ಶ್ರೀನಿವಾಸಪುರದ ಪುಸಭಾ ಕಚೇರಿಯಲ್ಲಿ ಮುಖ್ಯಾಧಿಕಾರಿ ವಿ.ಮೋಹನ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ಬುಧವಾರ ಬಜೆಟ್‌ ಪೂರ್ವಭಾವಿ ಸಭೆ ಏರ್ಪಡಿಸಲಾಗಿತ್ತು.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರದ ಪುಸಭಾ ಕಚೇರಿಯಲ್ಲಿ ಮುಖ್ಯಾಧಿಕಾರಿ ವಿ.ಮೋಹನ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ಬುಧವಾರ ಬಜೆಟ್‌ ಪೂರ್ವಭಾವಿ ಸಭೆ ಏರ್ಪಡಿಸಲಾಗಿತ್ತು. 
ಶ್ರೀನಿವಾಸಪುರ: ಪಟ್ಟಣದ ಪುಸಭಾ ಕಚೇರಿಯಲ್ಲಿ ಮುಖ್ಯಾಧಿಕಾರಿ ವಿ.ಮೋಹನ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ಬುಧವಾರ 2020 – 21 ರ ಬಜೆಟ್‌ ಪೂರ್ವಭಾವಿ ಸಭೆ ಏರ್ಪಡಿಸಲಾಗಿತ್ತು.
  ಕುಡಿಯುವ ನೀರು ಪೂರೈಕೆಗೆ ಮೊದಲ ಆದ್ಯತೆ ನೀಡಬೇಕು. ಪಟ್ಟಣದ ಎಲ್ಲ ಬಡಾವಣೆಗಳು ಹಾಗೂ ಹೊರ ವಲಯದ ರಸ್ತೆಗಳಲ್ಲಿ ವಿದ್ಯುತ್ ದೀಪ ಅಳವಡಿಸಬೇಕು. ಅಗತ್ಯ ಇರುವೆಡೆಗಳಲ್ಲಿ ಆದ್ಯತೆ ಮೇರೆಗೆ ಸಿಮೆಂಟ್‌ ರಸ್ತೆ ನಿರ್ಮಿಸಬೇಕು. ಪಟ್ಟಣದಲ್ಲಿ ಸೂಕ್ತ ಸ್ಥಳದಲ್ಲಿ ಉದ್ಯಾನ ನಿರ್ಮಿಸಬೇಕು. ಪಟ್ಟಣದಾದ್ಯಂತ ಸಿಸಿ ಕ್ಯಾಮೆರಾ ಅಳವಿಸಬೇಕು. ಶವ ಸಾಗಾಣಿಕೆ ವಾಹನ ಹಾಗೂ ಶಿವ ಪೆಟ್ಟಿಗೆ ಖರಿದಿಸಬೇಕು ಎಂದು ನಾಗರಿಕರು ಸಲಹೆ ಮಾಡಿದರು.
  ಮುಖ್ಯಾಧಿಕಾರಿ ವಿ.ಮೋಹನ್‌ ಕುಮಾರ್‌ ಮಾತನಾಡಿ, ಬಜೆಟ್‌ ತಯಾರಿಸುವಾಗ ನಾಗರಿಕರು ಹಾಗೂ ಸದಸ್ಯರು ಕೊಟ್ಟಿರುವ ಸಲಹೆಗಳನ್ನು ಪರಿಗಣಿಸಲಾಗುವುದು ಎಂದು ತಿಳಿಸಿದರು.
  ಪುರಸಭೆ ಆರೋಗ್ಯ ನಿರೀಕ್ಷಕ ಕೆ.ವಿ.ರಮೇಶ್‌, ಪರಿಸರ ನಿರೀಕ್ಷಕ ಡಿ.ಶೇಕರರೆಡ್ಡಿ, ಸಿಇಒ ರಾಜೇಶ್ವರಿ, ಸದಸ್ಯರಾದ ಬಿ.ವೆಂಕಟರೆಡ್ಡಿ, ಶ್ರೀನಿವಾಸ್‌, ಅನೀಸ್‌ ಅಹ್ಮದ್‌, ಸರ್ದಾರ್‌, ರಾಜು, ನಾಗರಾಜ್‌, ಸಿಬ್ಬಂದಿ ವನಜಾಕ್ಷಮ್ಮ, ಸಂತೋಷ್‌, ನಾಗೇಶ್‌ ಇದ್ದರು.