ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ವಿದ್ಯಾರ್ಥಿಗಳು ಉತ್ತಮ ಅಂಕಗಳು ಗಳಿಸುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪಗೊಳ್ಳಬೇಕೆಂದು ಉಪವಿಭಾಗಾಧಿಕಾರಿ ವಿ.ಸೋಮಶೇಖರ್ ತಿಳಿಸಿದರು.
ಪಟ್ಟಣದ ಕನಕ ಮಂದಿರದಲ್ಲಿ ಸ್ನೇಹ ಸಂಗಮ ಟ್ರಸ್ಟ್ (ರಿ) ವತಿಯಿಂದ 2019-20ನೇ ಸಾಲಿನ ಎಸ್ಎಸ್ಎಲ್ಸಿ ಪ್ರತಿಭ್ವಾನಿತ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸೋಮಶೇಖರ್ ನಮ್ಮ ಜಿಲ್ಲೆಗೆ ಯಾವುದೇ ಶಾಶ್ವತ ನೀರಾವರಿ ಮೂಲ ಇಲ್ಲ, ಆದರೂ ನಮ್ಮ ಜಿಲ್ಲೆಯು ಶೈಕ್ಷಣಿಕವಾಗಿ ಮುಂದುವರಿದೆ ಶಿಕ್ಷಣವೇ ನಮಗೆ ಆಧಾರವಾಗಿದ್ದು, ವಿದ್ಯಾರ್ಥಿಗಳು ಶ್ರದ್ದಾ ಭಕ್ತಿಯಿಂದ ಓದಿ ಮುಂದಿನ 5-6 ವರ್ಷಗಳಲ್ಲಿ ಶೈಕ್ಷಣಿಕವಾಗಿ ಮುಂದುವರಿಯಬೇಕು ಕೆಪಿಎಸ್ಸಿ, ಯುಪಿಎಸ್ಸಿ ಪರೀಕ್ಷೆಗಳನ್ನು ಬರೆದು ರಾಜ್ಯಕ್ಕೆ, ಜಿಲ್ಲೆಗೆ, ಈ ತಾಲ್ಲೂಕಿಗೆ, ತಂದೆ-ತಾಯಿಗಳಿಗೆ, ಗುರುಗಳಿಗೆ, ಒಳ್ಳೆಯ ಹೆಸರು ತರುವ ಕೆಲಸ ನೀವು ಮಾಡಬೇಕು ಎಂದರು.
ಇಂತಹ ಕಾರ್ಯಕ್ರಮಗಳನ್ನು ಮಡುತ್ತಿರುವ ಸ್ನೇಹ ಸಂಗಮ ಟ್ರಸ್ಟ್ ಗೆ ಮೂದಲಿಗೆ ಅಭಿನಂದೆಗಳನ್ನು ಸಲ್ಲಿಸುತ್ತೇನೆ. ಇಂತಹ ಕಾರ್ಯಕ್ರಮಗಳು ಮಾಡುವುದರಿಂದ ವಿದ್ಯರ್ಥಿಗಳು ಮುಂದೆ ಬರಲು ಸಹಾಯವಾಗುತ್ತಿದೆ ಜೊತೆಗೆ ಉತ್ಸಾಹ ಮನೋಭವನ್ನು ಬೆಳೆಸಿಕೊಳ್ಳುತ್ತಾರೆ. ಸ್ನೇಹ ಸಂಗಮ ಟ್ರಸ್ಟ್ಗೆ ಸೂಕ್ತವಾದ ಜಾಗವನ್ನು ಗುರುತಿಸಿಕೊಡಿ ಎಂದು ತಹಶೀಲ್ದಾರ್ಗೆ ಸಭೆಯಲ್ಲೇ ತಿಳಿಸುತ್ತಾ ನಿಮ್ಮ ಕಾರ್ಯಕ್ರಮಗಳಿಗೆ ನಾನು ಸಹ ಕೈಜೋಡಿಸಿ ನಿಮ್ಮ ಬೆನ್ನುಲುಬಾಗಿ ನಿಲ್ಲುತ್ತೇನೆ ಎಂದ ಇವರು ಯಾವುದೇ ನೈಸರ್ಗಿಕ ಅಡತಡೆಗಳು ಬಂದರು ವಿದ್ಯಾರ್ಥಿಗಳು ದೃತಿಗೆಡದೆ ಉತ್ತಮ ಅಂಕಗಳನ್ನು ಗಳಿಸಿದ್ದಾರೆ. ಮುಂದಿನ ವಿದ್ಯಾಭ್ಯಾಸ ನಿಮಗೆ ಉತ್ತಮ ಉಜ್ವಲ ಭವಿಷ್ಯವಾಗಲಿ ಎಂದರು.
ತಹಶೀಲ್ದಾರ್ ಶ್ರೀನಿವಾಸ್ ಮಾತನಾಡಿ ವಿದ್ಯಾರ್ಥಿಗಳು ವಿದ್ಯಗೆ ಜೊತೆಗೆ ವಿನಯವೂ ಮುಖ್ಯವಾಗಿ ಬೇಕು ಜೀವನದಲ್ಲಿ ಎರಡು ಅಂಶಗಳು ಅತ್ಯವಶ್ಯಕ, ವಿದ್ಯೆಯು ಸುಮ್ಮನೆ ಬರುವುದಿಲ್ಲ ಶ್ರದ್ದಾಭಕ್ತಿಯಿಂದ ಅಭ್ಯಾಸ ಮಾಡಿದಾಗ ನಮ್ಮ ಗುರಿ ತಲುಪಲು ಸಾಧ್ಯವಾಗುತ್ತದೆ. ವಿದ್ಯಾರ್ಥಿದಿಸಿಯಲ್ಲಿ ಕಾಯ, ವಾಚ, ಮನಸ್ಸಿನಿಂದ ವಿದ್ಯಾಭ್ಯಾಸ ಮಾಡಿದ್ದಲ್ಲಿ ನೀವು ಸಹ ಐಎಎಸ್, ಐಪಿಎಸ್, ಕೆಎಎಸ್ ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಹಾಯವಾಗುತ್ತಿದೆ ಜೊತೆಗೆ ಗುರುಗಳ ತಂದೆ-ತಾಯಿಯದಿಂರಿಗೆ ಒಳ್ಳೆಯ ಹೆಸರನ್ನು ತರುವ ಕೆಲಸ ನೀವು ಮಾಡಬೇಕೆಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಎಸ್. ಆನಂದ್ ಮಾತನಾಡಿ ಒಬ್ಬ ವಿದ್ಯಾರ್ಥಿಗೆ ಸಂಕ್ಪಲ, ಸಾದನೆ, ಸೇವೆ ಈ ಮೂರು ಅಂಶಗಳು ಬಹಳ ಮುಖ್ಯವಾದದ್ದು, ಮನುಷ್ಯನಿಗೆ ಹುಟ್ಟು ಉಚಿತ ಸಾವು ಖಚಿತ ಇವರ ಎರಡರ ನಡುವೆ ಸಮಾಜಕ್ಕೆ ಏನನ್ನಾದರೂ ಕೂಡುಗೆÉ ನೀಡಬೇಕು, ವಿದ್ಯೆಗೆ ವಿನಿಯ ಭೂಷಣ ಡಾ|| ಬಿ.ಆರ್.ಅಂಬೇಡ್ಕರ್ ರವರಂತಹ ಮಾಹನ್ ಪುರುಷರ ಸಾದನೆಗಳೆ ನಮಗೆ ಸ್ಪೂರ್ತಿಯಾಗಿದೆ ವಿದ್ಯಾರ್ಥಿಗಳು ಓದಿದಷ್ಟು ಜ್ಞಾನ ಅಭಿವೃದ್ದಿಯಾಗುತ್ತೆದೆ,
ಎಂದ ನಾವು ಹುಟ್ಟು ಬೆಳೆದಿದ್ದು ಎಲ್ಲೆ ಆದರೂ ನಾವು ಓದಿದ ಶಾಲಾ ಕಾಲೇಜ್ ಗುರುಗಳನ್ನು ಮರಿಯಬಾರದು ನಮ್ಮ ಸ್ನೇಹ ಸಂಗಮ ಟ್ರಸ್ಟ್ಗೆ ಜಾಗವನ್ನು ತಾಲ್ಲೂಕು ದಂಡಾಧಿಕಾರಿಗಳು ನೀಡಿದರೆ ವಿದ್ಯಾರ್ಥಿಗಳು ಉನ್ನತವಿದ್ಯಾಭ್ಯಾಸಕ್ಕೆ ಹೋಗಲು ನೂರಿತ ಶಿಕ್ಷಕರಿಂದ ತರಬೇತಿಗಳನ್ನು ನೀಡುವ ಕೆಲಸ ನಾವು ಮಾಡುತ್ತೇವೆ. ಜೀವನದಲ್ಲಿ ಮುಂದೆ ಗುರಿ, ಹಿಂದೆ ಮಾರ್ಗದರ್ಶನ ನಮಗೆ ಇರಬೇಕು ಒಂದು ಕಲ್ಲುಗೆ ಎಷ್ಟೆ ಎಟುಗಳು ಬೀಳಿದರೂ ಕೊನೆಗೆ ಒಂದು ಮೂರ್ತಿಯಾಗಿ, ಪ್ರತಿಮೆಯಾಗಿ ರೂಪಗೊಳ್ಳತ್ತದೆ ಹಾಗೆಯೇ ವಿದ್ಯಾರ್ಥಿ ಜಿವನದಲ್ಲಿ ಯಾವುದೇ ಅಂಕು-ಡೊಂಕು ಬಂದರು ಅದನ್ನು ಎದರುಸಿ ಉನ್ನತಸ್ಥಾನಕ್ಕೆ ನೀವು ಬರಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಯರಾಮರೆಡ್ಡಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಂಜೀವಪ್ಪ, ಬಿಇಓ ಉಮಾದೇವಿ ನಿವೃತ್ತ ಹಿರಿಯ ಉಪನ್ಯಾಸಕ ಎಸ್. ವೆಂಕಟಸ್ವಾಮಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ 60 ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಸ್ನೇಹ ಸಂಗಮ ಟ್ರಸ್ಟ್ನ ಅಧ್ಯಕ್ಷಣಿ ಟಿ.ಎನ್. ನಾಗವೇಣಿರೆಡ್ಡಿ, ನರೇಗಾ ಸಹಾಯಕ ನಿರ್ದೇಶಕ ರಾಮಪ್ಪ, ಪಿಡಿಓ ಚಿನ್ನಪ್ಪ, ತಾಲ್ಲೂಕು ಸಾಕ್ಷರತ ಸಂಯೋಜಕ ರವೀದ್ರರೆಡ್ಡಿ, ಸರ್ಕಾರಿ ನೌಕರ ಸಂಘದ ನಿರ್ದೇಶಕ ಬೈರೇಗೌಡ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುಬ್ಬಮಣಿ, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ್ ಸರ್ಕಾರಿ ಅಸ್ವತ್ರೆಯ ಆರೋಗ್ಯ ಇಲಾಖೆಯ ಎಫ್ಡಿಸಿ ವೆಂಕಟರೆಡ್ಡಿ ಮಂಜುವಾರಿಪಲ್ಲಿ ಶ್ರೀನಿವಾಸ್, ಸ್ನೇಹ ಸಂಗಮ ಬಳಗದವರಾದ ವಿಜಯಮ್ಮ, ಶಾರಧಮ್ಮ, ವೇಮಣ್ಣ, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.