ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರ: ಗಾಂಡ್ಲಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್ ಗುದ್ದಲಿ ಪೂಜೆ ನೆರವೇರಿಸಿದರು.
ಶ್ರೀನಿವಾಸಪುರ: ರೈತರು ಉತ್ತಮ ಗುಣಮಟ್ಟದ ಹಾಲು ಉತ್ಪಾದಿಸುವುದರ ಮೂಲಕ ಆರ್ಥಿಕ ಮಟ್ಟ ಉತ್ತಮ ಪಡಿಸಿಕೊಳ್ಳಬೇಕು ಎಂದು ಮೋಚಿಮುಲ್ ನಿರ್ದೇಶಕ ಎನ್.ಹನುಮೇಶ್ ಹೇಳಿದರು.
ತಾಲ್ಲೂಕಿನ ಗಾಂಡ್ಲಹಳ್ಳಿ ಗ್ರಾಮದಲ್ಲಿ ಬುಧವಾರ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಹಾಲು ಉತ್ಪಾದಕರ ಸಹಕಾರ ಸಂಘಗಳು ಗುಣಮಟ್ಟದ ಹಾಲು ಉತ್ಪಾದಿಸಲು ಅಗತ್ಯವಾದ ಸಲಹೆ, ಸೂಚನೆ ನೀಡಬೇಕು. ಹಸುಗಳಿಗೆ ಅಗತ್ಯವಾದ ಪೋಷಕಾಂಶ ಒಳಗೊಂಡ ಆಹಾರ ನೀಡಲು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಕೆಲವು ರೈತರು ಖಾಸಗಿ ಡೇರಿಗಳಿಗೆ ಹಾಲು ಮಾರಾಟ ಮಾಡುತ್ತಿದ್ದಾರೆ. ಹಾಗೆ ಮಾಡುವುರದ ಮೂಲಕ ಕೋಚಿಮುಲ್ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ರೈತರು ಕೋಚಿಮುಲ್‌ಗೆ ಸಂಬಂಧಿಸಿದ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲು ಹಾಕಬೇಕು. ವಿವಿಧ ಸೌಲಭ್ಯ ಪಡೆಯಬೇಕು. ನಂದಿನ ಉತ್ಪನ್ನಗಳು ಕಲಬೆರಕೆ ರಹಿತವಾಗಿದ್ದು, ಹೆಚ್ಚು ಜನಪ್ರಿಯವಾಗುತ್ತಿವೆ ಎಂದು ಹೇಳಿದರು.
ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಗೋಪಾಲಗೌಡ, ಮುಖಂಡರಾದ ಕೆ.ಎಚ್.ಸಂಪತ್ ಕುಮಾರ್, ಲಕ್ಷ್ಮೀನಾರಾಯಣ, ಚೌಡಪ್ಪ, ರಾಜ್ ಕುಮಾರ್, ನಾಗಭೂಷಣ, ಆನಂದ್, ಶ್ರೀನಿವಾಸ್, ನಾರಾಯಣಗೌಡ ಇದ್ದರು