ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರದಲ್ಲಿ ಶುಕ್ರವಾರ ಏರ್ಪಡಿಸಿದ್ದ ರೋಟರಿ ಶ್ರೀನಿವಾಸಪುರ ಸೆಂಟ್ರಲ್ ನೂತನ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಪದಗ್ರಹಣ ಸಮಾರಂಭವನ್ನು ಗಿಡಕ್ಕೆ ೆ ನೀರು ಹಾಕುವುದರ ಮೂಲಕ ಗಣ್ಯರು ಉದ್ಘಾಟಿಸಿದರು.
ಶ್ರೀನಿವಾಸಪುರ: ರೋಟರಿ ಶ್ರೀನಿವಾಸಪುರ ಸೆಂಟ್ರಲ್ ವತಿಯಿಂದ ಮಳೆ ನೀರು ಕೊಯಿಲು ಹಾಗೂ ಪುಷ್ಕರಣಿಗಳ ಪುನಶ್ಚೇತನಕ್ಕೆ ಆದ್ಯತೆ ನೀಡಲಾಗುವುದು ಎಂದು ಸೆಂಟ್ರಲ್ನ ನೂತನ ಅಧ್ಯಕ್ಷ ಆರ್.ವಿ.ಕುಲಕರ್ಣಿ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಆಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿ, ಈ ಸಂಸ್ಥೆಯ ವತಿಯಿಂದ ಈಗಾಗಲೇ ಹಲವಾರು ಶೈಕ್ಷಣಿಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಬಡವರ ಆರ್ಥಿಕಾಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅದನ್ನು ಮುಂದುವರಿಸಿಕೊಂಡು ಹೋಗಲಾಗುವುದು ಎಂದು ಹೇಳಿದರು.
ಪರಿಸರ ಮಾಲೀನ್ಯ ತಡೆಯುವ ಉದ್ದೇಶದಿಂದ ತಾಲ್ಲೂಕಿನಲ್ಲಿ 1 ಕೋಟಿ ಗಿಡ ನೆಡುವ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಮಳೆ ನೀರು ಸಂರಕ್ಷಣೆಯಲ್ಲಿ ಸಮುದಾಯವನ್ನು ತೊಡಗಿಸಿಕೊಳ್ಳಲಾಗುವುದು. ಆಯ್ದ ಕೆರೆಗಳಲ್ಲಿ ಹೂಳು ತೆಗೆಯಲಾಗುವುದು ಎಂದು ಹೇಳಿದರು.
ಹಸಿರು ಪರಿಸರ ಮೂಡಿಸುವುದು ಇಂದಿನ ಅಗತ್ಯವಾಗಿದೆ. ಈ ವಿಷಯದಲ್ಲಿ ರೋಟರಿ ಸಂಸ್ಥೆ ದೃಢ ನಿರ್ಧಾರದೊಂದಿಗೆ ಕಾರ್ಯಕ್ರಮ ರೂಪಿಸಿ ಜಾಗಿಗೆ ತರಬೇಕು. ಸಾಧ್ಯವಿರುವ ಎಲ್ಲ ಕಡೆ ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಬೆಳೆಸಬೇಕು. ಈ ವಿಷಯದಲ್ಲಿ ವಿದ್ಯಾರ್ಥಿಗಳು ಹಾಗೂ ಸಮಾಜ ಸೇವಾ ಸಂಸ್ಥೆಗಳ ಸಹಾಯ ಪಡೆಯಬೇಕು ಎಂದು ಸಂಸ್ಥೆಯ ಜಿಲ್ಲಾ ಗೌರ್ನರ್ ನಾಗೇಂದ್ರ ಪ್ರಸಾದ್ ಹೇಳಿದರು.
ರೊಟರಿ ಸಂಸ್ಥೆಯ ಜೋನ್ ಗೌರ್ನರ್ ರಾಮಚಂದ್ರೇಗೌಡ, ಸಹಾಯಕ ಗೌರ್ನರ್ ಬಿ.ಕೆ.ದೇವರಾಜ್, ನೂತನ ಕಾರ್ಯದರ್ಶಿ ಎನ್.ಕೃಷ್ಣಮೂರ್ತಿ, ಮುಖಂಡರಾದ ಎಸ್.ವಿ.ಸುಧಾಕರ್, ಎಸ್.ವಿ.ಮಂಜುನಾಥರೆಡ್ಡಿ, ಎಸ್.ಶಿವಮೂರ್ತಿ, ಬೈರೇಗೌಡ, ಆ.ಮು.ಲಕ್ಷ್ಮೀನಾರಾಯಣ, ಎಲ್.ಗೋಪಾಲಕೃಷ್ಣ, ಎನ್.ನಾಜೇಂದ್ರಪ್ರಸಾದ್ ಇದ್ದರು.