ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುಣ್ಯ ಸ್ಮರಣೆ ಮತ್ತು ಮಾಜಿ ಉಪ ಪ್ರಧಾನಿ ಸರ್ದಾರ ವಲ್ಲಭ ಭಾಯಿ ಪಟೇಲರ ಜನ್ಮ ದಿನಾಚರಣೆ- ಬ್ಲಾಕ್ ಕಾಂಗ್ರೆಸ್ ಕುಂದಾಪುರ

JANAUDI.COM NETWORK

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುಣ್ಯ ಸ್ಮರಣೆ ಮತ್ತು ಮಾಜಿ ಉಪಪ್ರಧಾನಿ ಸರ್ದಾರ ವಲ್ಲಭ ಬಾಯಿ ಪಟೇಲರ ಜನ್ಮದಿನಾಚರಣೆಯುನ್ನು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಬೆಳಿಗ್ಗೆ ಗಂಟೆ 9.30ಕ್ಕೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪಿ.ಎಲ್.ಡಿ ಬ್ಯಾಂಕಿನ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ ಶೆಟ್ಟರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಆಡಳಿತದಲ್ಲಿ ತಂದ ಬ್ಯಾಂಕ್ ರಾಷ್ಟ್ರೀಕರಣ, ಹಸಿರು ಕ್ರಾಂತಿ ಮತ್ತು ಗರೀಬಿ ಹಠಾವೋ ಕಾರ್ಯಕ್ರಮಗಳಿಂದ ದೇಶವಿಂದು ಸರ್ವತೋಮುಖ ಬೆಳವಣಿಗೆ ಹೊಂದಿದ್ದು, ಜನ ಸಾಮಾನ್ಯರಿಗೆ ನ್ಯಾಯ ದೊರಕುವಂತಾಗಿತ್ತು. ಆದರೆ ಇಂದು ಆಡಳಿತದಲ್ಲಿರುವ ಕೇಂದ್ರ ಸರಕಾರವು ಕೇವಲ ಕಾರ್ಪೋರೇಟ್ ಕಂಪೆನಿಗಳ ಕೈಗೊಂಬೆಯಾಗಿರುವುದು ದುರಾದೃಷ್ಟವೆಂದರು.
ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ವಿಕಾಸ ಹೆಗ್ಡೆಯವರು ಮಾತನಾಡಿ ಮಾಜಿ ಉಪಪ್ರಧಾನಿ ಸರ್ದಾರ ವಲ್ಲಭಬಾಯಿ ಪಟೇಲರ ದೃಢ ನಿರ್ಧಾರಗಳು ದೇಶವನ್ನು ಸ್ವಾತಂತ್ರ ನಂತರದ ದಿನಗಳಲ್ಲಿ ಗಣರಾಜ್ಯವಾಗಿ ಸ್ಥಾಪನೆ ಮಾಡಿದ್ದು ಮತ್ತು ದೇಶವನ್ನು ವಿವಿಧತೆಯಲ್ಲಿ ಏಕತೆಯನ್ನು ಸ್ಥಾಪಿಸಲು ಕಾರಣವಾಯಿತು ಎಂದರು. ಮಾತ್ರವಲ್ಲದೆ ಆರ್.ಎಸ್.ಎಸ್. ಸಂಘಟನೆಯನ್ನು ನಿಷೇಧಿಸಲು ಆದೇಶಿಸಿದ್ದರು ಎಂದರು.
ಸಭೆಯ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಕಾನ್ಮಕ್ಕಿ ಹರಿಪ್ರಸಾದ ಶೆಟ್ಟಿಯವರು ನೆರವೇರಿಸಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ನೆನಪಿನಲ್ಲಿ ಬಡವರಿಗೆ ಆರೋಗ್ಯಕರವಾದ ಊಟವನ್ನು ಕನಿಷ್ಠ ದರದಲ್ಲಿ ನೀಡಲು ಇಂದಿರಾ ಕ್ಯಾಂಟಿನ್‌ಗೆ ರಾಜ್ಯ ಸರಕಾರ ಸಮರ್ಪಕವಾಗಿ ಅನುದಾನವನ್ನು ನೀಡುತ್ತಿಲ್ಲ’ ಎಂದರು. ಮಾಜಿ ಪ್ರಧಾನಿ ವಾಜಪೇಯಿಯವರು ಇಂದಿರಾ ಗಾಂಧಿಯನ್ನು “ದುರ್ಗಿ ಅವತಾರ” ಎಂದಿದ್ದರು ಎಂದು ಅವರು ನೆನಪಿಸಿ ಕೊಂಡರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಅಬು ಮಹಮ್ಮದ್, ಅಶ್ಫಕ್ ಕೋಡಿ, ಹಿರಿಯರಾದ
ಶಂಕರ ಪೂಜಾರಿ ಮಾಜಿ ಪುರಸಭಾ ಸದಸ್ಯರಾದ ಕೋಡಿ ಪ್ರಭಾಕರ, ಇಂಟಕ್ ಅಧ್ಯಕ್ಷರಾದ ಚಂದ್ರ ಅಮೀನ್, ಯುವ ಮುಖಂಡರಾದ ಕೋಡಿ ಸುನಿಲ್ ಪೂಜಾರಿ, ವಿ. ಗಣೇಶ್, ಧರ್ಮ ಪ್ರಕಾಶ್, ಸುಧಾಕರ ಪೂಜಾರಿ ಹಂಗಳೂರು, ಸದಾನಂದ ಖಾರ್ವಿ, ವಿಠಲ ಕಾಂಚನ್, ವಿಜಯಧರ ಕೆ.ವಿ., ಅಶೋಕ ಸುವರ್ಣ, ವೇಣು ಗೋಪಾಲ, ದಿನೇಶ ಬೆಟ್ಟ, ಶಶಿರಾಜ್ ಎಂ., ಕೆ. ಸುರೇಶ್, ವಿವೇಕಾನಂದ, ಗಣೇಶ ಶೆಟ್ಟಿ, ಶಶಿರ, ಹೇಮಾ ಪೂಜಾರಿ, ಪಲ್ಲವಿ ಇನ್ನಿತರರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ ಕ್ರಾಸ್ಟೋ ಸ್ವಾಗತಿಸಿ, ನಿರೂಪಿಸಿದರು. ಮಹಿಳಾ ಕಾಂಗ್ರೆಸ್‌ನ ಜ್ಯೋತಿ ಡಿ. ನಾಯ್ಕರವರು ವಂದಿಸಿದರು.