ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರದ ತಾಲ್ಲೂಕು ಕಚೇರಿ ಮುಂದೆ, ಅರಣ್ಯ ಇಲಾಖೆ ಅಧಿಕಾರಿಗಳು ಅಕ್ರಮವಗಿ ರೈತರ ಜಮೀನು ವಶ: ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಕಾರ್ಯಕರ್ತರು ರೈತರು ಪ್ರತಿಭಟನೆ.

ಶ್ರೀನಿವಾಸಪುರ: ಅರಣ್ಯ ಇಲಾಖೆ ಅಧಿಕಾರಿಗಳು ಅಕ್ರಮವಗಿ ರೈತರ ಜಮೀನು ವಶಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ, ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಕಾರ್ಯಕರ್ತರು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪಾತಕೋಟ ನವೀನ್ ಕುಮಾರ್ ಪ್ರತಿಭಟನೆ ನರತರನ್ನು ಉದ್ದೇಶಿಸಿ ಮಾತನಾಡಿ, ರಾಯಲ್ಪಾಡು ಹೋಬಳಿಗೆ ಸೇರಿದ ರಾಯಲ್ಪಾಡು ಗ್ರಾಮದ ಸರ್ವೆ ನಂ.169 ಮತ್ತು 270, ಕಂಡ್ಲೇವಾರಿಪಲ್ಲಿ ಗ್ರಾಮದ ಸರ್ವೆ ನಂ.141 ಯಂಡಗುಟ್ಟಪಲ್ಲಿ ಗ್ರಾಮದ ಸರ್ವೆ ನಂ.15, ಮದರಂಕಪಲ್ಲಿ ಗ್ರಾಮದ ಸರ್ವೆ ನಂ. 47 ರಲ್ಲಿ ರೈತರು ಕೃಷಿ ಮಾಡುತ್ತಿದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಜಮೀನು ಪ್ರವೇಶಿಸಿ ಚೆಕ್ಕು ಬಂದಿ ನಿರ್ಮಿಸುತ್ತಿದ್ದಾರೆ ಎಂದು ಹೇಳಿದರು.
ರೈತರು ಸದರಿ ಜಮೀನಲ್ಲಿ ಸುಮಾರು ನಾಲ್ಕೈದು ದಶಕಗಳಿಂದ ಅಬಾಧಿತವಾಗಿ ಕೃಷಿ ಮಾಡುತ್ತಿದ್ದಾರೆ. ರೈತರ ಹೆಸರಲ್ಲಿ ಸಾಗುವಳಿ ಚೀಟಿ, ಪಹಣಿ, ಇಸಿ, ಮುಟೇಷನ್ ಸೇರಿದಂತೆ ಎಲ್ಲ ದಾಖಲೆಗಳೂ ಇವೆ. ಈಗಾಗಲೇ ಇಲ್ಲಿನ ರೈತರು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಸೌಲಭ್ಯ ಪಡೆಯುತ್ತಿದ್ದಾರೆ. ವಿದ್ಯುತ್ ಸಂಪರ್ಕ ನೀಡಲಾಗಿದೆ. ಬ್ಯಾಕ್ ಸಾಲ ಪಡೆಯಲಾಗಿದೆ. ಇಷ್ಟಾದರೂ ಸಂಬಂಧಪಟ್ಟ ರೈತರ ಗಮನಕ್ಕೆ ತರದೆ ಜಮೀನಿಗೆ ಹದ್ದುಬಸ್ತು ನಿರ್ಮಿಸಲಾಗಿದೆ ಎಂದು ಹೇಳಿದರು.
ಬೆಂಗಳೂರು – ಕಡಪ ರಸ್ತೆ ಅಭಿವೃದ್ಧಿ ಪಡಿಸಲು, ಅಂತರ ರಾಜ್ಯ ರಸ್ತೆ ಅಭಿವೃದ್ಧಿ ಅಧಿಕಾರಿಗಳು ರೈತರೊಂದಿಗೆ ಚರ್ಚಿಸಲು ಬಂದಾಗ, ಅರಣ್ಯ ಇಲಾಖೆ ಅಧಿಕಾರಿಗಳು ಮಧ್ಯ ಪ್ರವೇಶಿಸಿ, ಆ ಜಮೀನಿಗೂ ರೈತರಿಗು ಸಂಬಂಧವಿಲ್ಲ ಎಂದು ಹೇಳುವುದರ ಮೂಲಕ ರೈತರ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿದರು.
ತಾಲ್ಲೂಕಿನ ತಹಶೀಲ್ದಾರರು, ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳು, ರೈತ ಸಂಘದ ಮುಖಂಡರು ಹಾಗೂ ರೈತರ ಸಭೆ ಕರೆಯಬೇಕು. ರೈತರಿಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ತಹಶೀಲ್ದಾರ್ ಕೆ.ಎನ್.ಸುಜಾತ ಅವರಿಗೆ ನೀಡಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ, ತಾಲ್ಲೂಕು ಘಟಕದ ಕಾರ್ಯದರ್ಶಿ ಎಸ್.ಎಂ.ನಾಗರಾಜ್, ಉಪಾಧ್ಯಕ್ಷರಾದ ಆರ್.ವೆಂಕಟೇಶ್, ನಂಜುಂಡಪ್ಪ, ಸಹ ಕಾರ್ಯದರ್ಶಿ ಬಿ.ಎ.ಸೈಯದ್ ಫಾರೂಕ್, ಮಖಂಡರಾದ
ನಾಗರಾಜ್, ನಾಗರಾಜರೆಡ್ಡಿ, ನರಸಿಂಹಮೂರ್ತಿ, ಅಲ್ಲಾಬಕಾಶ್, ವಿಶ್ವನಾಥರೆಡ್ಡಿ, ಮೋಹನ್ ಬಾಬು, ಸಿ.ವಿ.ಸುದಾಕರೆಡ್ಡಿ, ಸಿ.ಎನ್.ಸುಬ್ಬುಕೃಷ್ಣ, ನಾಗರಾಜಪ್ಪ, ಜಿ.ವಿ.ಲಕ್ಷ್ಮೀಪತಿ ನಾಯಕ್, ನಾರಾಯಣರೆಡ್ಡಿ, ಎ.ಎಸ್.ಇಂದ್ರಾಣಿ, ಓಬನ್ನ, ಷಾನವಾಜ್, ರೆಡ್ಡಪ್ಪ ಇದ್ದರು.