ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ತಾಲ್ಲೂಕಿನ ದಿಂಬಾಲ ಗ್ರಾಮದ ಸಮೀಪ, ರೋಣೂರು ಕೆರೆ ಅಂಗಳದಲ್ಲಿನ ಜೂಜುಕಟ್ಟೆಯೊಂದರ ಮೇಲೆ ಸೋಮವಾರ ದಾಳಿ ನಡೆಸಿ ಜೂಜಾಡುತ್ತಿದ್ದ 6 ಮಂದಿಯನ್ನು ಬಂಧಿಸಿ, ಬಂಧಿತರಿಂದ ಪಣಕ್ಕೆ ಇಟ್ಟಿದ್ದ ರೂ.5700ಹಾಗೂ 6 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಾರಾಯಣಪ್ಪ, ಸಿಬಂದಿ ವೇಣುಗೋಪಾಲ್, ಆಂಜನಪ್ಪ, ರೆಡ್ಡಪ್ಪ, ಗಂಗಾಧರ್, ರವಿ ದಾಳಿಯಲ್ಲಿ ಭಾಗವಹಿಸಿದ್ದರು.