ಶ್ರೀನಿವಾಸಪುರ:ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿ ಆರೋಗ್ಯ ರಕ್ಷಣೆಗೆ  ಗಮನ ನೀಡಬೇಕು:ಎಂ.ಎಸ್‌.ಚಂದ್ರಶೇಖರ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ:ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿ ಆರೋಗ್ಯ ರಕ್ಷಣೆಗೆ  ಗಮನ ನೀಡಬೇಕು:ಎಂ.ಎಸ್‌.ಚಂದ್ರಶೇಖರ್
ಶ್ರೀನಿವಾಸಪುರ:ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿ ಆರೋಗ್ಯ ರಕ್ಷಣೆಗೆ  ಗಮನ ನೀಡಬೇಕು.
ಕೊರೊನಾ ಹರಡದಂತೆ ಎಚ್ಚರ ವಹಿಸಬೇಕು ಎಂದು ರಸ್ತೆ ಸಾರಿಗೆ ಸಂಸ್ಥೆಯ ಕೋಲಾರ ವಿಭಾಗದ ನಿಯಂತ್ರಣಾಧಿಕಾರಿ ಎಂ.ಎಸ್‌.ಚಂದ್ರಶೇಖರ್ ಹೇಳಿದರು.
  ಪಟ್ಟಣದ ರಸ್ತೆ ಸಾರಿಗೆ ಸಂಸ್ಥೆ ಡಿಫೋದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಉಚಿತವಾಗಿ ಮಾಸ್ಕ್‌ ವಿತರಿಸಿ ಮಾತನಾಡಿ, ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಯೋಗಕ್ಷೇಮವೂ ಮುಖ್ಯ. ಹಾಗಾಗಿ ಪ್ರಯಾಣಿಕರಿಗೆ ಕೊರೊನಾ ಸೋಂಕು ತಗಲದಂತೆ ಎಚ್ಚರ ವಹಿಸಬೇಕು. ಇಲಾಖೆ ಒದಗಿಸುವ ಸುರಕ್ಷತಾ ಸಾಧನಗಳನ್ನು ತಪ್ಪದೆ ಧರಿಸಬೇಕು ಎಂದು ಹೇಳಿದರು.
  ಸಂಸ್ಥೆಯ ಸ್ಥಳೀಯ ವ್ಯವಸ್ಥಾಪಕ ಎನ್‌.ಜಿ.ಪ್ರಶಾಂತ್‌ ಕುಮಾರ್‌ ಮಾತನಾಡಿ, ಸಂಸ್ಥೆಯ 500 ಸಿಬ್ಬಂದಿಗೆ ಮಾಸ್ಕ್‌ ಹಾಗೂ ರೋಗಾಣು ನಾಶಕ ದ್ರವ ವಿತರಿಸಲಾಗಿದೆ. ಪ್ರಯಾಣಿಕರಿಗೂ ಸಹ ಬಸ್‌ ಹತ್ತುವ ಮುನ್ನ ಕೈಗೆ ರೋಗಾಣು ನಾಶಕ ದ್ರವ ಹಾಕಲಾಗುವುದು. ಬಸ್‌ನಲ್ಲಿ ವೈರಸ್‌ ನಿರೋಧಕ ಔಷಧ ಸಿಂಪಡಣೆ ಮಾಡಲಾಗುವುದು ಎಂದು ಹೇಳಿದರು.
  ಪ್ರಜಾಣಿಕರ ಕೊರತೆಯಿಂದಾಗಿ ಶ್ರೀನಿವಾಸಪುರದಿಂದ ಹೊರಡುವ 20 ಬಸ್‌ಗಳನ್ನು ನಿಲ್ಲಿಸಲಾಗಿದೆ. ಆದರೆ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
  ಅಧಿಕಾರಿಗಳಾದ ರವಿಶಂಕರ್‌, ಅಮರ್‌ನಾಥ್‌, ಅರುಣ್‌ ಕುಮಾರ್‌ ಇದ್ದರು.