ರೋಟರಿ ಕ್ಲಬ್ ರೀವರ್ ಸೈಡ್ ಕುಂದಾಪುರ ಸಂತ ಜೋಸೆಫ್ ಶಾಲೆಯಲ್ಲಿ ಸ್ವಚ್ಚತಾ ಕೀಟ್ ವಿತರಣೆ ಸಮಾರಂಭ

JANANUDI NETWORK

ರೋಟರಿ ಕ್ಲಬ್ ರೀವರ್ ಸೈಡ್ ಕುಂದಾಪುರ ಸಂತ ಜೋಸೆಫ್ ಶಾಲೆಯಲ್ಲಿ ಸ್ವಚ್ಚತಾ ಕೀಟ್ ವಿತರಣೆ ಸಮಾರಂಭ


ರೋಟರಿ ಕ್ಲಬ್ ರೀವರ್ ಸೈಡ್ ಕುಂದಾಪುರ ತಾಲೂಕಿನಾದ್ಯಂತ ಕ್ಯಾರಿ ಬ್ಯಾಗ್ ಫೌಂಡೇಷನ್ ಬೆಂಗಳೂರು ಇವರ ಸಹಾಯ ಹಸ್ತದಿಂದ ಪ್ರತಿ ತಿಂಗಳು ತಾಲೂಕಿನ ಎಲ್ಲಾ ಶಾಲೆಗಳಿಗೆ ಕೀಟ್ ಬ್ಯಾಗ್ ವಿತರಿಸುವ ಜವಾವ್ದಾರಿ ವಹಿಸಿದೆ
ಕುಂದಾಪುರ, ಆ.5: ಸ್ವಚ್ಚ ಸ್ವಾಸ್ಥ್ಯ ಶೌಚಾಲಯ ಗುರಿ ಹೊಂದಿರುವ ಕ್ಯಾರಿ ಬ್ಯಾಗ್ ಫೌಂಡೇಷನ್ ಬೆಂಗಳೂರು ಇವರ ಸಹಾಯ ಹಸ್ತದಿಂದ ರೋಟರಿ ಕ್ಲಬ್ ರೀವರ್ ಸೈಡ್ ಕುಂದಾಪುರ ಶಾಲೆಗಳಿಗೆ ಇವರಿಂದ ಸಾಂಕೇತಿಕವಾಗಿ ಸುಮಾರು 15 ಶಾಲೆಗಳಿಗೆ ಶೌಚಾಲಯ ಸ್ವಚ್ಚತೆ ಮಾಡುವ ಸ್ವಚ್ಚತಾ ಕೀಟಗಳನ್ನು ವಿತರಿಸುವ ಸಮಾರಂಭ ಆಗೋಸ್ತ್ 3 ರಂದು ಕುಂದಾಪುರ ಸಂತ ಜೋಸೆಫ್ ಪ್ರೌಢ ಶಾಲೆಯ ಸಭಾಭವನದಲ್ಲಿ ನಡೆಯಿತು.
ಕ್ಯಾರಿ ಬ್ಯಾಗ್ ಕೀಟ್ ನೀಡಿ ಸಹಕರಿಸುವ ಪ್ರಾಯೋಜಕರಾದ ‘ಕ್ಯಾರಿ ಬ್ಯಾಗ್ ಫೌಂಡೇಷನ್ ಬೆಂಗಳೂರು’ ಇದರ ಅಧಿಕಾರಿಣಿ ಹೇಮಾ ಅವರು ಮಾತಾಡಿ ‘ಕೇಂದ್ರ ಸರಕಾರ ಸ್ವಚ್ಚತೆಗೆ ಬಹಳಷ್ಟು ಆದ್ಯತೆ ನೀಡಿ ಪೆÇ್ರೀತ್ಸಾಹಿಸುತ್ತದೆ, ಶಾಲೆಗಳಲ್ಲಿ ಶೌಚಾಲಯಗಳು ಸ್ವಚ್ಚತೆಯಿಂದ ಇದ್ದು, ಸ್ವಸ್ಥ ಸ್ವಾಸ್ಥ್ಯ ವಾತವರಣ ಇರಬೇಕು ಎನ್ನುವ ಗುರಿ ನಮ್ಮದು, ಅದಕ್ಕಾಗಿ ನಾವು ಸಾಧ್ಯವಿದ್ದಷ್ಟು ಶಾಲೆಗಳಿಗೆ ಉಚಿತವಾಗಿ ವಿತರಿಸುವ ಯೋಜನೆಯನ್ನು ಹಮ್ಮಿ ಕೊಂಡಿದ್ದೆವೆ. ಈ ವಿತರಣೆ ಒಮ್ಮೆ ನೀಡಲು ಆರಂಭಿಸಿದ ಶಾಲೆಗಳಿಗೆ ಪ್ರತಿ ತಿಂಗಳು ನೀಡುತ್ತೇವೆ. ಈ ಯೋಜನೆಗೆ 1 ಕೋಟಿಯಷ್ಟು ಖರ್ಚಾಗುತ್ತದೆ’ ಎಂದು ಅವರು ತಿಳಿಸಿದರು.

ರೋಟರಿ ಕ್ಲಬ್ ರೀವರ್ ಸೈಡ್ ಕುಂದಾಪುರ ತಾಲೂಕಿನಾದ್ಯಂತ ಕ್ಯಾರಿ ಬ್ಯಾಗ್ ಫೌಂಡೇಷನ್ ಬೆಂಗಳೂರು ಇವರ ಸಹಾಯ ಹಸ್ತದಿಂದ ಪ್ರತಿ ತಿಂಗಳು ತಾಲೂಕಿನ ಎಲ್ಲಾ ಶಾಲೆಗಳಿಗೆ ಕೀಟ್ ಬ್ಯಾಗ್ ವಿತರಿಸುವ ಜವಾವ್ದಾರಿ ವಹಿಸಿದೆ

ಕಾರ್ಯಕ್ರಮದ ಮುಖ್ಯ ಅತಿಥಿ ರೋಟರಿ ಕ್ಲಬ್ ರೀವರ್ ಸೈಡ್ ಕುಂದಾಪುರ ರಾಜು ಪೂಜಾರಿ ಮೂಡ್ಲಕಟ್ಟೆ ಇವರು ವಹಿಸಿದ್ದು ‘ರೋಟರಿ ಸಂಸ್ಥೆ ಅನುದಾನಿತ ಮತ್ತು ಸರಕಾರಿ ಶಾಲೆಗಳಿಗೆ ಎನಾದರೂ ಸಹಾಯ ಮಾಡಬೇಕುನ್ನು ಉದ್ದೇಶದಿಂದ, ಎಲ್ಲಿ ಯಾವ ಪ್ರಯೋಜನ ಸಿಗುತ್ತದೆ ಎಂದು ನಾವು ಅರಸುತ್ತಾ ಇರುತ್ತೇವೆ. ಹೀಗೆ ಅರಸಿ ಸ್ವಚ್ಚತಾ ಕ್ಯಾರಿ ಬ್ಯಾಗ್ ಯೊಜನೆಯ ಅಡಿ, ನಾವು ಸುಮಾರು ಕುಂದಾಪುರ ತಾಲೂಕಿನ ಸುಮಾರು 250 ಶಾಲೆಗಳಿಗೆ ಈ ಕೀಟಗಳನ್ನು ವಿತರಿಸುವ ಜವಾಬ್ದಾರಿಯನ್ನು ರೋಟರಿ ಕ್ಲಬ್ ರೀವರ್ ಸೈಡ್ ಕುಂದಾಪುರ ವಹಿಸಿಕೊಂಡಿದೆ’ ಎಂದು ತಿಳಿಸಿದರು.
ರೋ| ಕೆ.ನರಸಿಂಹ ಹೊಳ್ಳ ಪ್ರಾಸ್ತಾವಿಕ ನುಡಿಗಳಾನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂತ ಜೋಸೆಫ್ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ವೈಲೆಟ್ ತಾವ್ರೊ ಸ್ವಚ್ಚತೆಯಿಂದ ಆಗುವ ಪ್ರಯೋಜನಗಳನ್ನು ತಿಳಿಸಿದರು. ಕ್ಯಾರಿ ಬ್ಯಾಗ್ ಫೌಂಡೇಷನ್ ಬೆಂಗಳೂರು ಇದರ ಎಕ್ಸಿಕ್ಯೂಟಿವ್ ಮೆಂಬರ್ ಗೋಮಿನಿ, ರೋ. ಎ.ಜಿ.ಹೆಗಡೆ, ರೋ. ಸದಾನಂದ ಉಡುಪ, ರೋ. ರೊನಾಲ್ಡ್ ಡಿಮೆಲ್ಲೊ ಉಪಸ್ಥರಿದ್ದರು. ಶಿಕ್ಷಕ ಅಶೋಕ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.