JANANUDI.COM NTEWORK
ಮೂಡ್ಲಕಟ್ಟೆ ಎಮ್.ಐ.ಟಿ ಕಾಲೇಜು ವಿಶ್ವ ವಿದ್ಯಾರ್ಥಿಗಳ ದಿನ ಆಚರಣೆ:ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜನ್ಮ ದಿನವನ್ನು ‘ವಿಶ್ವ ವಿದ್ಯಾರ್ಥಿಗಳ ದಿನ”ವೆಂದು ಘೋಷಣೆ
ಮೂಡ್ಲಕಟ್ಟೆ ಎಮ್.ಐ.ಟಿ ಕಾಲೇಜು ಕುಂದಾಪುರದಲ್ಲಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜನ್ಮ ದಿನವನ್ನು ಆಚರಿಸಲಾಯಿತು.ಹಾಗೇ ಅವರ ಜನ್ಮ ದಿನವನ್ನು ‘ವಿಶ್ವ ವಿದ್ಯಾರ್ಥಿಗಳ ದಿನ”ವೆಂದು ಘೋಷಿಸಲಾಯಿತು.ಮುಖ್ಯ ಅತಿಥಿಯಾಗಿ, ಭಂಡಾರ್‍ಕಾರ್ಸ್ ಆರ್ಟ್ ªಮತ್ತು ಸೈನ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ| ನಾರಾಯಣ ಶೆಟ್ಟಿಯವರು ಆಗಮಿಸಿದ್ದರು.ಅವರು ತಮ್ಮ ಅತಿಥಿ ಭಾಷಣದಲ್ಲಿ ಕಲಾಂ ಸಾಧನೆಗಳನ್ನು ನೆನೆಯುತ್ತಾ, “ಪ್ರತಿಯೊಬ್ಬರು ಕಲಿಕೆಗೆ ಪ್ರಾಮುಖ್ಯತೆ ನೀಡಿ,ಕಲಿಕೆಯಿಂದ ಯೋಚನೆ ಶಕ್ತಿಯನ್ನು ಪಡೆದು, ಯೋಚನೆ ಶಕ್ತಿಯಿಂದ ಜ್ಞಾನವನ್ನು ಪಡೆದು ಮತ್ತು ಜ್ಞಾನದಿಂದ ಒಳ್ಳೆಯ ಸ್ಥಾನವನ್ನು ಪಡೆದುಕೊಳ್ಳಬೇಕು”ಎಂದರು.ಕಾಲೇಜಿನ ಪ್ರಾಂಶುಪಾಲರಾದ ಡಾ.ಕಾಟಯ್ಯ ಜಿ.ಎಸ್ ರವರು ಮಾತನಾಡಿ,”ಡಾ|.ಎ.ಪಿ.ಜೆ ಯವರು ಎಷ್ಟೇ ದೊಡ್ಡ ಸ್ಥಾನವನ್ನು ಪಡೆದಿದ್ದರೂ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಇಷ್ಟ ಪಡುತ್ತಿದ್ದರು”ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕಾಲೇಜಿನ “ವಿದ್ಯಾರ್ಥಿ ಪರಿಷತ್”ನ ಪ್ರಮಾಣವಚನ ಕಾರ್ಯಕ್ರಮವನ್ನು ನೇರವೇರಿಸಲಾಯಿತು.ಕಾರ್ಯಕ್ರಮದ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ,ಬಹುಮಾನಗಳನ್ನು ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಕಾಲೇಜಿನ ಅಕಾಡೆಮಿಕ್ ಡೈರೆಕ್ಟರ್ ಡಾ|.ಚಂದ್ರರಾವ್ ಮದನೆ ಮತ್ತು ಸಂಯೋಜಕ ಪ್ರೋ.ಸತೀಶ್ ಅಮ್ಸಾಡಿ ಉಪಸ್ಥಿತರಿದ್ದರು.ವಿದ್ಯಾರ್ಥಿ ಲಿರೀಷಾ ಎಲ್ಲಾರನ್ನು ಸ್ವಾಗತಿಸಿದರು.ಶಾಕೀಬ್ ಬಾನು ವಂದಿಸಿದರು.ಚೇತನ ಮತ್ತು ಹೇಮಂತ್ ಕಾರ್ಯಕ್ರಮ ನಿರೂಪಿಸಿದರು.