ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಗಣೇಶ ಚತುರ್ಥಿಯನ್ನು ಎಚ್ಚರಿಕೆಯಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಎನ್.ಕೆ.ರಾಘವೇಂದ್ರ ಪ್ರಸಾದ್ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ವಿನಾಯಕ ಚತುರ್ಥಿ ಆಚರಣೆ ಸಂಬಂಧ ಗುರುವಾರ ಏರ್ಪಡಿಸಿದ್ದ ಸಾರ್ವಜನಿಕರ ಶಾಂತಿ ಸಭೆಯಲ್ಲಿ ಮಾತನಾಡಿ, ಕೊರೊನಾ ವೈರಾಣು ಹರಡುವಿಕೆಯನ್ನು ನಿಯಂತ್ರಿಸುವ ದೃಷ್ಟಿಯಿಂದ ವಿನಾಯಕ ವಿಗ್ರಹ ಮೆರವಣಿಗೆ ಮಾಡುವಂತಿಲ್ಲ. ಪೂಜಾ ಕಾರ್ಯ ನೆರವೇರಿಸುವ ಸ್ಥಳದಲ್ಲಿ ಕಡ್ಡಾಯವಾಗಿ ಅಂತರ ಪಾಲನೆ ಮಾಡಬೇಕು. ಮಾಸ್ಕ್ ಧರಿಸಿರಬೇಕು ಎಂದು ಹೇಳಿದರು. ಸರ್ಕಾರದ ಹೊಸ ಮಾರ್ಗಸೂಚಿಯಂತೆ ಯಾವುದೇ ಕಾರಣಕ್ಕೂ 4 ಅಡಿ ಎತ್ತರ ಮೀರಿದ ಗಣೇಶ ವಿಗ್ರಹಗಳನ್ನು ಪೂಜಿಸುವಂತಿಲ್ಲ. ಪರಿಸರ ಸ್ನೇಹಿ ವಿಗ್ರಹಗಳನ್ನು ಮಾತ್ರ ಪೂಜಿಸಬೇಕು. ಅಪಾಯಕಾರಿ ಬಣ್ಣಗಳನ್ನು ಬಳಸಿ ನಿರ್ಮಿಸಿದ ವಿಗ್ರಹಗಳನ್ನು ಪೂಜಿಸುವಂತಿಲ್ಲ. ಎಲ್ಲೆಂದರಲ್ಲಿ ಗಣೇಶ ವಿಗ್ರಹಗಳನ್ನು ಪೂಜಿಸುವಂತಿಲ್ಲ. ಗಣೇಶ ವಿಗ್ರಹ ಸ್ಥಾಪನೆ ಸಾರ್ವಜನಿಕರ ಸಾಮಾನ್ಯ ಜೀವನಕ್ಕೆ ಯಾವುದೇ ಅಡ್ಡಿ ಉಂಟುಮಾಡಬಾರದು ಎಂದು ಹೇಳಿದರು. ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಾರಾಯಣಪ್ಪ, ಮುಖಂಡ ಕೆ.ಕೆ.ಮಂಜುನಾಥರೆಡ್ಡಿ ಇದ್ದರು.ವರದಿ ಶಬ್ಬೀರ್