JANANUDI.COM NETWORK
ರೆಡ್ ಕ್ರಾಸ್ ಸಂಸ್ತೆ ಕುಂದಾಪುರ ಘಟಕದಿಂದ ವಿವಿಧ ಸಂಘ ಸಂಸ್ತೆಗಳಿಗೆ ಎನರ್ಜಿ ಡ್ರಿಂಕ್ ವಿತರಣೆ

ಕುಂದಾಪುರ,ಜು.1; ತಾರೀಕು 30-06-2020 ರಂದು ಭಾರತೀಯ ರೆಡ್ ಕ್ರಾಸ್ ಸಂಸ್ತೆ ಕುಂದಾಪುರ ಘಟಕ ಈ ಕೆಳಗಿನ ಸಂಸ್ತೆಗಳಿಗೆ ಎನರ್ಜಿ ಡ್ರಿಂಕ್ ವಿತರಣೆ ಮಾಡಿದೆ.
ಕುಂದಾಪುರ ಸರಕಾರಿ ಆಸ್ಪತ್ರೆಯ ಕೊರೋನಾ ರೋಗಿಗಳಿಗೆ, ಆಶಾ ಕಾರ್ಯಕರ್ತೆಯರಿಗೆ, ಒಳರೋಗಿಗಳಿಗೆ ಮತ್ತು ಕೋವಿಡ್ ವಾರಿಯರ್ಸ್ ಗಳಿಗೆ 960 ಬಾಟ್ಲಿ. ಇದನ್ನು ಮುಖ್ಯ ಆರೋಗ್ಯಾಧಿಕಾರಿ ಗಳಾದ ಡಾ. ರೋಬರ್ಟ್ ಸ್ವೀಕರಿಸಿದರು.
ಕುಂದಾಪುರ ಪೊಲೀಸ್ ಇಲಾಖೆಯ ಹೋಮ್ ಗಾಡ್ರ್ಸ್ ಇವರಿಗೆ 720 ಬಾಟ್ಲಿ. ಇದನ್ನು ಪಿ.ಎಸ್.ಐ. ಶ್ರಿ ಹರೀಶ್ ಸ್ವೀಕರಿಸಿದರು.
ತಾಲೂಕು ಆರೋಗ್ಯ ಅಧಿಕಾರಿಗಳಿಗೆ – ಎಲ್ಲಾ ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರು, ಕೊರೋನಾ ವಾರಿಯರ್ಸ್ ಇತ್ಯಾದಿ ಗಳಿಗೆ 720 ಬಾಟ್ಲಿ. ಇದನ್ನು ಡಾ. ನಾಗಭೂಷಣ್ ಉಡುಪರು ಸ್ವೀಕರಿಸಿದರು.
ಕುಂದಾಪುರ ಪುರಸಭೆಯ ಪೌರ ಕಾರ್ಮಿಕರಿಗೆ, ಮುಖ್ಯಾಧಿಕಾರಿಗಳ ಮುಖಾಂತರ 480 ಬಾಟ್ಲಿ ವಿತರಿಸಲಾಯಿತು.ಇದಲ್ಲದೇ, ರೆಡ್ ಕ್ರಾಸ್ ರಕ್ತ ನಿಧಿ ಕೇಂದ್ರದಲ್ಲಿ ರೋಟರಿ ಶಂಕರನಾರಾಯಣ ಇವರಿಂದ ರಕ್ತ ದಾನ ಶಿಭಿರ ನಡೆಸಲಾಯಿತು.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಭಾ ಪತಿಗಳಾದ ಶ್ರೀ ಎಸ್. ಜಯಕರ ಶೆಟ್ಟಿ, ಕಾರ್ಯದರ್ಷಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಗಣೇಶ್ ಆಚಾರ್ಯ, ಡಾ. ಸೋನಿ ಡಿಕೋಸ್ಟಾ ಮತ್ತು ರಕ್ತ ನಿಧಿ ಕೇಂದ್ರದ ಮೇಲ್ವಿಚಾರಕರಾದ ವೀರೇಂದ್ರ ಕುಮಾರ್ ಉಪಸ್ತಿತರಿದ್ದರು
