ಮೂಡಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ  ಹನ್ನೆರಡನೇ ಪದವಿ ಪದಗ್ರಹಣ  ಸಮಾರಂಭ

JANANUDI.COM NETWORK

 

ಮೂಡಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ  ಹನ್ನೆರಡನೇ ಪದವಿ ಪದಗ್ರಹಣ  ಸಮಾರಂಭ

 

ಮೂಡಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ  ಫೆಬ್ರುವರಿ ಹದಿನೈದರಂದು ಹನ್ನೆರಡನೇ ಪದವಿ ಪದಗ್ರಹಣ  ಸಮಾರಂಭವನ್ನು ಆಯೋಜಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿ. ಟಿ. ಯು. ವಿಶ್ವವಿದ್ಯಾಲಯದ ಮಂಗಳೂರು ವಿಭಾಗದ ವಿಶೇಷ
ಅಧಿಕಾರಿ (ಸ್ಪೆಷಲ್ ಆಫಿಸರ್) ಡಾ: ಶಿವಕುಮಾರ್  ಪದವೀಧರರಿಗೆ ಇರಬೇಕಾದ ಜವಾಬ್ದಾರಿ ಮತ್ತು
ಉದ್ಯೋಗ ಅವಕಾಶಗಳ ಬಗ್ಗೆ ಹಿತನುಡಿಗಳನ್ನಾಡಿದರು.
ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸಿದ್ಧಾರ್ಥ ಜೆ ಶೆಟ್ಟಿ  ಪದವೀಧರರಿಗೆ
ಅಭಿನಂದನೆ ಸಲ್ಲಿಸುತ್ತಾ ತಾವು ಓದಿದ ಸಂಸ್ಥೆಗೆ ಹಾಗೂ ಪೋಷಕರಿಗೆ ಕೀರ್ತಿ ತರಲೆಂದು ಆಶಿಸಿದರು
ಪ್ರಾಂಶುಪಾಲರಾದ ಡಾ: ಜಿ. ಎಸ್. ಕಾಟಯ್ಯ, ಅಕಾಡೆಮಿಕ್ ಡೈರೆಕ್ಟರ್ ಡಾ: ಚಂದ್ರ ರಾವ್
ಮದನೆ ಕಾರ್ಯಕ್ರಮ ಸಂಯೋಜಕರಾದ ಪ್ರೊ: ಸತೀಶ್ ಅಂಸಾಡಿ ಮತ್ತು ಎಲ್ಲ ವಿಭಾಗಗಳ ಮುಖ್ಯಸ್ಥರು
ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು
ಎಲ್ಲಾ ವಿಭಾಗಗಳಲ್ಲಿ ಉನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಸಂಸ್ಥೆಯು
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೊಡುವ ಫ್ರೀ ಸ್ಕಾಲರ್ಶಿಪ್ ಪಡೆದ ಸಿವಿಲ್ ವಿಭಾಗದ ವಿದ್ಯಾರ್ಥಿನಿ ಕು:
ಛಾಯಾ 8.76 ಶ್ರೇಣಿಯೊಂದಿಗೆ  ಅಗ್ರಸ್ಥಾನಿಯಾಗಿ   ಹೊರಹೊಮ್ಮಿದರು. ಕಾಲೇಜಿನಲ್ಲಿ ಆದಂತಹ
ಹೊಸ ಹೊಸ ಬದಲಾವಣೆಯನ್ನು ನೋಡಿ ಪದವೀಧರರು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ,
ಅಭಿಪ್ರಾಯಗಳನ್ನು ಹಂಚಿಕೊಂಡರು.
ವಿದ್ಯಾರ್ಥಿಗಳಾದ ವರ್ಷ ಮತ್ತು ಡಿಯೋನಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಹೇಮಂತ್ 
ಸ್ವಾಗತಿಸಿದರೆ ಲಕ್ಷ್ಮಿ ವಂದಾನಾರ್ಪಣೆ ಗೈದರು. 
2018-19 ನೇ ಸಾಲಿನಲ್ಲಿ ಪದವಿ ಪಡೆದ ವಿಧ್ಯಾರ್ಥಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.