ಶ್ರೀನಿವಾಸಪುರ: ಡಾ. ಕೆ.ಸುಧಾಕರ್‌, ಶಾಸಕ ಕೆ.ಆರ್‌.ರಮೇಶ್‌ ಕುಮಾರ್ ಅವರನ್ನು ಕೀಳು ಮಟ್ಟದ ಪದಗಳಿಂದ ನಿಂದಿಸಿದ್ದಾರೆ ಎಂದು ಆಪಾದಿಸಿ ಕಾಂಗ್ರೆಸ್‌ ಕಾರ್ಯಕರ್ತರು ಡಾ. ಸುಧಾಕರ್‌ ಅವರ ಪ್ರತಿಕೃತಿ ದಹಿಸಿದರು.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

ಶ್ರೀನಿವಾಸಪುರ: ಡಾ. ಕೆ.ಸುಧಾಕರ್‌, ಶಾಸಕ ಕೆ.ಆರ್‌.ರಮೇಶ್‌ ಕುಮಾರ್ ಅವರನ್ನು ಕೀಳು ಮಟ್ಟದ ಪದಗಳಿಂದ ನಿಂದಿಸಿದ್ದಾರೆ ಎಂದು ಆಪಾದಿಸಿ ಕಾಂಗ್ರೆಸ್‌ ಕಾರ್ಯಕರ್ತರು ಡಾ. ಸುಧಾಕರ್‌ ಅವರ ಪ್ರತಿಕೃತಿ ದಹಿಸಿದರು. 
ಶ್ರೀನಿವಾಸಪುರ:ಕಾಂಗ್ರೆಸ್‌ ಕಾರ್ಯಕರ್ತರು ವೈದ್ಯಕೀಯ ಸಚಿವ ಡಾ. ಕೆ.ಸುಧಾಕರ್‌, ಶಾಸಕ ಕೆ.ಆರ್‌.ರಮೇಶ್‌ ಕುಮಾರ್ ಅವರನ್ನು ಕೀಳು ಮಟ್ಟದ ಪದಗಳಿಂದ ನಿಂದಿಸಿದ್ದಾರೆ ಎಂದು ಆಪಾದಿಸಿ, ಡಾ. ಸುಧಾಕರ್‌ ಅವರ ಪ್ರತಿಕೃತಿ ದಹಿಸಿದರು.
  ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ದಿಂಬಾಲ ಅಶೋಕ್‌ ಕಾಂಗ್ರೆಸ್‌ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಸಚಿವರಾದ ಕೆ.ಸುಧಾಕರ್‌ ಹಾಗೂ ರೇಣುಕಾಚಾರ್ಯ ಶಾಸಕ ಕೆ.ಆರ್‌.ರಮೇಶ್ ಕುಮಾರ್‌ ಅವರ ಬಗ್ಗೆ ಲಘುವಾಗಿ ಮಾತನಾಡಿರುವುದು ಅವಿವೇಕಾದ ಪರಮಾವಧಿ. ರಮೇಶ್‌ ಕುಮಾರ್‌ ಅವರ ತೇಜೋವಧೆ ಮಾಡುವ ಉದ್ದೇಶದಿಂದ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ ಎಂದು ಹೇಳಿದರು.
  ರೇಣುಕಾಚಾರ್ಯ ಅವರ ವೈಯಕ್ತಿಕ ಬದುಕು, ಅನೈತಿಕ ಚಟುವಟಿಕೆ ರಾಜ್ಯದ ಜನರಿಗೆ ಗೊತ್ತಿದೆ. ರಮೇಶ್‌ ಕುಮಾರ್‌ ಅವರ ಬಗ್ಗೆ ಸಾಕ್ಷಾಧಾರ ಇದ್ದಲ್ಲಿ ಸಂಬಂಧಪಟ್ಟವರಿಂದ ತನಿಖೆ ಮಾಡಿಸಲಿ ಎಂದು ಹೇಳಿದರು.
  ಬಿಜೆಪಿ ಶಾಸಕರು ಹಾಗೂ ಮುಖಂಡರು ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಅವರ ಬಗ್ಗೆ ವಿವೇಚನಾರಹಿತವಾಗಿ ಮಾತನಾಡುವುದನ್ನು ನಿಲ್ಲಿಸದಿದ್ದಲ್ಲಿ, ವಿಧಾನ ಸೌಧದ ಎದುರು ಪ್ರತಭಟನೆ ನಡೆಸಲಾಗುವುದು ಎಂದು ಹೇಳಿದರು.
  ರಾಯಲ್ಪಾಡು ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಸಂಜಯ್‌ ರೆಡ್ಡಿ ಮಾತನಾಡಿ, ಶಾಸಕ ಕೆ.ಆರ್‌.ರಮೇಶ್‌ ಕುಮಾರ್ ಪ್ರಬುದ್ಧ ರಾಜಕಾರಣಿ. ನಾಡು ಕಂಡ ಅಪ್ರತಿಮ ಮುತ್ಸದ್ದಿ. ತಮ್ಮನ್ನು ಆರಿಸಿ ಕಳುಹಿಸಿದ ಜನರಿಗೆ ತಲೆಬಾಗುವ ವ್ಯಕ್ತಿತ್ವ ಅವರದು. ಅವರು ಯಾವುದೇ ಅನ್ಯಾಯ ಅಥವಾ ದೌರ್ಜನ್ಯ ಸಹಿಸಿದವರಲ್ಲ. ಅಂಥ ವ್ಯಕ್ತಿಯ ವ್ಯಕ್ತಿತ್ವಕ್ಕೆ ಮಸಿ ಬಳೆಯುವ ಪ್ರಯತ್ನ ಸಫಲವಾಗುವುದಿಲ್ಲ ಎಂದು ಹೇಳಿದರು.
  ರಮೇಶ್‌ ಕುಮಾರ್ ತಮ್ಮ  ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಶ್ರಮಿಸುತ್ತಿದ್ದಾರೆ. ಜನರಿಗೆ ಅಗತ್ಯವಾದ ಕುಡಿಯುವ ನೀರಿನ ಪೂರೈಕೆಗೆ ಮೊದಲ ಆದ್ಯತೆ ನೀಡಿದ್ದಾರೆ ಎಂದು ಹೇಳಿದರು.
  ರಮೇಶ್‌ ಕುಮಾರ್‌ ಅವರ ಬಗ್ಗೆ ಹಗುರವಾಗಿ ಮಾತನಾಡಿರುವ ವ್ಯಕ್ತಿಗಳು ಕ್ಷಮೆ ಕೇಳಬೇಕು. ಲಘುವಾಗಿ ಮಾತನಾಡುವುದನ್ನು ನಿಲ್ಲಿಸದಿದ್ದಲ್ಲಿ ವಿಧಾನ ಸೌಧಕ್ಕೆ ಕಾಲ್ನಡಿಗೆ ಜಾಥಾ ನಡೆಸಲಾಗುವುದು. ಸಚಿವರ ನಡುವಳಿಕೆ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
  ಕಾಂಗ್ರೆಸ್‌ ಮುಖಂಡರಾದ ಕೆ.ಕೆ.ಮಂಜುನಾಥರೆಡ್ಡಿ, ಸರ್ದಾರ್, ಬಿ.ಆರ್.ಭಾಸ್ಕರ್‌್, ಮುನಿರಾಜು, ಮುನಿಯಪ್ಪ, ವಿಶ್ವನಾಥರೆಡ್ಡಿ, ವೆಂಕಟರೆಡ್ಡಿ ಇದ್ದರು.