ಶ್ರೀನಿವಾಸಪುರ: ಅಂತರ್ಜಲ ವೃದ್ಧಿಸಲು ನಿರ್ಮಿಸಲಾಗಿರುವ ಚೆಕ್‌ ಡ್ಯಾಮನ್ನು ತಂಡ ವೀಕ್ಷಿಸಿತು.

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ: ಅಂತರ್ಜಲ ವೃದ್ಧಿಸಲು ನಿರ್ಮಿಸಲಾಗಿರುವ ಚೆಕ್‌ ಡ್ಯಾಮನ್ನು ತಂಡ ವೀಕ್ಷಿಸಿತು.

ಶ್ರೀನಿವಾಸಪುರ: ತಾಲ್ಲೂಕಿಗೆ ಭೇಟಿ ನೀಡಿದ್ದ ಜಲಶಕ್ತಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಋತ್ವಿಕ್‌ ಪಾಂಡೆ ನೇತೃತ್ವದ ತಂಡ, ಸರ್ಕಾರ ಅಂತರ್ಜಲ ಅಭಿವೃದ್ಧಿಗಾಗಿ ಕೈಗೊಂಡಿರುವ ಕಾಮಗಾರಿಗಳನ್ನು ಪರಿಶೀಲಿಸಿತು.
  ತಾಲ್ಲೂಕಿನ ನಂಬಿಹಳ್ಳಿ. ಜೆ.ತಿಮ್ಮಸಂದ್ರ, ಕಲ್ಲೂರು, ಕಠಾರಿ ಮುದ್ದಲಹಳ್ಳಿ, ಚಿರುವನಹಳ್ಳಿ ಮತ್ತಿತರ ಗ್ರಾಮಗಳಿಗೆ ಭೇಟಿ ನೀಡಿದ್ದ ತಂಡದ ಸದಸ್ಯರು ಮಳೆ ನೀರು ಸಂಗ್ರಹಿಸಲು ನಿರ್ಮಿಸಲಾಗಿರುವ ಚೆಕ್‌ಡ್ಯಾಂ, ತಡೆಗೋಡೆ, ಹಿಪ್ಪುನೇರಳೆ ತೊಟಕ್ಕೆ ಅಳವಡಿಸಲಾಗಿರುವ ಹನಿ ನೀರಾವರಿಯನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿದರು.
  ಬೇರೆ ಬೇರೆ ಗ್ರಾಮಗಳ ಸಮೀಪ ಕೈಗೊಳ್ಳಲಾಗಿರುವ ಉದ್ಯೋಗ ಖಾತ್ರಿ ಕಾಮಗಾರಿ, ಕೃಷಿ ಭಾಗ್ಯ ಕಾಮಗಾರಿ, ಗೋಕುಂಟೆಗಳ ನಿರ್ಮಾಣ, ಪಿಎಂಜಿಎಸ್‌ವೈ ಕಾಮಗಾರಿಗಳನ್ನು ಪರಿಶೀಲಿಸಿದರು.
   ತಂಡದ ಸದಸ್ಯರಾದ ಡಾ.ಲುಬನಾ ಕೌಸರ್‌, ಕ್ಷೇತ್ರ ನೋಡಲ್‌ ಅಧಿಕಾರಿ ಗುಲಾಂ ಮುಸ್ತಫಾ, ಕೇಂದ್ರ ಅಂತರ್ಜಲ ಅಭಿವೃದ್ಧಿ ಮಂಡಳಿಯ ವಿಜ್ಞಾನಿ ಡಾ.ಲುಬನ್‌ ಕೌಸರ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಆರ್‌.ಎನ್‌.ರಾಜಣ್ಣ, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಅಪ್ಪಿರೆಡ್ಡಿ, ತಾಲ್ಲೂಕು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್‌, ಕೃಷಿ ಅಧಿಕಾರಿ ಮಂಜುನಾಥ್‌, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ರಾಮಪ್ಪ, ನಾರಾಯಣಪ್ಪ ಇದ್ದರು.