ವಿದ್ಯಾರ್ಥಿಗಳು ಸಾಮಾಜಿಕ, ಶೈಕ್ಷಣಿಕ, ಪ್ರಗತಿಯತ್ತ ಸಾಕ್ಷರತೆ ಸಾಧನೆ ಮಾಡಿ ಉತ್ತಮ ಪ್ರಜೆಗಳು ಆಗಬೇಕು:ಪಂ. ನಿರ್ವಣಾಧಿಕಾರಿ ಎಸ್. ಆನಂದ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ,ಇಂದಿನ ಮಕ್ಕಳೇ ಮುಂದಿನ ದೇಶವನ್ನಾಳುವ ಪ್ರಭುಗಳು ಎನ್ನುವುದು ಅರಿತು ವಿದ್ಯಾರ್ಥಿಗಳು ಸಾಮಾಜಿಕ, ಶೈಕ್ಷಣಿಕ, ಪ್ರಗತಿಯತ್ತ ಸಾಕ್ಷರತೆ ಸಾಧನೆ ಮಾಡಿ ಉತ್ತಮ ಪ್ರಜೆಗಳು ಆಗಬೇಕೆಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಎಸ್. ಆನಂದ್ ತಿಳಿಸಿದರು.
ತಾಲ್ಲೂಕಿನ ನಂಬಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಅವರಣದಲ್ಲಿ ಗ್ರಾಮ ಪಂಚಾಯಿತಿಯಿಂದ ಏರ್ಪಡಿಸಿದ್ದ ಮಕ್ಕಳ ಗ್ರಾಮ ಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ಭಾಗವಹಿಸಿ ಮಾತನಾಡಿದ ಆನಂದ್ ವಿದ್ಯಾರ್ಥಿಗಳಿಗೆ ಶಿಕ್ಷಕರು ಗುಣಮಟ್ಟದ ಶಿಕ್ಷಣವನ್ನು ನೀಡಬೇಕು ಸರ್ಕಾರ ವಿದ್ಯಾರ್ಥಿಗಳಿಗೆ ಲೇಖನಿ ಸಾಮಾಗ್ರಿಗಳು, ಬಿಸಿ ಊಟ, ಬಟ್ಟೆ, ಶೂ, ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿದೆ. ವಿದ್ಯಾರ್ಥಿಗಳು ಶಿಸ್ತುನ್ನು ರೂಡಿಸಿಕೊಂಡು ಮುಂದೆ ಬರಬೇಕು ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳನ್ನು ಮಿರಿಸುವಂತೆ ಆಗಬೇಕು. .
ಈಗಿನ ಕಾಲ ತಂತ್ರಜ್ಞಾನ ಅಭಿವೃದ್ದಿ ಹೊಂದುತ್ತಿರುವ ಕಾಲದಲ್ಲಿ ಶಿಕ್ಷಣ ಪಡೆದುಕೊಂಡರೆ ಪೋಷಕರು ಆಸ್ತಿಯನ್ನು ಅಶ್ರಯಸುವ ಅಗತ್ಯವಿಲ್ಲ. ಪ್ರಜಾ ಪ್ರಭುತ್ವ ವ್ಯವಸ್ಥೆ ಸಕಾರಗೊಳಿಸುವ ನಿಟ್ಟಿನಲ್ಲಿ ಮಕ್ಕಳು ಚಿಕ್ಕ ವಯಸ್ಸಿನಿಂದಲೇ ನಮ್ಮ ಸಂವಿಧಾನದ ಎಲ್ಲಾ ರೀತಿಯ ಕಾನೂನು ಪರಿಪಾಲನೆ ತಿಳಿವಳಿಕೆಗಳ ಅರಿವು ಇರಬೇಕು ಎಂದ ಇವರು ಈ ಸಭೆಯಲ್ಲಿ ಮಕ್ಕಳು ಶಾಲೆಗೆ ಬೇಕಾದ ಸೌಲಭ್ಯಗಳು ತುಂಬ ಅಚ್ಚುಕಟ್ಟಾಗಿ ತಿಳಿಸಿದ್ದಾರೆ. ಈ ಶಾಲೆಗೆ ಎನ್‍ಆರ್‍ಇಜಿ ಯೋಜನೆಯಲ್ಲಿ ಸೂಕ್ತವಾದ ಕಾಂಫೌಂಡ್, ಶೌಚಾಲಯ, ಹಾಗೆಯೇ ಈ ಶಾಲೆಗೆ ಡಿಜಿಟಿಲ್ ಲೈಬ್ರರಿ ಮಾಡುವುದು ನನ್ನ ಆಸೆಯಾಗಿದ್ದು ಇದಕ್ಕಾಗಿ ಒಂದು ಲಕ್ಷ ರೂಗಳ ಪಂಚಾಯಿತಿಯ ಅನುದಾನದಲ್ಲಿ ಕೊಡಿಸುತ್ತೇನೆ ಪಂಚಾಯಿತಿ ಅದಿಕಾರಿ ಕೊಡಲೇ ಈ ಶಾಲೆಗೆ ಶುದ್ದ ಕುಡಿಯುವ ನೀರಿನ ಪೈಪ್‍ಲೈನ್ ಅಳವಡಿಸಿ ಈ ಶಾಲೆಗೆ ನೀರನ್ನು ಒದಗಿಸುವ ಕೆಲಸ ನೀವು ಮಾಡಬೇಕು ಶಿಕ್ಷಕರು ಈ ಶಾಲೆಗೆ ಬೇಕಾದ ವಾಟರ್ ಪಿಲ್ಟರ್ ಇನ್ನಿತರೆ ಸೌಲಭ್ಯಗಳ ಬಗ್ಗೆ ಮುಖ್ಯ ಶಿಕ್ಷಕರು ನಮ್ಮ ಗಮನಕ್ಕೆ ತಂದರೆ ನಾವು ಅದನ್ನು ಒದಗಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸುತ್ತಾ ಈ ಪಂಚಾಯಿತಿಗೆ ಒಳಪಡುವ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಕೊಡಿಸುವ ಕೆಲಸ ನಾನು ಮಾಡುತ್ತೇನೆ ಎಂದರು.
ನಂಬಿಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಮಂಜುನಾಥರೆಡ್ಡಿ ಮಾತನಾಡಿ ದೇಶದ ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರತಿ ವ್ಯಕ್ತಿಯು ತನ್ನದೆ ಆದ ರೀತಿಯಲ್ಲಿ ಸ್ವಾತಂತ್ರ ಜೀವನ ಮಾಡಲು ಸಾಕ್ಷರತೆ ಜ್ಞಾನ ವಿದ್ಯಾರ್ಥಿಗಳು ಬೆಳಸಕೊಳ್ಳಬೇಕು ತಪ್ಪು ನಡೆದಾಗ ಪ್ರಶ್ನಿಸುವ ದೈಯ ಈಗನ ವಿದ್ಯಾರ್ಥಿಗಳು ತೋರಬೇಕು ನಿಮ್ಮ ಊರುಗಳಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಶಾಲೆಯಲ್ಲಿ ಕೊರತೆ ಇರುವ ಸೌಲಭ್ಯಗಳ ಬಗ್ಗೆ ವಿದ್ಯಾರ್ಥಿಗಳು ಗಮನಹರಿಸಿ ಪಂಚಾಯಿತಿಗೆ ತಿಳಿಸಿದರೆ ಕೂಡಲೇ ಈ ಬಗ್ಗೆ ಕ್ರಮ ಕೈಗೂಳ್ಳುತ್ತೇವೆ. ಗ್ರಾಮದಲ್ಲಿ ಸ್ವಚ್ಚತೆ, ಆರೋಗ್ಯ, ಸುರಕ್ಷತೆ, ನೈರ್ಮಲ್ಯ ಕಾಪಾಡುವ ದೃಷ್ಠಿಯಿಂದ ವಿದ್ಯಾರ್ಥಿಗಳಾದ ನೀವು ನಿಮ್ಮ ಮನೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಪಂಚಾಯಿತಿಯಿಂದ ಹಣ ಕೊಡಲಾಗುತ್ತದೆ. ಈ ಯೋಜನೆಯನ್ನು ಸದ್ಬಳಿಕೆ ಮಾಡಿಕೊಂಡು ಗ್ರಾಮದಲ್ಲಿ ನೃರ್ಮಲ್ಯ ಕಾಪಾಡಿಕೊಳ್ಳಬೇಕೆಂದು ತಿಳಿಸುತ್ತಾ ಇಂತಹ ಸಭೆಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪಗೊಳ್ಳಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಿಡಿಪಿಓ ರೂಸಲೋನಿಸತ್ಯ, ಅಂಗನವಾಡಿ ಇಲಾಖೆಯ ನಾನಮ್ಮ, ನಂಬಿಹಳ್ಳಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ನಾರಾಯಣಸ್ವಾಮಿ. ಪಂಚಾಯಿತಿಯ ಕರ ವಸೂಲಿಗಾರ ವೆಂಕಟೇಶ್, ಸಿಬ್ಬಂದಿಯಾದ ರಾಮೇಗೌಡ, ವೆಂಕಟಸ್ವಾಮಿ, ಇನ್ನೀತರರು ಹಾಜರಿದ್ದರು
.