ವಿಶ್ವಮಾನವ ಕುವೆಂಪು ಫೌಂಡೇಶನ್ 3 ನೇ ಕುರುಬರಪೇಟೆಯ ನಿವೃತ್ತ ಯೋಧ ಪಿ.ನಾರಾಯಣಪ್ಪನವರ ಮನೆಯಲ್ಲಿ 2020-21ನೇ ಸಾಲಿನ ಜಿಲ್ಲಾ ಮಟ್ಟದ ಕುವೆಂಪು ಅನಿಕೇತನ ಪ್ರಶಸ್ತಿ ಪ್ರಧಾನ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : ವಿಶ್ವಮಾನವ ಕುವೆಂಪು ಫೌಂಡೇಶನ್ (ವಿಕೆಎಫ್) ವತಿಯಿಂದ ಕೋಲಾರದ 3 ನೇ ಮುಖ್ಯರಸ್ತೆಯ ಕುರುಬರಪೇಟೆಯಲ್ಲಿನ ನಿವೃತ್ತ ಯೋಧ ಪಿ.ನಾರಾಯಣಪ್ಪನವರ ಮನೆಯಲ್ಲಿ 2020-21ನೇ ಸಾಲಿನ ಜಿಲ್ಲಾ ಮಟ್ಟದ ಕುವೆಂಪು ಅನಿಕೇತನ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಆಯೋಜಿಸಲಾಗಿತ್ತು.
ಪತ್ರಕರ್ತರ ಸಂಘದ ನಿಕಟಪೂರ್ವ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ರವರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಪ್ರತಿದಿನ ಮಾಡುವ ನಿರಂತರವಾದ ಸಾಂಸ್ಕøತಿಕ ಕಾರ್ಯಕ್ರಮಗಳಿಂದ ನೈಜ ಸಾಹಿತ್ಯ ಸಾಧಕರ ಪರಿಚಯ ಎಂಬುದು ಬೃಹತ್ ಕಾರ್ಯಕ್ರಮಗಳಿಂದಲೇ ಅಲ್ಲ, ಅದು ಕಿರು ಕಾರ್ಯಕ್ರಮಗಳಿಂದಲೂ ಸಹ ಸಾಧ್ಯ. ಎಲ್ಲಾ ಸಹೃದಯರು ಸೇರುವ ಮೂಲಕ ಸಾಂಸ್ಕೃತಿಕ ತೇರನ್ನು ಎಳೆಯುವ ಮೂಲಕ ಚಿನ್ನದ ಜಿಲ್ಲೆಯಲ್ಲಿ ಪಸರಿಸುವ ಕೆಲಸ ಆಗಲಿ ಎಂದರು.

ನಿವೃತ್ತ ಯೋಧ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಪಿ.ನಾರಾಯಣಪ್ಪ ನವರಿಗೆ 2020-21 ನೇ ಸಾಲಿನ ಕುವೆಂಪು ಅನೀಕೆತನ ಪ್ರಶಸ್ತಿಯನ್ನು ಪ್ರಧಾನ ಮಾಡಿದ ಮನ್ವಂತರ ಜನಸೇವಾ ಟ್ರಸ್ಟ್ (ರಿ.) ಸಂಸ್ಥಾಪಕ ಕಾರ್ಯದರ್ಶಿ ಪಾ.ಶ್ರೀ. ಅನಂತರಾಮ್ ಮಾತನಾಡುತ್ತಾ ದೇಶ ಸೇವೆಯೇ ಈಶ ಸೇವೆ ಎಂದು ಸದಾ ಸಾರ್ಥಕತೆಯ ಕೆಲಸ ಮಾಡಿ, ಕನ್ನಡಪರ ಹೋರಾಟಗಳು, ಗೋಕಾಕ್ ಚಳುವಳಿಯಲ್ಲಿನ ಕನ್ನಡ ರಕ್ಷಣೆಯ ಕಾರ್ಯ ಮಾಡಿದ ಪಿ.ನಾರಾಯಣಪ್ಪನವರಿಗೆ ಪ್ರಶಸ್ತಿ ನೀಡುತ್ತಿರುವುದು ನಿಜಕ್ಕೂ ಅಭಿನಂದನೀಯ ಎಂದರು.

ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾಧ್ಯಕ್ಷ ಜಿ.ಶ್ರೀನಿವಾಸ್ ರವರು ಮಾತನಾಡುತ್ತಾ ಪ್ರಶಸ್ತಿಗಳು ಎಂಬುದು ಜನಸಾಮಾನ್ಯರ ಬಳಿಗೆ, ಅದರಲ್ಲೂ ಸಹ ನಿಜವಾದ ಸಾಧಕರಿಗೆ ತಲುಪುವ ಕೆಸಲವನ್ನು ವಿಶ್ವಮಾನವ ಕುವೆಂಪು ಫೌಂಡೇಶನ್ ಮಾಡುವ ಮೂಲಕ ಈ ನೆಲದ ದೇಶ ಸೇವೆ ಮಾಡಿದ ನಿವೃತ್ತ ಯೋಧರನ್ನು ಗುರ್ತಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿರುವುದು ಬಹಳ ಪ್ರಶಂಸನೀಯ ಎಂದರು.

ಕನ್ನಡ ಉಪನ್ಯಾಸಕ ಅಶ್ವಥ್‍ಗೌಡ ಮಾತನಾಡುತ್ತಾ ಸಮಾಜಮಖಿ ಸೇವೆಗಳು ವಿ.ಕೆ.ಎಫ್ ನಿಂದ ಹೀಗೆ ನಿತ್ಯ ನಿರಂತರವಾಗಿ ಸಾಗಲಿ, ಇಂದಿನ ಜಿಲ್ಲಾ ಮಟ್ಟದ ಕುವೆಂಪು ಅನಿಕೇತನ ಪ್ರಶಸ್ತಿಯನ್ನು ನಿಜವಾದ ಸಾಧಕರಿಗೆ ತಲುಪಿಸಿರುವುದು ನಿಜಕ್ಕೂ ಸಾರ್ಥಕ ಕೆಲಸ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೋಲಾರ ಜಿಲ್ಲಾ ಕನ್ನಡ ಭಾಷಾ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಜೆ.ಜಿ.ನಾಗರಾಜ್ ಮಾತನಾಡುತ್ತಾ ಸಹೃದಯತೆಯಿಂದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ನಾವು ಸಾಧಕರನ್ನು ಗೌರವಿಸುವ ಮೂಲಕ ಕ್ರೀಯಾಶೀಲರಾಗುವುದು ಬಹಳ ಒಳ್ಳೆಯ ಕೆಲಸ. ಇಲ್ಲವಾದರೆ ಮನಸ್ಸು ಖಿನ್ನತೆಗೆ ಒಳಗಾಗುತ್ತದೆ ಆದರೆ ನಿವೃತ್ತ ಸೈನಿಕರಿಗೆ, ಸಾಹಿತ್ಯದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸುಸುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದ ಆಶಯ ನುಡಿಗಳನ್ನಾಡಿದ ವಿ.ಕೆ.ಎಫ್ ರಾಜ್ಯಾಧ್ಯಕ್ಷ ಲಕ್ಕೂರು ಎಂ.ನಾಗರಾಜ್ ರಕ್ತದಾನ, ನೇತ್ರದಾನ, ಸಮಾಜ ಸೇವೆ ಎಂಬ ಮೂರು ಮಹಾಮಂತ್ರಗಳ ಜೊತೆಗೆ ಸುಮಾರು 4 ವರ್ರ್ಷಗಳಿಂದ ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ವಿಶ್ವಮಾನವ ಕುವೆಂಪು ರವರ ಹೆಸರಿನಲ್ಲಿ ಕುವೆಂಪು ಅನೀಕೆತನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಆ ಸಾಲಿನಲ್ಲಿ ದೇಶ ಸೇವೆ ಮಾಡಿದ ನಿವೃತ್ತ ಸೈನಿಕ ಪಿ.ನಾರಾಯಣಪ್ಪನವರಿಗೆ ನೀಡುತ್ತಿರುವುದು ನಮಗೆ ಹೆಮ್ಮೆ. ಜಿಲ್ಲೆಯಾದ್ಯಂತ ತಾಲ್ಲೂಕು ಮಟ್ಟದ ಕುವೆಂಪು ಅನೀಕೆತನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕವಿ ಡಾ.ಶರಣಪ್ಪ ಗಬ್ಬೂರ್, ಕನ್ನಡ ಸಿರಿ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸುಬ್ಬಾರಾಯಪ್ಪ, ಎಸ್.ಸಿ.ವೆಂಕಟಕೃಷ್ಣ, ಮಾಸ್ತೆನಹಳ್ಳಿ ನಾರಾಯಣಸ್ವಾಮಿ, ವಿ.ಮುನಿರಾಜ್, ಕೆ.ಎನ್.ಪರಮೇಶ್ವರನ್, ಅ.ಕೃ.ಸೋಮಶೇಖರ್, ಡ್ಯಾನಿಡ್ ಕೃಷ್ಣಮೂರ್ತಿ, ರೈತ ಸಂಘದ ಅಬ್ಬಣಿ ಶಿವಪ್ಪ, ಕೆ.ಎಂ.ಸೋಮಶೇಖರ್, ಅಮರನಾಥ್, ಡಾ.ಪುಷ್ಪಲತಾ, ಪ್ರೇಮ್, ಲಕ್ಕೂರು ಟಿ.ಪ್ರವೀಣ್, ವಿ.ಕೆ.ಎಫ್ ಕೋಲಾರ ತಾಲ್ಲೂಕು ಅಧ್ಯಕ್ಷ ವಾಲಿಬಾಲ್ ಸೋಮು, ಬೆಂಗಳೂರು ಚಾಲಕರ ಒಕ್ಕೂಟದ ಅಧ್ಯಕ್ಷ ಕಾರ್ತಿಕ್, ಶಶಿ ಕುಮಾರ್, ವಿಶ್ವಮಾನವ ಕುವೆಂಪು ಫೌಂಡೇಶನ್ ಕೋಲಾರ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಜರಿದ್ದರು.