ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿಗಳಿಂದ “ರಸ್ತೆ ಅಪಘಾತ ತಡೆ” ಬಗ್ಗೆ ಯುವ ಜನತೆಗೆ ಜಾಗೃತಿ

JANANUDI.COM NETWORK

ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿಗಳಿಂದ “ರಸ್ತೆ ಅಪಘಾತ ತಡೆ” ಬಗ್ಗೆ ಯುವ ಜನತೆಗೆ ಜಾಗೃತಿ


ಕುಂದಾಪುರ, ಒ.14: ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದ ಎಂ.ಬಿ.ಎ ವಿಭಾಗದ ವಿದ್ಯಾರ್ಥಿಗಳು ಸಾಮಾಜಿಕ ಕಾಳಜಿಯ ಕುರಿತು “ರಸ್ತೆ ಅಪಘಾತ ತಡೆ” ಬಗ್ಗೆ ಯುವ ಜನತೆಗೆ ಜಾಗೃತಿಯನ್ನು ಮೂಡಿಸುವ ಪ್ರಯುಕ್ತ ಡಾ|| ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಎಂ.ಬಿ.ಎ ವಿಭಾಗದ ಮುಖ್ಯಸ್ಥೆ ಪ್ರೊ.ಸೀಮಾ ಸಕ್ಸೆನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾದ ಕುಂದಾಪುರದ ಸಂಚಾರಿ ಪೋಲಿಸ್ ಅಧಿಕಾರಿಗಳಾದ ಶ್ರೀ.ಜನಾರ್ಧನ (ಂSI)ಹಾಗೂ ಶ್ರೀ.ಶ್ರೀಧರ (ಂSI) ರಸ್ತೆ ಅಪಘಾತ ತಡೆಗಟ್ಟುವ ಕುರಿತು ಮನವರಿಕೆ ಮಾಡಿದರು. ಡಾ|| ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಕೆ.ಉಮೇಶ್ ಶೆಟ್ಟಿಯವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಎಂ.ಬಿ.ಎ ವಿಭಾಗದ ಪ್ರೊ.ಆಕಾಶ್.ಎಸ್, ಅಮೃತಮಾಲ, ಸೌಮ್ಯ.ಕೆ ಮತ್ತು ಫ್ಲಾಶ್ನೆ ಗ್ರೆಟ್ಟಾ ಡಯಸ್ ಉಪಸ್ಥಿತರಿದ್ದರು. ಡಾ|| ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿಯಾದ ಪ್ರೀತಿಯವರು ಸ್ವಾಗತಿಸಿದರು.ಹಾಗೂ ಉಪ ಪ್ರಾಂಶುಪಾಲರಾದ ಪ್ರೊ.ಚೇತನ್ ಶೆಟ್ಟಿಯವರು ಉಪಸ್ಥಿತರಿದ್ದರು.ಬಿ.ಬಿ.ಹೆಗ್ಡೆ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿ ಮಹೇಶ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಮೂಡ್ಲಕಟ್ಟೆ ಕಾಲೇಜಿನ ವಿದ್ಯಾರ್ಥಿಗಳಾದ ಸುಮಯ್ಯ, ವಿಜಯಲಕ್ಷ್ಮೀ, ಸುಚೇತ, ಅನೀಶ್, ಪ್ರಯಾಗ್, ಗಣೇಶ್ ರವರು ಪ್ರಾತ್ಯಕ್ಷತೆಯ ಮೂಲಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.