ರೋಟರಿ ಕ್ಲಬ್ ಬೆಳ್ಮಣ್  ವತಿಯಿಂದ ವಿಶ್ವ ವೈದ್ಯರ ದಿನಾಚರಣೆಯನ್ನು ನಂದಳಿಕೆ ಪ್ರಾಥಮಿಕ ಆರೋಗ್ಯ ಕೇಂದ್ರದ‌ಲ್ಲಿ ಆಚರಣೆ

ವರದಿ : ವಾಲ್ಟರ್ ಮೊಂತೇರೊ, ಬೆಳ್ಮಣ್ಣು

 

ರೋಟರಿ ಕ್ಲಬ್ ಬೆಳ್ಮಣ್  ವತಿಯಿಂದ ವಿಶ್ವ ವೈದ್ಯರ ದಿನಾಚರಣೆಯನ್ನು ನಂದಳಿಕೆ ಪ್ರಾಥಮಿಕ ಆರೋಗ್ಯ ಕೇಂದ್ರದ‌ಲ್ಲಿ ಆಚರಣೆ

 

 

ಬೆಳ್ಮಣ್, ರೋಟರಿ ಕ್ಲಬ್ ಬೆಳ್ಮಣ್  ವತಿಯಿಂದ ವಿಶ್ವ ವೈದ್ಯರ ದಿನಾಚರಣೆಯನ್ನು ನಂದಳಿಕೆ ಪ್ರಾಥಮಿಕ ಆರೋಗ್ಯ ಕೇಂದ್ರದ‌ಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪ್ರಸ್ತುತ  ಕರೋನಾ ಮಹಾಮಾರಿಯ ಕಠಿಣ ದಿನಗಳಲ್ಲಿ ತಮ್ಮ ವೈದ್ಯಕೀಯ ತಂಡದೊಂದಿಗೆ ನಂದಳಿಕೆ ಪರಿಸರದಲ್ಲಿ ಅತ್ಯುತ್ತಮ ಸೇವೆಯನ್ನು ಹಾಗೂ ಮಾಹಿತಿಯನ್ನು ಜನಸಾಮಾನ್ಯರಿಗೆ ನೀಡಿ‌ ಅವರಲ್ಲಿ ಧೈರ್ಯ ತುಂಬುತ್ತಿರುವ ನಂದಳಿಕೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಶ್ವೇತಾರವರ ಸೇವೆಯನ್ನು ಗುರುತಿಸಿ ಅವರಿಗೆ ರೋಟರಿಯ ಪ್ರತಿಷ್ಠಿತ ವ್ರೃತ್ತಿ ಸೇವಾ ಪ್ರಶಸ್ತಿಯನ್ನು ನೀಡಿ  ಗೌರವಿಸಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಪಿ ಪಿ ಈ ಕಿಟ್ಟ್ ಹಾಗೂ 50 ಸರ್ಜಿಕಲ್ ಮುಖಗವಸುಗಳನ್ನು ಸಂಸ್ಥೆಯ ವತಿಯಿಂದ ಹಸ್ತಾಂತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಬೆಳ್ಮಣ್ಣಿನ  ಅಧ್ಯಕ್ಷರಾದ ರೋ|ಸುಭಾಸ್ ಕುಮಾರ್ ವಹಿಸಿ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಲಯ‌ ೫ರ ಮಾಜಿ ಸಾಹಯಕ ಗವರ್ನರ್ ರೋ| ಸೂರ್ಯಕಾಂತ ಶೆಟ್ಟಿ ಭಾಗವಹಿಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರ ಕಾರ್ಯಗಳ ಬಗ್ಗೆ ಶ್ಲಾಘಿಸಿದರು. ರೋಟರಿ ಸಂಸ್ಥೆಯ  ಕಾರ್ಯದರ್ಶಿ   ರೋ| ರವಿರಾಜ್ ಶೆಟ್ಟಿ ವಂದಿಸಿದರು. ರೋ|ಮುರಳಿಧರ್ ಜೋಗಿ ‌ಕಾರ್ಯಕ್ರಮ  ನಿರೂಪಿಸಿದರು ರೋ|ರಾಜೇಶ್  ಸಾಲ್ಯಾನ್ , ಮೋಹನ್ ದಾಸ್ ಶೆಟ್ಟಿ, ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.