುಧಾಕರ್, ವಿನೋದ್, ವಡಗೂರು ಮಂಜುನಾಥ್ ಮುಂತಾದವರಿದ್ದರು,