JANANUDI.COM NETWORK
ಕುಂದಾಪುರ: ಅಕ್ಟೋಬರ್ 3 ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಐಕ್ಯೂಎಸಿ, ದೈಹಿಕ ಶಿüಕ್ಷಣ ವಿಭಾಗ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದದೆ ೈಹಿಕ ಶಿಕ್ಷಣ ವಿಭಾಗ ಮತ್ತು ಭಾರತೀಯ ದೈಹಿಕ ಶಿಕ್ಷಣ ಪೌಂಡೇಶನ್ ಇದರ ಕರ್ನಾಟಕದ ಕೇಂದ್ರ ಇವರ ಸಹಯೋಗದಲ್ಲಿ “ಯೋಗದ ಮೂಲಕ ಒತ್ತಡ ಮತ್ತು ಉದ್ವೇಗದ ನಿರ್ವಹಣೆ” ಎಂಬ ವಿಷಯದ ಕುರಿತುರಾಷ್ಟ್ರೀಯ ವೆಬಿನಾರ್ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾದ ಮಂಗಳೂರಿನ ಯೋಗಚೇತನ ಯೋಗ ಸಂಶೋಧನಾ ಕೇಂದ್ರದ ಶೈಕ್ಷಣಿಕ ನಿರ್ದೇಶಕರಾ ದಚೇತನಾ ಬಾಡೇಕರ್ ಮಾತನಾಡಿ ಯೋಗಒಂದು ಕಲೆ. ಅಂದರೆ ಯೋಗ ಕಲಿಯುವಿಕೆಯಲ್ಲಿ ಮತ್ತು ತೊಡಗಿಸಿಕೊಳ್ಳವಲ್ಲಿ ನಿರಂತರತೆ ಬೇಕಾಗುತ್ತದೆ. ಯೋಗವನ್ನು ಕಲಿಯುವಲ್ಲಿಯೂ ಸಹ ಕೆಲವು ಅಂಶಗಳನ್ನು ಗಮನಿಸಬೇಕು. ವ್ಯಕ್ತಿ ತನಗೆ ಅನುಖುಲ ಮತ್ತು ಮಾನಸಿಕ ದೈಹಿಕ ಅಗತ್ಯವನ್ನು ಅರಿತು ಆಯಾ ಯೋಗವಿಧಾನದಲ್ಲಿ ತೊಡಗಿಸಿಕೊಂಡಾಗ ಒಂದು ರೀತಿಯ ಉತ್ತಮ ಫಲಿತಾಂಶ ಸಿಗಲು ಸಾಧ್ಯ ಎಂದರು.
ಅಲ್ಲದೇ ಯೋಗದಿಂದ ಒತ್ತಡ ಮತ್ತು ಉದ್ವೇಗವನ್ನು ನಿರ್ವಹಣೆಯನ್ನು ಖಂಡಿತ ಮಾಡಬಹುದು. ಅದಕ್ಕೆತಕ್ಕ ಹಾಗೆ ಯೋಗಾಭ್ಯಾಸವು ಅತಿ ಮುಖ್ಯ. ಅಲ್ಲದೇ ದಿನಕ್ಕೆ 30 ನಿಮಿಷ ಯೋಗಕ್ಕೆಂದು ಮಿಸಲಿಡಿ ಮತ್ತು ವಾರದಲ್ಲಿ ಕನಿಷ್ಠ ಎರಡು ತಾಸು ಯೋಗದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಿ. ಆಗ ತನ್ನಂತಾನೆ ಮಾನಸಿಕ ಉತ್ತಡ ಮತ್ತು ಉದ್ವೇಗದ ಸರಿಯಾದ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ ಎಂದು ಕರೆ ನೀಡಿದರು.
ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಸ್ವಾಗತಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ ಕಿಶೋರ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾಲೇಜಿನ ಐಟಿ ತಂಡದ sಸದಸ್ಯರಾದ ಅಮರ್ ಸಿಕ್ವೆರಾ, ಗಣೇಶ್‍ಕುಮಾರ್, ಶಂಕರನಾರಾಯಣ ಉಪಾಧ್ಯಾಯ ಮತ್ತು ವಿಕ್ರಮ್‍ತಾಂತ್ರಿಕವಾಗಿsss ಸಹಕರಿಸಿದರು. ಉಪನ್ಯಾಸಕಿ ಸ್ನೇಹಾ ಎಸ್‍ಕಾರ್ಯಕ್ರಮ ನಿರ್ವಹಿಸಿದರು.