ಶ್ರೀನಿವಾಸಪುರ: ಅನ್ನ ಭಾಗ್ಯ ಯೋಜನೆಯಡಿ ಅಕ್ಕಿಯನ್ನು ಹಣಕ್ಕಾಗಿ ಮಾರಾಟ ಮಾಡುವ ಪಡಿತರ ಚೀಟಿದಾರರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು : ತಹಶೀಲ್ದಾರ್‌ ಕೆ.ಎನ್‌.ಸುಜಾತ 

JANANUDI.COM NETWORK

 

 

ಶ್ರೀನಿವಾಸಪುರ: ಅನ್ನ ಭಾಗ್ಯ ಯೋಜನೆಯಡಿ ಅಕ್ಕಿಯನ್ನು ಹಣಕ್ಕಾಗಿ ಮಾರಾಟ ಮಾಡುವ ಪಡಿತರ ಚೀಟಿದಾರರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು : ತಹಶೀಲ್ದಾರ್‌ ಕೆ.ಎನ್‌.ಸುಜಾತ 

 

 

ಶ್ರೀನಿವಾಸಪುರ: ಅನ್ನ ಭಾಗ್ಯ ಯೋಜನೆಯಡಿ ನ್ಯಾಯಬೆಲೆ ಅಂಗಡಿಗಳ ಮೂಲಕ ಉಚಿತವಾಗಿ ವಿತರಿಸಲಾಗುವ ಅಕ್ಕಿಯನ್ನು ಹಣಕ್ಕಾಗಿ ಮಾರಾಟ ಮಾಡುವ ಪಡಿತರ ಚೀಟಿದಾರರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದು ತಹಶೀಲ್ದಾರ್‌ ಕೆ.ಎನ್‌.ಸುಜಾತ ತಿಳಿಸಿದ್ದಾರೆ.

  ಪಡಿತರ ಪಡೆದ ಕೆಲವು ಫಲಾನುಭವಿಗಳು ಹಣಕ್ಕಾಗಿ ಕಳ್ಳಸಾಗಾಣಿಕೆದಾರರು ಹಾಗೂ ಅಕ್ರಮ ದಾಸ್ತಾನು ಮಾಡುವವರಿಗೆ ಮಾರಾಟ ಮಾಡುತ್ತಿರು ವಿಷಯ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿದೆ. ಪಡಿತರ ವಸ್ತುಗಳನ್ನು ಹಣಕ್ಕಾಗಿ ಮಾರಾಟ ಮಾಡುವಾಗ ಸಿಕ್ಕಿಬಿದ್ದಲ್ಲಿ ಅಂಥವರ ಪಡಿತರ ಚೀಟಿ ರದ್ದುಪಡಿಸಲಾಗುವುದು ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

  ಪಡಿತರ ವಸ್ತುಗಳನ್ನು ಮಾರಾಟ ಮಾಡುವುದು ಕಂಡುಬಂದಲ್ಲಿ, ಸಾರ್ವಜನಿಕರು  ಪೊಲೀಸ್‌ ಠಾಣೆ ಅಥವಾ ಆಹಾರ ಇಲಾಖೆ ಅಧಿಕಾರಿಗಳಿ ಮಾಹಿತಿ ನೀಡಬೇಕು. ತಹಶೀಲ್ದಾರ್‌ ಕೆ.ಎನ್‌.ಸುಜಾತ (ಮೊಬೈಲ್ ಸಂಖ್ಯೆ 9481569955), ಆಹಾರ ಶಿರಸ್ತೇದಾರ್‌ ಮಂಜುನಾಥ್‌ (9844029644), ಆಹಾರ ನಿರೀಕ್ಷಕರಾದ ಹಬೀಬ್‌ ಊರ್‌ ರೆಹಮಾನ್‌ (9449721985), ಜುನೈದ್‌ ಅಲಂ ಖಾನ್‌ (8328405915) ಅವರ ಮೊಬೈಲ್‌ ಸಂಖ್ಯೆಗಳಿಗೆ ಫೋನ್‌ ಮಾಡಿ ತಿಳಿಸಬಹುದಾಗಿದೆ ಎಂದು ತಿಳಿಸಿದ್ದಾರೆ.