ಶ್ರೀನಿವಾಸಪುರದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಸ್ವಚ್ಛತಾ ದಿನಾಚರಣೆ ಪ್ರಯುಕ್ತ ನ್ಯಾಯಾಧೀಶರರು ಹಾಗೂ ವಕೀಲರು ನ್ಯಾಯಾಲಯದ ಆವರಣ ಸ್ವಚ್ಛಗೊಳಿಸಿದರು.  

ವರದಿ ಶಬ್ಬೀರ್ ಅಹಮದ್ ಶ್ರೀನಿವಾಸಪುರ
ಶ್ರೀನಿವಾಸಪುರದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಸ್ವಚ್ಛತಾ ದಿನಾಚರಣೆ ಪ್ರಯುಕ್ತ ನ್ಯಾಯಾಧೀಶರರು ಹಾಗೂ ವಕೀಲರು ನ್ಯಾಯಾಲಯದ ಆವರಣ ಸ್ವಚ್ಛಗೊಳಿಸಿದರು.  
ಶ್ರೀನಿವಾಸಪುರ: ಜನರು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪರಿಸರ ಮಾಲಿನ್ಯ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಪ್ರಧಾನ ಸಿವಿಲ್‌ ನ್ಯಾಯಾಧೀಶ ಎಚ್‌.ಆರ್‌.ದೇವರಾಜು ಹೇಳಿದರು.
 ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಸ್ವಚ್ಛತಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಉತ್ತಮ ಆರೋಗ್ಯಕ್ಕಾಗಿ ಸ್ವಚ್ಛ ಪರಿಸರದ ಅಗತ್ಯವಿದೆ. ಆದರೆ ಜನರು ವಿವೇಚನಾ ರಹಿತವಾಗಿ ಪರಿಸರಕ್ಕೆ ಹಾನಿ ಉಂಟುಮಾಡುತ್ತಿದ್ದಾರೆ. ಇದರಿಂದ ಜೀವ ಜಗತ್ತಿಗೆ ಹಾನಿ ಉಂಟಾಗುತ್ತಿದೆ ಎಂದು ಹೇಳಿದರು.
  ಸಮಾಜದ ಎಲ್ಲ ವರ್ಗದ ಜನರೂ ಸ್ವಚ್ಛ ಪರಿಸರ ನಿರ್ಮಾಣ ಕಾರ್ಯಕ್ಕೆ ಕೈ ಜೊಡಿಸಬೇಕು. ಪರಿಸರ ರಕ್ಷಣೆ ಎಲ್ಲರ ಹೊಣೆ ಎಂಬುದನ್ನು ಮರೆಯಬಾರದು. ಪರಿಸರ ಶುದ್ಧವಾಗಿದ್ದಲ್ಲಿ ಅನಾರೋಗ್ಯ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ ಎಂದು ಹೇಳಿದರು.
  ಅಪರ ಸಿವಿಲ್‌ ನ್ಯಾಯಾಧೀಶ ನಾಗೇಶ್‌ ನಾಯ್ಕ ಮಾತನಾಡಿ, ಸರ್ಕಾರಗಳು ಪರಿಸರ ಮಾಲೀನ್ಯ ತಡೆಗೆ ಪೂರಕವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದರೂ ಹಲವು ಸಾಂಕ್ರಾಮಿಕ ರೋಗಗಳು ಬೇರೆ ದೇಶಗಳಿಂದ ಹರಡುತ್ತಿವೆ. ನಾಗರಿಕರು ಆ ಬಗ್ಗೆ ಎಚ್ಚರ ವಹಸಿಸದಿದ್ದರೆ ಅಪಾಯ ತಪ್ಪಿದ್ದಲ್ಲ. ಆದ್ದರಿಂದ ವೈಯಕ್ತಿಕ ಹಾಗೂ ಪರಿಸರ ಸ್ವಚ್ಛತೆಗೆ ಮಹತ್ವ ನೀಡಬೇಕು ಎಂದು ಹೇಳಿದರು.
  ನ್ಯಾಯಾಲಯಕ್ಕೆ ಬರುವ ಕಕ್ಷಿದಾರರು, ನ್ಯಾಯಾಲಯದ ಆವರಣ ಸ್ವಚ್ಛತೆಗೆ ಗಮನ ನೀಡಬೇಕು. ಪ್ಲಾಸ್ಟಿಕ್‌ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು. ಪ್ರತಿಯೊಬ್ಬರು ಸಂವಿಧಾನ ನೀಡಿರುವ ಹಕ್ಕುಗಳು ಹಾಗೂ ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳಬೇಕು. ಸಂವಿಧಾನವನ್ನು ಗೌರವಿಸಿ ಸ್ವೀಕರಿಸಬೇಕು ಎಂದು ಹೇಳಿದರು.
  ವಕೀಲರ ಸಂಘದ ಮಾಜಿ ಅಧ್ಯಕ್ಷ ಟಿ.ವೆಂಕಟೇಶ್‌ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ಲಾಸ್ಟಿಕ್‌ ವಸ್ತುಗಳನ್ನು ಸುಡುವುದರಿಂದ ಪರಿಸರಕ್ಕೆ ಹೆಚ್ಚು ಹಾನಿ ಉಂಟಾಗುತ್ತದೆ. ಪ್ಲಾಸ್ಟಿಕ್‌ ಪದಾರ್ಥ ಭೂಮಿಗೆ ಸೇರಿದರೆ ಭೂ ಮಾಲೀನ್ಯ ಉಂಟಾಗುತ್ತದೆ. ಅದು ಜೀವ ಜಗತ್ತಿಗೆ ಹಾನಿ ಉಂಟುಮಾಡುತ್ತದೆ ಎಂದು ಹೇಳಿದರು.
  ವಕೀಲ ಜೆ.ಎನ್‌.ಶಂಕರಪ್ಪ ನಾಯ್ಕ ಸಂವಿಧಾನ ನೀಡಿರುವ ಹಕ್ಕು ಹಾಗೂ ಕರ್ತವ್ಯಗಳ ಬಗ್ಗೆ ಮಾತನಾಡಿದರು. ವಕೀಲ ಎಂ.ನಾಗರಾಜ್‌ ಸ್ವಚ್ಛ ಭಾರತ್ ಕುರಿತು ಉಪನ್ಯಾಸ ನೀಡಿದರು.
  ವಕೀಲರ ಸಂಘದ ಕಾರ್ಯದರ್ಶಿ ಕೆ.ಎಸ್‌.ಶ್ರೀನಿವಾಸ್‌, ವಕೀಲರಾದ ರಾಜಗೋಪಾಲರೆಡ್ಡಿ, ಟಿ.ವಿ.ನಾರಾಯಣಸ್ವಾಮಿ, ರೂಪ, ಕೆ.ಶಿವಪ್ಪ, ವಿನಯ್‌ ಕುಮಾರ್‌, ಅರ್ಜುನ್‌, ಸೌಭಾಗ್ಯಮ್ಮ, ಪಿ.ಸಿ.ನಾರಾಯಣಸ್ವಾಮಿ, ಶಿರಸ್ತೇದಾರ್‌ ಬಿ.ಎಂ.ಸರ್ವಮಂಗಳಾದೇವಿ, ಸಿ.ಡಿ.ಭಾರತಿಬಾಯಿ ಇದ್ದರು.
  ಈ ಸಂದರ್ಭದಲ್ಲಿ ನ್ಯಾಯಾಧೀಶರ ನೇತೃತ್ವದಲ್ಲಿ ವಕೀಲರು ನ್ಯಾಯಾಲಯದ ಆವರಣ ಸ್ವಚ್ಛಗೊಳಿಸಿದರು.