ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ :ರೋಟರಿ ಸಂಸ್ಥೆ ಕೋಲಾರ ಹಾಗೂ ರೋಟರಿ ಬೆಂಗಳೂರು ಲೇಕ್ ಸೈಡ್ ಸಂಯುಕ್ತಆಶ್ರಯದಲ್ಲಿ ನಗರದಲ್ಲಿ ವಿವಿಧ ಸೇವಾಕಾರ್ಯಗಳನ್ನು ಆಯೋಜಿಸಲಾಗಿತ್ತು.ಇಲ್ಲಿನ ರೋಟರಿ ಕೋಲಾರ ಭವನದಲ್ಲಿ ತ್ರಿಲಿಂಗಿ ಸಮುದಾಯಕ್ಕೆ ಸೇರಿದ 100 ಮಂದಿಗೆ ಆಹಾರ ಸಾಮಗ್ರಿಗಳ ಪಡಿತರ ಕಿಟ್‍ಗಳನ್ನು ವಿತರಿಸಲಾಯಿತು.
ತದನಂತg Àಅಂತರ ಗಂಗಾ ವಿಶೇಷಚೇತನ ಮಕ್ಕಳ ವಸತಿ ಶಾಲೆಯಲ್ಲಿ ಪಡಿತರ ಕಿಟ್ ಸೇರಿದಂತೆ ಹೊದಿಕೆಗಳು, ಟೀ ಶರ್ಟ್‍ಗಳು, ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.
ರೋಟರಿಕೋಲಾರ ಸಂಸ್ಥೆಯ ಅಧ್ಯಕ್ಷ ಕೆ.ಆರ್ ಸೋಮಶೇಖರ್ , ಕಾರ್ಯದರ್ಶಿ ಎಂ. ಎಸ್. ರವಿ,ಬೆಂಗಳೂರು ಲೇಕ್ ಸಂಸ್ಥೆಯ ನಿರ್ದೇಶಕ ಕಾಶಿನಾಥ್, ಹೈಗ್ರೌಂಡ್ಸ್ ರೋಟರಿ ಅಧ್ಯಕ್ಷ ಅರವಿಂದ್ ನಾಯ್ಡು, ಜಿಲ್ಲಾ ನಿರ್ದೇಶಕ ಟಿ. ಎಸ್ ರಾಮಚಂದ್ರೇಗೌಡ, ಜಿಲ್ಲಾ ಸಹಾಯಕ ಗೌರ್ನರ್ ದಳಸನೂರು ಗೋಪಾಲಕೃಷ್ಣ, ಡಾ.ಕೆ.ಎಂ.ಜೆ. ಮೌನಿ, ನಾರಾಯಣಮೂರ್ತಿ, ಶಂಕರ್, ಕೋದಂಡಪ್ಪ, ಎಂ.ವಿ.ರಾವ್, ಬೈಚಪ್ಪ,ಸುಧಾಕರ್ ಸೇರಿದಂತೆ ಹಲವಾರು ರೋಟೆರಿಯನ್‍ಗಳು ಭಾಗವಹಿಸಿದ್ದರು.
