ವ್ಯಕ್ತಿ ಹಾಗೂ ದೇಶದ ಅಭಿವೃದ್ಧಿಯಲ್ಲಿ ಎಲ್‌ಐಸಿ ಪಾತ್ರ ಹಿರಿದು. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಪಾಲಸಿಯ ಮೂಲಕ, ಅವರ ಭವಿಷ್ಯಕ್ಕೆ ಆಧಾರ ಕಲ್ಪಿಸಬೇಕು ;ಸತೀಶ್‌

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ: ವ್ಯಕ್ತಿ ಹಾಗೂ ದೇಶದ ಅಭಿವೃದ್ಧಿಯಲ್ಲಿ ಎಲ್‌ಐಸಿ ಪಾತ್ರ ಹಿರಿದು. ಸಂಸ್ಥೆಯ ಪ್ರತಿನಿಧಿಗಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಪಾಲಸಿ ಪಡೆಯುವುದರ ಮೂಲಕ, ಅವರ ಭವಿಷ್ಯಕ್ಕೆ ಆಧಾರ ಕಲ್ಪಿಸಬೇಕು ಎಂದು ಎಲ್‌ಐಸಿ ಶಾಖಾ ವ್ಯವಸ್ಥಾಪಕ ಸತೀಶ್‌ ಹೇಳಿದರು.
  ಪಟ್ಟಣದ ಎಲ್‌ಐಸಿ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸದ್ದ ಎಲ್‌ಐಸಿ ಪ್ರತಿನಿಧಿಗಳು ಹಾಗೂ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ 500 ಮಂದಿಗೆ ಪರಿಹಾರ ನೀಡಲಾಗಿದೆ. ಜನರಲ್ಲಿ ಭವಿಷ್ಯಕ್ಕಾಗಿ ಉಳಿತಾಯ ಮಾಡುವುದನ್ನು ಕಲಿಸುವುದು ಅತ್ಯಗತ್ಯ ಎಂದು ಹೇಳಿದರು.    ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ರವೀಂದ್ರಯ್ಯ ಆರ್‌.ಕುಲಕರ್ಣಿ ಮಾತನಾಡಿ, ಜನರಲ್ಲಿ ಎಲ್‌ಐಸಿ ಬಗ್ಗೆ ವಿಶ್ವಾಸವಿದೆ. ಅದನ್ನು ಬಳಸಿಕೊಂಡು ಹೆಚ್ಚು ಪಾಲಸಿಗಳನ್ನು ಮಾಡಿಸಬೇಕು. ಹಾಗೆ ಮಾಡಿದಲ್ಲಿ ಪ್ರತಿನಿಧಿಗಳಿಗೆ ಲಾಭವಾಗುವುದರ ಜತೆಗೆ ಸಂಸ್ಥೆಯೂ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.