ವಿದ್ಯಾರ್ಥಿಗಳ ಜೀವನಾಡಿಯಾಗಿರುವ ಶ್ರೀ ವೆಂಕಟೇಶ್ವರ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾ ಸಂಸ್ಥೆಯ ಶ್ರಮ ಅಪಾರ-ಬಿ ವಿ ಗೋಪಿನಾಥ್

ವರದಿ ಶಬ್ಬೀರ್ ಅಹಮದ್ ಶ್ರೀನಿವಾಸಪುರ
ವಿದ್ಯಾರ್ಥಿಗಳ ಜೀವನಾಡಿಯಾಗಿರುವ ಶ್ರೀ ವೆಂಕಟೇಶ್ವರ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾ ಸಂಸ್ಥೆಯ ಶ್ರಮ ಅಪಾರ-ಬಿ ವಿ ಗೋಪಿನಾಥ್ 
ಕೋಲಾರ : ಜಿಲ್ಲೆಯಲ್ಲಿ ಕಳೆದ 31 ವರ್ಷಗಳಿಂದ ಬೆರಳಚ್ಚು ಹಾಗೂ ಕಂಪ್ಯೂಟರ್ ತರಬೇತಿ ಯಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ತಯಾರು ಮಾಡಿ ರಾಜ್ಯದುದ್ದಕ್ಕೂ ಕೊಡುಗೆ ಯಾಗಿ ನೀಡಿ ಹಲವಾರು ವಿದ್ಯಾರ್ಥಿಗಳ ಜೀವನಾಡಿಯಾಗಿರುವ ಶ್ರೀ ವೆಂಕಟೇಶ್ವರ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾ ಸಂಸ್ಥೆಯ ಶ್ರಮ ಅಪಾರವಾಗಿದೆ, ಈ ಒಂದು ಪ್ರಯತ್ನವನ್ನು ಮಾಡಿದ ಸುಧಾಕರ್ ಹಾಗೂ ರತ್ನ ಸುಧಾಕರ್ ರವರ ಸೇವೆ ನಿಜಕ್ಕೂ ಸಾರ್ಥಕ ಎಂದು
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಮಾಜಿ ಅಧ್ಯಕ್ಷರು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು ಹಿರಿಯ ಪತ್ರಕರ್ತರಾದ ಬಿ ವಿ ಗೋಪಿನಾಥ್ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಅವರು ನಗರದ ಅಂತರಗಂಗೆ ರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ 31 ನೇ ವರ್ಷದ ಶಾರದಾ ಪೂಜಾ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, ಜೀವನದ ಪ್ರತಿಯೊಂದು ಹಂತದಲ್ಲಿ ನಮ್ಮ ಪೋಷಕರು ಹಾಗೂ ಗುರುಗಳು ಮೈಲಿಗಲ್ಲಾಗುತ್ತಾರೆ, ಆದುದರಿಂದ ಅವರ ಋಣ ತೀರಿಸಲು ಪ್ರತಿಯೊಬ್ಬ ವಿದ್ಯಾರ್ಥಿ ಉನ್ನತ ಮಟ್ಟದ ವಿದ್ಯಾಭ್ಯಾಸವನ್ನು ಪಡೆದು  ಸಮಾಜದಲ್ಲಿ ಗೌರವ ಪಡೆಯಬೇಕು ಎಂದರು.
ಶ್ರೀ ವೆಂಕಟೇಶ್ವರ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಶ್ರೀಮತಿ ಎಂ ವಿ ರತ್ನ ಸುಧಾಕರ್ ಶಾಲೆಯು ನಡೆದು ಬಂದ ಹಾದಿ, ವಿದ್ಯಾರ್ಥಿಗಳ ಶ್ರಮ, ಸಾಧನೆಯನ್ನು ಸವಿಸ್ತಾರವಾಗಿ ವಿವರಿಸಿದರು.
ವೇದಿಕೆಯಲ್ಲಿ ಕೋಲಾರ  ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ ಎಸ್ ನಾಗರಾಜ್ ಗೌಡ, ಕರ್ನಾಟಕ ರಾಜ್ಯ ವಾಣಿಜ್ಯ ಶಾಲೆಗಳ ಸಂಘದ ಗೌರವ ಕಾರ್ಯದರ್ಶಿ ಎನ್ ಕೃಷ್ಣಮೂರ್ತಿ, ರೊಟೇರಿಯನ್ ವೆಂಕಟರಮಣಪ್ಪ,  ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಅನಿಸಿಕೆಗಳನ್ನು ಹಂಚಿಕೊಂಡರು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಶಶಿರೇಖಾ ಕಾರ್ಯಕ್ರಮದ ನಿರೂಪಣೆಯನ್ನು ವಹಿಸಿದ್ದರು.