JANANUDI.COM NETWORK
ಮಾಜಿ ಶಾಸಕಿ ವಿನ್ನಿಫ್ರೆಡ್ ಫೆರ್ನಾಂಡಿಸ್ ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ
ಕುಂದಾಪುರ, ಎ.30: ಅಪ್ರತಿಮ ನಾರಿ ಬಹು ಹಿರಿಯ ರಾಜಕಾರಣಿಯಾಗಿ, ರಾಜಕಾರಣದಲ್ಲಿ ಬಹಳ ಯಶಸ್ಸು ಕಂಡು, ಮಹಿಳೆಯರು ಯಾವ ಕ್ಷೇತ್ರದಲ್ಲೂ ಯಶಸ್ಸು ಗಳಿಸಬಹುದೆಂದು ಹಲವು ದಶಕಗಳ ಹಿಂದೆಯೆ ತೊರೀಸಿಕೊಟ್ಟು ಎರಡು ಅವಧಿಗೆ ಶಾಸಕಿಯಾಗಿ ಆಯ್ಕೆಯಾಗಿ ಮತ್ತೊಂದು ಸಲ 6 ವರ್ಷದ ವರೆಗೆ ಎಮ್.ಎಲ್.ಸಿ. ಆಗಿ ಒಟ್ಟು 16 ವರ್ಷ ಸೇವೆ ಸಲ್ಲಿಸಿದ ವಿನ್ನಿಫ್ರೆಡ್ ಫೆರ್ನಾಂಡಿಸ್ 28 ಮಂಗಳವಾರದಂದು ನಿಧನರಾಗಿದ್ದರು. ಇಂದು ಎಪ್ರಿಲ್ 30 ರಂದು ಅವರನ್ನು ಸರಕಾರಿ ಗೌರವದೊಂದಿಗೆ, ಕ್ರೈಸ್ತ ಧರ್ಮದ ವಿಧಿ ವಿಧಾನಗಳೊಂದಿಗೆ ಕುಂದಾಪುರ ಹೋಲಿ ರೋಜರಿ ಚರ್ಚನಲ್ಲಿ ಅಂತ್ಯ ಕ್ರಿಯೆ ಜರುಗಿಸಲಾಯಿತು.
ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ, ವಿನ್ನಿಫ್ರೆಡ್ ಕುಟುಂಬದ ಧರ್ಮಗುರು ವಂ|ಆರ್ಥರ್ ಪಿರೇರಾ, ಕುಂದಾಪುರದ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ ಮತ್ತು ಪ್ರಾಂಶುಪಾಲ ವಂ|ಧರ್ಮಗುರು ಪ್ರವೀಣ್ ಮಾರ್ಟಿಸ್ ಇವರುಗಳು ಅಂತ್ಯ ಕ್ರಿಯೆಯನ್ನು ನೇರವೇರಿಸಿದರು.
ಚರ್ಚ್ ಉಪಾಧ್ಯಕ್ಷ ಲುವಿಸ್ ಫೆರ್ನಾಂಡಿಸ್ ‘ವಿನ್ನಿಫ್ರೆಡ್ ಫೆರ್ನಾಂಡಿಸ್ ಒರ್ವ ಪ್ರಮಾಣಿಕ ರಾಜಕೀಯ ವ್ಯಕ್ತಿ, ಗುಡ್ ಫ್ರೈಡೆಗೆ ರಜೆ ಸಿಗಲು ಕಾರಣಾರದವರು, ಮಹಿಳಾ ಪೆÇಲೀಸ್ ಠಾಣೆ ಕುಂದಾಪುರಕ್ಕೆ ಲಭಿಸಲು ಕಾರಣಾರಾಗಿದ್ದರು, ಪುರಸಭೆಯ ಅಧ್ಯಕ್ಷೆಯಾಗಿದ್ದು, ಮಾತ್ರವಲ್ಲಾ, ಅವರು ಹಲವಾರು ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷತೆಯನ್ನು ವಹಿಸಿ ಸಮಾಜ ಇಂತಹ ಹಲವಾರು ಸಮಾಜಕಕ್ಕೆ ಒಳಿತಾಗುವ ಕೆಲಸವನ್ನು ಮಾಡಿದವರು, ಅವರ ನಿಧನದಿಂದ ತುಂಬಲಾರದ ನಷ್ಟವಾಗಿದೆ’ ಎಂದು ಶ್ರದ್ದಾಂಜಲಿ ಅರ್ಪಿಸಿದರು.
ನಂತರ ರಾಜ್ಯ ಸರಕಾರದ ಪರವಾಗಿ ಪೊಲೀಸ್ ತಂಡ ವಿನ್ನಿಫ್ರೆಡ್ ಫೆರ್ನಾಂಡಿಸ್ ಪಾರ್ಥಿವ ಶರೀರಕ್ಕೆ ಗೌರವಾರ್ಥವಾಗಿ ಗಾಳಿಯಲ್ಲಿ ಗುಂಡು, ವಾದ್ಯದೊಂದಿಗೆ ಗೌರವ ಗೀತೆ ಹಾಡಿ ವಂದನಾರ್ಪಣೆ ಸಲ್ಲಿಸಿದರು. ವಿಶೇಷವೆಂದರೆ ಗೌರವ ಸಲ್ಲಿಸಿದ ಪೆÇಈಸ್ ತಂಡ ತಮ್ಮ ಸಮವಸ್ತ್ರದ ಮೇಲೆ ಕೊವೀಡ್ 19 ರಕ್ಷಣ ಕವಚವನ್ನು ಹಾಕಿಕೊಂಡು ಗೌರವ ಸಲ್ಲಿಸ ಬೇಕಾಯ್ತು. ಈ ಸಂದರ್ಭದಲ್ಲಿ ಎ.ಎಸ್.ಪಿ ಹರಿರಾಮ್ ಶಂಕರ್, ಸಿ.ಪಿ.ಐ. ಗೋಪಿ ಕ್ರಷ್ಣ, ಪಿ.ಎಸ್.ಐ. ಹರೀಶ್ ಆರ್ ನಾಯ್ಕ್ ಕುಂದಾಪುರ ನಗರ,ಪಿ.ಎಸ್.ಐ. ರಾಜಕುಮಾರ್ ಕುಂದಾಪುರ ಗ್ರಾಮಂತರ ಮತ್ತು ಪೊಲೀಸ್ ಸಿಂಬದಿ ಹಾಜರಿದ್ದರು. ಬಳಿಕ ಕುಂದಾಪುರ ಚರ್ಚ್ ರುದ್ರಭೂಮಿಯಲ್ಲಿ ಅಂತಿಮ ವಿಧಿ ವಿಧಾನಗಳೊಂದಿಗೆ ಅಂತ್ಯಕ್ರಿಯೆ ಮುಗಿಸಲಾಯಿತು