ರಾಜ್ಯದಲ್ಲಿ ನೆರೆ ಸಂತ್ರಸ್ತರಿಗೆ ಮುಖ್ಯ ಮಂತ್ರಿ ಘೋಷಣೆ ಮಾಡಿದ ತುರ್ತು ಪರಿಹಾರವೇ ಕೆಲವೆಡೆ ಇನ್ನೂ ಕೂಡ ಸಿಗಲಿಲ್ಲಾ –  ರಮಾನಾಥ್ ರೈ

JANANUDI.COM NETWORK

ರಾಜ್ಯದಲ್ಲಿ ನೆರೆ ಸಂತ್ರಸ್ತರಿಗೆ ಮುಖ್ಯ ಮಂತ್ರಿ ಘೋಷಣೆ ಮಾಡಿದ ತುರ್ತು ಪರಿಹಾರವೇ ಕೆಲವೆಡೆ ಇನ್ನೂ ಕೂಡ ಸಿಗಲಿಲ್ಲಾ –  ರಮಾನಾಥ್ ರೈ

ಕುಂದಾಪುರ,ಆ.22:  ರಾಜ್ಯದಲ್ಲಿ ನೆರೆ ಸಂತ್ರಸ್ತರಿಗೆ ಮುಖ್ಯ ಮಂತ್ರಿ ಘೋಷಣೆ ಮಾಡಿದ ತುರ್ತು ಪರಿಹಾರವೇ ಕೆಲವೆಡೆ ಇನ್ನೂ ಕೂಡ ಸಿಗಲಿಲ್ಲಾ, ಕೇಂದ್ರ ಸರಕಾರ ಕಳೆದ ಸಾಲಿನ ಅನುದಾನ ಬಿಡುಗಡೆ ಮಾಡಿದೆ. ಈ ಸಾಲಿನಲ್ಲಿ ಕೇಂದ್ರ ಸರಕಾರ ಚಿಕ್ಕಾಸು  ಬಿಡುಗಡೆ ಮಾಡಲಿಲ್ಲಾ.  ಹಾಗಾಗಿ ರಾಜ್ಯ ಸರಕಾರಕ್ಕೆ ಮತ್ತು ಕೇಂದ್ರ ಸರಕಾರಕ್ಕೆ ನೆರೆ ಸಂತ್ರಸ್ತರ ಬಗ್ಗೆ ಕಾಳಜಿ ಇಲ್ಲಾ ಎಂದು ಸಾಬೀತು ಆಗುತ್ತಿದೆ. ’ ಎಂದು ಮಾಜಿ ರಾಜ್ಯ ಸಚಿವ ರಮಾನಾಥ್ ರೈ ಕುಂದಾಪುರದಲ್ಲಿ ಕಿಡಿ ಕಾರಿದ್ದಾರೆ

     ಅವರು ಆಗೋಸ್ತ್ 21 ರಂದು ಬುಧವಾರ ಮಧ್ಯಾನ್ಹ ಇಲ್ಲಿನ ಪ್ರವಾಸಿ ಬಂಗಲೆಯಲ್ಲಿ  ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಕುಂದಾಪುರ ತಾಲೂಕು ಹಾಗೂ ಕೋಟಾ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ನೆರೆ ಹಾನಿಯ ಸಂತ್ರಸ್ತರಿಂದ ವಿವರ ಪಡೆದು ಹೇಳಿಕೆ ನೀಡಿದರು.

       ತೀವ್ರ ನೆರೆ ಹಾನಿಯಾದ ಸ್ಥಳದಲ್ಲಿ ಕಾಂಗ್ರೆಸ್ ಪದಾಧಿಕಾರಿಗಳ ನಿಯೋಗವು ತೆರಳಿ ಸಮೀಕ್ಷೆ ನಡೆಸಿದರೆಂದು ತಿಳಿದು ಬಂದಿದೆ.  ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತಾಡಿ ’ ಕೊಡಗು ಮಾದರಿಯಲ್ಲಿಯೆ ರಾಜ್ಯದ ಎಲ್ಲಾ ಕಡೆ ನೆರೆ ಪರಿಹಾರ ಘೋಶಿಸಬೇಕು’ ಎಂದು ವತ್ತಾಯಿಸಿದರು.

       ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಸ್ವಾಗತಿಸಿ ರಾಜ್ಯದಲ್ಲಿ 40 ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಪಾಸ್ತಿ ಹಾನಿಯಾಗಿದ್ದು, ಕೆ.ಪಿ.ಪಿ.ಸಿ. ನಿರ್ದೇಶನದಂತೆ ಕಾಂಗ್ರೆಸ್ ತಂಡಗಳು ಆಗಮಿಸಿವೆ. ವಿವಿಧೆಡೆ ಕಾಂಗ್ರೆಸ್ ಪಕ್ಷದ ಘಾಟಕಗಳು ಪರಿಹಾರ ಸಾಮಾಗ್ರಿ ಕಳುಹಿಸಿವೆ, ಪರಿಹಾರ ಕಾರ್ಯಚರಣೆಯಲ್ಲಿ ಸ್ವಂಯ ಸೇವಕರು ಭಾಗವಹಿಸಿದ್ದಾರೆ’ ಎಂದು ತಿಳಿಸಿದರು  

     ಈ ಸಂದರ್ಭದಲ್ಲಿ. ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ.ಅಶೋಕ್ ಕುಮಾರ್ ಕೊಡವೂರು, ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಮಾಣಿ ಗೋಪಾಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೀಶನ್ ಹೆಗ್ಡೆ, ಜಿಲ್ಲಾ ಅಲ್ಪ ಸಂಖ್ಯಾಕ ಘಟಕದ ಅಧ್ಯಕ್ಷ ಇಸ್ಮಾಯಿಲ್ ಅತ್ರಾಡಿ, ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ನಗರಾಭಿವ್ರದ್ದಿ ಪ್ರಾಧಿಕಾರ ಮಾಜಿ ಅಧ್ಯಕ್ಷ ವಿಕಾಸ್ ಹೆಗ್ಡೆ,  ಯುವ ಕಾಂಗ್ರೆಸ್ ಅಧ್ಯಕ್ಷ ಇಚ್ಚಿತಾರ್ಥ ಶೆಟ್ಟಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿನೋದ್ ಕ್ರಾಸ್ತಾ ಮತ್ತು ಪುರಸಭೆಯ ಕಾಂಗ್ರೆಸ್ ಸದಸ್ಯರು ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು. ಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ ಕುಂದರ್ ವಂದಿಸಿದರು.

    ಕುಂದಾಪುರ ಬ್ಲಾಕ್ ಬ್ಲಾಕ್ ವ್ಯಾಪ್ತಿಯಲ್ಲಿ 16 ಲಕ್ಷಕ್ಕೂ ಹೆಚ್ಚು ಹಾನಿ

    ಕೋಟ ಬ್ಲಾಕ್ ಬ್ಲಾಕ್ ವ್ಯಾಪ್ತಿಯಲ್ಲಿ 15 ಲಕ್ಷಕ್ಕೂ ಹೆಚ್ಚು ಹಾನಿ