ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು : ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸ್ 

JANANUDI.COM NETWORK
ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು : ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸ್ 
ಕೊರೊನ ವೈರಸ್ ನ ಲಾಕ್ ಡೌನ್ ನ ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳು ಬಂದ್ ಆಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ತೊಂದರೆ ಆಗದಂತೆ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು ತಮ್ಮ ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸುಗಳನ್ನ ನಡೆಸುತ್ತಿದೆ. ಉಪನ್ಯಾಸಕರು ಮತ್ತು ಪ್ರಾದ್ಯಾಪಕರು ಆನ್ ಲೈನ್ ಕ್ಲಾಸ್ ಗಾಗಿ ಜೂಮ್, ಗೂಗಲ್ ಕ್ಲಾಸ್ ರೂಮ್ ನಂತಹ ಅಪ್ಲಿಕೇಶನ್ ಗಳನ್ನ ಉಪಯೋಗಿಸಿ ವಿದ್ಯಾರ್ಥಿಗಳಿಗೆ ಪ್ರತಿದಿನ ಬೋಧನೆ ನೀಡುತ್ತಿದ್ದಾರೆ.  ಎಲ್ಲಾ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುವ ಸಲುವಾಗಿ ಕಾಲೇಜು ಯುಟ್ಯೂಬ್ ಚಾನೆಲ್ ಅನ್ನು ಆರಂಭಿಸಿದ್ದು, ಬೋಧಿಸಿದ್ದ ಎಲ್ಲಾ ಕ್ಲಾಸ್ ನ ವಿಡಿಯೋಗಳನ್ನ  ಇಲ್ಲಿ ವೀಕ್ಸಿಸಬಹುದು. ಈ ಲಾಕ್ ಡೌನ್ ಸಮಯದಲ್ಲಿ  ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಕೂಡ  ಆಧುನಿಕ ವಿಷಯಗಳ ಮೇಲೆ ಸೆಮಿನಾರ್ ಮತ್ತು ಪ್ರಬಂಧ ಗಳನ್ನ  ಮಂಡಿಸುತಲಿದ್ದು  ಇದೊಂದು ಉತ್ತಮ ಬೆಳವಣಿಗೆಯನ್ನ ತೋರಿಸುತ್ತದೆ.
ಹಾಗೆಯೇ ಲಾಕ್ ಡೌನ್ ಸಮಯದಲ್ಲಿ ವಿದ್ಯಾರ್ಥಿಗಳು ಮನೆಯಲ್ಲೇ ಇದ್ದು ತಮ್ಮ ಮತ್ತು ಮನೆಯವರ ಅರೋಗ್ಯ ನೋಡಿಕೊಳ್ಳಲು ಉಪನ್ಯಾಸಕರು ಸಲಹೆ ನೀಡುತ್ತಾ ಕೊರೋನಾ ವಿರುದ್ಧ ಹೊರಡಲು ಸಹಕರಿಸುತ್ತಿದ್ದಾರೆ. 
ಬೋಧನೆಯ ಜೊತೆಗೆ ವಿದ್ಯಾರ್ಥಿಗಳಿಗೆ ಹೋಂ ವರ್ಕ್ ರೂಪದಲ್ಲಿ ಅಸೈನ್ಮೆಂಟ್ ಗಳನ್ನು ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಅದನ್ನ ಪೂರ್ತಿ ಮಾಡಿ ಉಪನ್ಯಾಸಕರಿಗೆ ಕಳುಹಿಸಿ ಕೊಡುವ ವ್ಯವಸ್ಥೆ ಕೂಡ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ಸಂದೇಹ ಇದ್ದಲ್ಲಿ ಉಪನ್ಯಾಸಕರಿಗೆ ಕರೆ ಮಾಡಿ ಸಂಪರ್ಕಿಸಬಹುದಾಗಿದೆ.