ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ:- ಎಂ.ಸಿ.ಕೆ.ಎಸ್. ಪುಡ್ ಫಾರ್ ಹಂಗರಿ ಫೌಂಡೇಶನ್ ಕರ್ನಾಟಕ ಪ್ರಾಯೋಜಕತ್ವದ 50 ಸಾವಿರ ಸರ್ಜಿಕಲ್ ಮಾಸ್ಕ್ಗಳನ್ನು ರೋಟರಿ ಮುಳಬಾಗಿಲು ಸೆಂಟ್ರಲ್ ಅಧ್ಯಕ್ಷ ಸತ್ಯಣ್ಣ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯಕುಮಾರ್ ಅವರಿಗೆ ಹಸ್ತಂತರಿಸಿದರು.
ಈ ಸಂದರ್ಭದಲ್ಲಿ ರೋಟರಿ ಸೆಂಟ್ರಲ್ ಅಧ್ಯಕ್ಷ ಸತ್ಯಣ್ಣ ಮಾತನಾಡಿ, ಕೋವಿಡ್ ಮಾರಿ ಇಡೀ ವಿಶ್ವವನ್ನೇ ತಲ್ಲಣಿಸುವಂತೆ ಮಾಡಿದೆ, ಈ ರೋಗಕ್ಕೆ ಭಯಪಡುವ ಅಗತ್ಯವಿಲ್ಲ ಆದರೆ ಕಡ್ಡಾಯ ಮಾಸ್ಕ್ ಧರಿಸುವಿಕೆ, ಕೈಗಳನ್ನು ಸೋಪಿನಿಂದ ತೊಳೆಯುವಿಕೆ, ಜನಸಂದಣಿಯಲ್ಲಿ ಓಡಾಡುವುದನ್ನು ಬಿಟ್ಟರೆ ಅದರಿಂದ ದೂರ ಇರಬಹುದು ಎಂದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೋವಿಡ್ ನಿಯಂತ್ರಣಕ್ಕೆ ಅನೇಕ ಕ್ರಮಗಳನ್ನು ಕೈಗೊಂಡಿದೆ, ಇಂತಹ ಸಂದರ್ಭದಲ್ಲಿ ರೋಟರಿ ಸೆಂಟ್ರಲ್ ತನ್ನ ಕೈಲಾದಷ್ಟು ನೆರವು ನೀಡುತ್ತಿದೆ ಎಂದ ಅವರು, ಇತ್ತೀಚೆಗೆ ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳಿಗೂ ಮಾಸ್ಕ್ ವಿತರಿಸಿದ್ದನ್ನು ಸ್ಮರಿಸಿದರು.
ಡಿಡಿಪಿಐ ಕೆ.ಎಂ.ಜಯರಾಮರೆಡ್ಡಿ ಮಾತನಾಡಿ, ರೋಟರಿ ಸಂಸ್ಥೆಯ ಸಾಮಾಜಿಕ ಕಾಳಜಿ ಮೆಚ್ಚುವಂತದ್ದು, ಕೋವಿಡ್ ಸಂದರ್ಭದಲ್ಲಿ ಮಾತ್ರವಲ್ಲ, ಇತರೆ ಅನೇಕ ಸಂದರ್ಭಗಳಲ್ಲಿ ಶೈಕ್ಷಣಿ ಕ ಅಭಿವೃದ್ದಿಗೂ ನೆರವಾಗಿದೆ ಎಂದು ತಿಳಿಸಿದರು.
ಮಾಸ್ಕ್ ಸ್ವೀಕರಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯಕುಮಾರ್, ಪ್ರತಿಯೊಂದನ್ನು ಸರ್ಕಾರವೇ ಮಾಡಲಾಗದು, ಇಂತಹ ಸಂದರ್ಭದಲ್ಲಿ ನೀಡುವ ಸಹಾಯ ಹೆಚ್ಚು ಮೌಲ್ಯಯುತವಾದದ್ದು ಎಂದು ತಿಳಿಸಿ ಧನ್ಯವಾದ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಸ್ಕ್ಗಳನ್ನು ಆರೋಗ್ಯ ಇಲಾಖೆಗೆ ಒದಗಿಸಿದ್ದಕ್ಕಾಗಿ ಕಾರ್ಯಕ್ರಮದ ರೂವಾರಿಗಳಾದ ರೋ.ಎಸ್ ಜಯರಾಮ ಮತ್ತು ರೋ ಎನ್.ರವೀಂದ್ರನಾಥ ರವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಎ.ಜಿ ಫಿ.ಎಸ್ ರಮೇಶ. ಕಾರ್ಯದರ್ಶಿ ಅರುಣಕುಮಾರ್ .ರೋ ಸಂಪತ್.ರೋ ಪಿ.ಎಮ್ ಶಂಕರ ಪ್ರಸಾದ್ ಹಾಗು ರೋ.ಶಿವಮೂರ್ತಿ ಅಧ್ಯಕ್ಷರು ರೋಟರಿ ಶ್ರೀನಿವಾಸಪುರ ಮತ್ತಿತರರು ಪಾಲ್ಗೊಂಡಿದ್ದರು.