ಲಯನ್ಸ್ ಕ್ಲಬ್ ಕುಂದಾಪುರ- ಕೋವಿಡ್ ಕೇರ್ ಸೆಂಟರ್‍ಗೆ ಕೊಡುಗೆ

JANANUDI.COM NETWORK

ಕುಂದಾಪುರ: ಅ.10: ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಕೋರನಾ ಸೋಂಕಿತರ ಚಿಕಿತ್ಸೆಗಾಗಿ ಕುಂದಾಪುರದಲ್ಲಿ ಸ್ಥಾಪಿಸಿರುವ ಕೋವಿಡ್‍ಕೇರ್ ಸೆಂಟರ್‍ಗೆ ಕುಂದಾಪುರ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ಲಯನ್ ಚಂದ್ರಶೇಖರ ಕಲ್ಪತರು ನೇತೃತ್ವದಲ್ಲಿ ಸೋಂಕಿತರ ಬಳಕೆಗಾಗಿ ರೂ. 40,000 ಮೌಲ್ಯದ 200 ಬೆಡ್ ಶೀಟ್‍ಗಳನ್ನು ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪರಿಗೆ ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಹಿರಿಯ ಸದಸ್ಯರಾದ ಲ. ಪ್ರಕಾಶ್ ಬೆಟ್ಟಿನ್, ಲ. ರಮಾನಂದ,ಲ. ವೇಣುಗೋಪಾಲ ಶೆಟ್ಟಿ, ಲ. ಡಾ. ಶಿವಕುಮಾರ್, ಲ. ರಾಜೀವ ಕೋಟ್ಯಾನ್, ಲ. ರಾಧಾಕೃಷ್ಣ ನಾಯಕ್,ಲ. ನವೀನ ಕುಮಾರ ಶೆಟ್ಟಿ, ಲ. ಗೋಪಾಲಕೃಷ್ಣ ಶೇಟ್, ಲ. ಸಾತ್ವಿಕ್, ಕ್ಲಬಿನ ಕಾರ್ಯದರ್ಶಿ ಲ. ರಾಜೇಂದ್ರ ಕೆ. ಹಾಗೂ ಲ. ಕಿರಣ್ ಕುಮಾರ ಉಪಸ್ಥಿತರಿದ್ದರು.