ಶ್ರೀನಿವಾಸಪುರದ ತಾಲ್ಲೂಕು ಕಚೇರಿ ಎದುರು ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು, ಮಹಿಳೆಯೊಬ್ಬರ ಸಾವಿಗೆ ಕಾರಣರಾದ ಇಬ್ಬರು ಮೀಟರ್‌ ಬಡ್ಡಿ ದಂಧೆಕೋರನ್ನು ಬಂಧಿಸುವಂತೆ ಆಗ್ರಹಿಸಿ ಮಂಗಳವಾರ ಧರಣಿ ನಡೆಸಿದರು.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರದ ತಾಲ್ಲೂಕು ಕಚೇರಿ ಎದುರು ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು, ಮಹಿಳೆಯೊಬ್ಬರ ಸಾವಿಗೆ ಕಾರಣರಾದ ಇಬ್ಬರು ಮೀಟರ್‌ ಬಡ್ಡಿ ದಂಧೆಕೋರನ್ನು ಬಂಧಿಸುವಂತೆ ಆಗ್ರಹಿಸಿ ಮಂಗಳವಾರ ಧರಣಿ ನಡೆಸಿದರು.
ಶ್ರೀನಿವಾಸಪುರ: ಪಟ್ಟಣದ ಶ್ರೀನಿವಾಸಪುರದ ತಾಲ್ಲೂಕು ಕಚೇರಿ ಎದುರು ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು, ಮಹಿಳೆಯೊಬ್ಬರ ಸಾವಿಗೆ ಕಾರಣರಾದ ಇಬ್ಬರು ಮೀಟರ್‌ ಬಡ್ಡಿ ದಂಧೆಕೋರನ್ನು ಬಂಧಿಸುವಂತೆ ಆಗ್ರಹಿಸಿ ಮಂಗಳವಾರ ಧರಣಿ ನಡೆಸಿದರು.
  ದಲಿತ ಮುಖಂಡರಾದ ರಾಮಾಂಜಮ್ಮ ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿ, ಪಟ್ಟಣದ ರಾಮಕೃಷ್ಣ ಬಡಾವಣೆಯ ರೇಣುಕಮ್ಮ ಹಾಗೂ ಅವರ ಮಗ ಸುನಿಲ್‌ ಎಂಬುವವರು ತಾಲ್ಲೂಕಿನ ದೇವಲಪಲ್ಲಿ ಗ್ರಾಮದ ತಿರುಮಲೇಶ್‌ ಅವರಿಗೆ ಮೀಟರ್ ಬಡ್ಡಿಗೆ ಸಾಲ ನೀಡಿದ್ದರು. ಈಚೆಗೆ ಒಂದು ಬಾರಿ ಸಾಲದ ಕಂತು  ನೀಡುವುದು ತಡವಾದ ಕಾರಣ, ತಿರುಮಲೇಶ್‌ ಅವರನ್ನು ಗೃಹಬಂಧನದಲ್ಲಿಟ್ಟು, ಅವರ ಪತ್ನಿ ಲಕ್ಷ್ಮಿದೇವಮ್ಮ ಅವರಿಗೆ ದೂರವಾಣಿ ಮೂಲಕ ಬೆದರಿಕೆ ಹಾಕಿದ ಪರಿಣಾಮವಾಗಿ, ಅವರು ಹೆದರಿ ಗ್ರಾಮದ ಕುಂಟೆಯಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿದ್ದರು ಎಂದು ಹೇಳಿದರು.
  ಪೊಲೀಸರು ಲಕ್ಷ್ಮಿದೇವಮ್ಮ ಅವರ ಸಾವಿಗೆ ಕಾರಣರಾದ ಆಪಾದಿತರನ್ನು ಶೀಘ್ರವಾಗಿ ಬಂಧಿಸಬೇಕು. ಅವರಿಗೆ ಕಾನೂನಿನಂತೆ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
  ದಲಿತ ಮುಖಂಡ ಚಲ್ದಿಗಾನಹಳ್ಳಿ ಈರಪ್ಪ ಮತ್ತಿತರರು ಕ್ರಾಂತಿ ಗೀತೆಗಳನ್ನು ಹಾಡಿ, ಆಪಾದಿತರನ್ನು ಬಂಧಿಸುವಂತೆ ಒತ್ತಾಯಿಸಿದರು.