ಮುಕ್ತ ಚುನಾವಣೆ: ಜವಾಬ್ದರಿತ ನಾಗರಿಕರಾಗಿ ತಪ್ಪದೇ ಮತದಾನ ಮಾಡಿ:ಉಪಚುನಾವಣಾ ಅಧಿಕಾರಿ ಡಾ|ಎಸ್ಎಸ್ ಮಧುಕೇಶ್ವರ್ ಹೇಳಿದರು.
ಕುಂದಾಪುರ, ಎ.12: ಭಾರತೀಯರೆಲ್ಲರೂ ಮುಕ್ತವಾಗಿ ಮತದಾನದಲ್ಲಿ ಭಾಗವಹಿಸುವಂತೆ ಚುನಾವಣಾ ಅಯೋಗ ಮಾಡುವಂತೆ ಎಲ್ಲಾ ವ್ಯವಸ್ಥೆ ಮಾಡಿದೆ. ಪ್ರತಿ ಮನೆಗೂ ಮತದಾರರ ಛಾಯಚಿತ್ರ ಇರುವ ಮತ ಚೀಟಿಗಳನ್ನು ವಿತರಿಸಲಾಗಿದೆ. ಗುರುತಿನ ಚೀಟಿ ಅಥವ ಅಗತ್ಯವಿರುವ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಮತ ಚಲಾಯಿಸಿ. ಬೆಳಿಗ್ಗೆ 7 ರಿಂದ ಸಂಜೆ 7 ರ ವರೆಗೆ ಮತದಾನ ಚಲಾಯಿಸುವ ಅವಕಾಶವಿದೆ. ಯಾವ ಕಾರಣಕ್ಕೂ ಮತದಾನ ಚಲಾಯಿಸದೆ ಇರಬೇಡಿ. ದೇಶಾದ ಹಿತ ದ್ರಷ್ಟಿಯಿಂದ ಪ್ರತಿಯೊಂದು ಮತದಾನ ಅಮೂಲ್ಯವಾಗಿರುತ್ತದೆ. ಮತದಾನದಂದು ಮತ ಚಲಾಯಿಸದೆ ಪ್ರವಾಸಕ್ಕೆ ಹೋಗುವುದನ್ನು ತಪ್ಪಿಸಿ. ಯಾವುದೇ ಅಮಿಷಕ್ಕೆ ಬಲಿಯಾಗಬೇಡಿ. ಜವಾಬ್ದಾರಿಯುತ ನಾಗರಿಕರಾಗಿ ನಿಮ್ಮ ಹಕ್ಕಿನ ಮತ ಚಲಾಯಿಸಿ’ ಎಂದು ಕುಂದಾಪುರ ಸಹಾಯಕ ಆಯುಕ್ತ, ಜಿಲ್ಲೆಯ ಉಪಚುನಾವಣಾ ಅಧಿಕಾರಿ ಡಾ|ಎಸ್ಎಸ್ ಮಧುಕೇಶ್ವರ್ ಹೇಳಿದರು.
ರೋಟರಿ ಕುಂದಾಪುರ ದಕ್ಷಿಣ ಇವರ ಆಶ್ರಯದಲ್ಲಿ ರೋಟರಿ ಕ್ಲಬ್ ಕುಂದಾಪುರ, ರೋಟರಿ ಮೀಡ್ ಟೌನ್, ರೋಟರಿ ಕ್ಲಬ್ ಸನ್ ರೈಸ್, ರೋಟರಿ ಕ್ಲಬ್ ರೀವರ್ ಸೈಡ್ ಇವರ ಇವರ ಸಹಾಯ್ದೊಂದಿಗೆ ನೆಡೆದ ‘ಮತದಾನ ಪ್ರಕ್ರಿಯೆ ಮತ್ತು ಮತಚಲಾವಣೆ ಹಕ್ಕು’ ಬಗ್ಗೆ ಮಾಹಿತಿ ಸಮಾವೇಶದಲ್ಲಿ ಅವರು ಚುನಾವಣೆ ಪ್ರಕ್ರಿಯೆಯ ಸಂಪೂರ್ಣ ವಿವರ ನೀಡಿದರು.
ಅಂದರಿಗೆ, ವ್ರದ್ದರಿಗೆ ಮತ ಚಲಾಯಿಸಲು ಇರುವ ಅವಕಾಶ, ಹಾಗೂ ಸುಳ್ಳು ದೂರು ನೀಡುವುದು, ಆಕ್ರಮ ಮತದಾನಕ್ಕೆ ಪ್ರಯತ್ನ ನೆಡೆಸುವುದು, ಮುಂತಾದ ಕ್ರಿಯೆಗಳಿಗೆ ಇರುವ ಶಿಕ್ಷೆ, ಮುಂತಾದುವುದರ ಬಗ್ಗೆ ಅವರು ಮಾಹಿತಿ ನೀಡಿದರು. ಉಪವಿಭಾಗಿದಾರಿಗಳಚುನಾವಣಾ ಸಹಾಯಕ ಅಧಿಕಾರಿ ಚಂದ್ರಶೇಖರ ಶೆಟ್ಟಿ ಮತ ಯಂತ್ರದ, ವಿ ವಿ ಪ್ಯಾಟ್ ಮತ ಚಲಾವಣೆ ದಾಖಲಿಸುವ ರೀತಿ ಅಭ್ಯರ್ಥಿಗಳು ಪಡೆದ ಮತಗಳ ಎಣಿಕೆ ಮುಂತಾದುವುದರ ಬಗ್ಗೆ ಪ್ರ್ಯಾತ್ಯಕ್ಷಿಕೆ ನೆಡೆಸಿದರು.
ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ಅಧ್ಯಕ್ಷ ಜಾನ್ಸನ್ ಡಿಆಲ್ಮೇಡಾ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕುಂದಾಪುರ ಅಧ್ಯಕ್ಷ ಗೋಪಾಲ ಶೆಟ್ಟಿ ಉಪ ಚುನಾವಣಾ ಅಧಿಕಾರಿಗಳನ್ನು ಪರಿಚಯಿಸಿದರು. ರೋಟರಿ ಮಿಟ್ ಟೌನ್ ಅಧ್ಯಕ್ಷ ಪ್ರಭಾಕರ ಅತಿಥಿಗಳನ್ನು ಗೌರವಿಸಿದರು. ರೋಟರಿ ಸನ್ ರೈಸ್ ಅಧ್ಯಕ್ಷ ಅಬ್ಬು ಶೇಖ್ ಅಭಿನಂದನ ಮಾತುಗಳನ್ನಾಡಿದರು. ರೋಟರಿ ದಕ್ಷಿಣದ ಕಾರ್ಯದರ್ಶಿ ರಾಮಪ್ರಸಾದ್ ಶೇಟ್ ಕಾರ್ಯಕ್ರಮದ ವಿವರಗಳನ್ನು ನೀಡಿದರು. ರೋಟರಿ ಸನ್ ರೈಸನ ನಿಯೋಜಿತ ಅಧ್ಯಕ್ಷ ರಾಜು ಪೂಜಾರಿ ವಂದಿಸಿದರು.
ಮತಯಂತ್ರದಿಂದ ಸ್ಪಷ್ಟ ಚಿತ್ರಣ
ಚುನಾವಣೆಗೆ ಬಳಸುವ ಮತಯಂತ್ರಗಳು, ಮತದಾನ ಮಾಡುವರ ಕೈ ಬೆರಳಿಗೆ ಬಳಸುವ ಶಾಯಿ ಎಲ್ಲವೂ ಭಾರತದ ಉತ್ಪನ್ನಗಳು. ಉತ್ತಮ ಗುಣಮಟ್ಟದ ಮತಯಂತ್ರದ ಕ್ರಿಯೆಯನ್ನು ಯಾರೂ ಬೇಕಾದರೂ ಪರಿಶೀಲನೆ ಮಾಡಬಹುದು, ಚುನಾವಣೆ ನೆಡೆಯುವ ಒಂದು ಗಂಟೆ ಮೊದಲು, ಆಯಾ ಅಭ್ಯರ್ಥಿಯ ಚುನಾವಣ ಎಜೆಂಟ ಸಮ್ಮುಖದಲ್ಲಿ ಈ ಪ್ರಕ್ರಿಯೆ ನೆಡೆಯುತ್ತದೆ.