ಶಬ್ಬೀರ್ ಅಹಮದ್ ಶ್ರೀನಿವಾಸಪುರ
ಕೋಲಾರ.ಅ.27: ಮಾಹಿತಿ ಹಕ್ಕು ಅಧಿ ನಿಯಮದಡಿ ಕೇಳಲಾಗಿದ್ದ ಮಾಹಿತಿ ನೀಡಲು ವಿಫಲವಾದ ಹಿನ್ನೆಲೆಯಲ್ಲಿ, ತಾಲ್ಲೂಕು ಪಂಚಾಯಿತಿ ಪ್ರಥಮ ದರ್ಜೆ ಸಹಾಯಕ ಎಸ್. ಮಂಜುನಾಥ ಅವರ ವಿರುದ್ಧ ಪೆÇಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ತಾಲ್ಲೂಕು ಪಂಚಾಯಿತಿ ಕಾರ್ಯಾಲಯಕ್ಕೆ ಸಂಬಂಧಿಸಿದಂತೆ ಸ್ಟಾಂಪ್ ಡ್ಯೂಟಿ ಅಡಿಯಲ್ಲಿ ಬಿಡುಗಡೆಯಾಗಿರುವ ಹಣ ಹಾಗೂ ವೆಚ್ಚಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳು ಅಗತ್ಯ ಮಾಹಿತಿ ನೀಡುವಂತೆ ಕೋರಿ ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲಾದ ಶಬ್ಬೀರ್ ಅಹಮ್ಮದ್ ಅವರು 2016ರಲ್ಲಿ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿದ್ದರು.
ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಲೆಕ್ಕ ಶಾಖಾ ವಿಭಾಗದಲ್ಲಿ ಕರ್ತವ್ಯ ನಿವರ್ತಹಿಸುತ್ತಿರುವ ಶ್ರೀ ಎಸ.ಮಂಜುನಾಥರವರು ಸದರಿ ಮಾಹಿತಿಯನ್ನು ಅರ್ಜಿದಾರರಿಗೆ ಒದಗಿಸುವಂತೆ ಕಛೇರಿಯಿಂದ ಹಾಗೂ ಕರ್ನಾಟಕ ಮಾಹಿತಿ ಆಯೋಗದಿಂದ ಸುಮಾರು ಬಾರಿ ಸೂಚಿಸಲಾಗಿದ್ದರೊ ಸಹ ಎಸ. ಮಂಜುನಾಥ ಮಾಹಿತಿಯನ್ನು ಒದಗಿಸಿರುವುದಿಲ್ಲ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಮಾಹಿತಿ ಆಯೋಗ ಪ್ರಕರಣದಲ್ಲಿ ಕೋರಿರುವ ಮಾಹಿತಿ/ದಾಖಲೆ ಸಂಬಂಧ ಕರ್ನಾಟಕ ಪಬ್ಲಿಕ್ ರೆಕಾಡ್ ಆಕ್ಟ್ 2010 ಮತ್ತು ಕರ್ನಾಟಕ ಪಬ್ಲಿಕ್ ರೆಕಾರ್ಡ್ ರೂಲ್ಸ್ 2013 ರನ್ವಯ ಸದರಿ ಮಾಹಿತಿಗೆ ಸಂಬಂಧಿಸಿದ ಕಡತ ನಿರ್ವಹಿಸಿದ ಶ್ರೀ.ಎಸ್. ಮಂಜುನಾಥ, ಪ.ದ.ಸ ಲೆಕ್ಕ ಶಾಖೆ ಶ್ರೀನಿವಾಸಪುರ ರವರ ಮೇಲೆ ಆರಕ್ಷಕ ಠಾಣೆಗೆ ಪ್ರಥಮ ಮಾಹಿತಿ ವರದಿ ದಾಖಲಿಸುವಂತೆ ಸೂಚಿಸುತ್ತು.
ಮಾಹಿತಿ ಹಕ್ಕು ಆಯೋಗ, ಅಗತ್ಯ ಮಾಹಿತಿ ಒದಗಿಸಲು ವಿಫಲವಾಗಿರುವ ಎಸ್.ಮಂಜುನಾಥ ಅವರ ವಿರುದ್ಧ ಎಫ್ ಐ ಆರ್ ದಾಖಲಿಸುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್ ಅವರಿಗೆ ಸೂಚಿಸಿತ್ತು. ಅದರಂತೆ ಎಸ್.ಆನಂದ್ ಶ್ರೀನಿವಾಸಪುರ ಪೆÇಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ದೂರಿನ ಅನ್ವಯ ಎಸ್.ಮಂಜುನಾಥ ವಿರುದ್ಧ ಎಫ್ಐಆರ್ ದಾಖಲಾಗಿದೆ.