ಮಹಾ ಕ್ರಿಮಿನಲ್ ವಿಕಾಸ್ ದುಬೆಯನ್ನು ಎನ್ ಎನ್ ಕೌಂಟರನಲ್ಲಿ  ಪೊಲೀಸರು ಸಾಯಿಸಿದರು

JANANUDI.COM NETWORK

 

ಮಹಾ ಕ್ರಿಮಿನಲ್ ವಿಕಾಸ್ ದುಬೆಯನ್ನು ಎನ್ ಎನ್ ಕೌಂಟರನಲ್ಲಿ  ಪೊಲೀಸರು ಸಾಯಿಸಿದರು

 

[ಪೊಲೀಸರು ಹೇಳುವ ಪ್ರಕಾರ ಕಳ್ಳರು, ದರೋಡೆಕೋರರು, ವಂಚಕರು ಇತರ ಥರಹದ ಅಪರಾಧಿಗಳು ಕ್ರಿಮಿನಲ್ ಗಳೋ ಅಥವಾ ಈ ರೀತಿ ತಮ್ಮ ಪೊಲೀಸ್ ಇಲಾಖೆಗೆ ದ್ರೋಹ ಬಗೆದ ನಿಜಾಂಶ ಹೊರ ಬೀಳುತ್ತೆ ಎಂದು ಈ ಎನ್ ಕೌಂಟರ್ ಎಂಬ ನಾಟಕವಾಡಿ ಕೊಲೆಗಾರರಾದ ಪೊಲೀಸರು ಕ್ರಿಮಿನಲ್ ಗಳೋ ಎಂದು ಸಾಮನ್ಯ ಜನ ಚಿಂತಿಸುವಂತಾಗಿದೆ]  

ಮಹಾ ಕ್ರಿಮಿನಲ್ ವಿಕಾಸ್ ದುಬೆಯನ್ನು ಸೆರೆ ಹಿಡಿಯಲು ಹೋದ 8 ಪೊಲೀಸರ ಹತ್ಯೆಗೆ ಕಾರಣವಾಗಿದ್ದ ಕ್ರಿಮಿನಲ್ ವಿಕಾಸ್ ದುಬೆಯನ್ನು ಪೊಲೀಸರು ಇಂದು ಮುಂಜಾನೆ ಸಾಯಿಸಿದ್ದಾರೆ.

ನಿನ್ನೆ ತಾನೇ ಮಧ್ಯಪ್ರದೇಶದಲ್ಲಿ ಶರಣಾಗಿದ್ದ ವಿಕಾಸ್ ದುಬೆಯನ್ನು ಅಲ್ಲಿಂದ ಉತ್ತರ ಪ್ರದೇಶಕ್ಕೆ ಕರೆತರುವಾಗ ಸಚೇಂದಿಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಗುಂಡು ಹಾರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

   ಮಧ್ಯಪ್ರದೇಶದಿಂದ ಉತ್ತರ ಪ್ರದೇಶದ ಕಾನ್ಪುರಕ್ಕೆ ಕರೆದೊಯ್ಯುತ್ತಿದ್ದಾಗ ಮಳೆಯ ಕಾರಣದಿಂದಾಗಿ ಕಾನ್ಪುರ ಬಳಿಯ ಸಚೇಂದಿಯಲ್ಲಿ ಕಾರು ಲಯ ತಪ್ಪಿತು. ಆ ಸಂದರ್ಭದಲ್ಲಿ ವಿಕಾಸ್ ದುಬೆ ಪೊಲೀಸ್ ಒಬ್ಬನಿಂದ ಬಂದೂಕು ಕಸಿದುಕೊಂಡು ತಪ್ಪಿಸಿಕೊಳ್ಳಲು ಯತ್ನಿಸಿದ. ಆಗ ಆತನ ಮೇಲೆ ಗುಂಡಿಕ್ಕಿ ಕೊಲ್ಲಲಾಯಿತು ಎಂದು ವಿಶೇಷ ಕಾರ್ಯಪಡೆಯ ಪೊಲೀಸರು ತಿಳಿಸಿದ್ದಾರೆ.

“ಇಂದು ಅಪಘಾತದಲ್ಲಿ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ. ಪೊಲೀಸ್ ಎನ್‌ಕೌಂಟರ್‌ನಲ್ಲಿ ವಿಕಾಸ್ ದುಬೆ ಸಾವನ್ನಪ್ಪಿದ್ದಾನೆ” ಎಂದು ಕಾನ್ಪುರದ ಇನ್ಸ್ಪೆಕ್ಟರ್ ಜನರಲ್ ಮೋಹಿತ್ ಅಗರ್ವಾಲ್ ಮಾದ್ಯಮಕ್ಕೆ ತಿಳಿಸಿದ್ದಾರೆ   

     ವಿಕಾಸ್ ದುಬೆ ಬಂಧನ ವಿರೋಧ ಪಕ್ಷಗಳು ಸೇರಿದಂತೆ ಹಲವಾರು ಜನ ಪೂರ್ವ ಯೋಜಿತ ಯೋಜನೆ ಎಂದು ಟೀಕಿಸಿದ್ದರು. ಪೊಲೀಸರು ಮತ್ತು ರಾಜಕಾರಣಿಗಳ ಬೆಂಬಲದಿಂದಲೇ ವಿಕಾಸ್ ದುಬೆ ಇಷ್ಟು ಬೆಳೆಯಲು ಸಾಧ್ಯವಾಗಿದ್ದು ಎಂದು ಟೀಕಿಸಿದ್ದರು. ಇನ್ನು ಕೆಲವರು ದುಬೆ ಶರಣಾದರೂ ಸಹ ಅವನನ್ನು ಎನ್‌ಕೌಂಟರ್ ಮಾಡುತ್ತಾರೆ, ಅವನನ್ನು ಜೀವಂತ ಉಳಿಯಲು ಬಿಡುತಿಲ್ಲಾ ಎಂದು ಅಭಿಪ್ರಾಯಪಟ್ಟಿದ್ದರು. ಅದನ್ನು ಉತ್ತರ ಪ್ರದೇಶ ಪೊಲೀಸರು ಇಂದು ನಿಜ ಇತರರು ಎಣಿಸಿದಕ್ಕಿಂತ ಮುಂಚೆನೇ ಮಾಡಿ ತೋಇಸಿದ್ದಾರೆ.

    ಹೀಗೆ ಮಾಡಿರದಿದ್ದರೆ ಹಲವು ರಾಜಕಾರಣೀಗಳ ಹಾಗೇ ಹಲವು ಪೊಲೀಸರ ಅಧಿಕಾರಿಗಳ ಕಪಟತನ ಬಯಾಲಾಗುತಿತ್ತು. ತಮ್ಮ ಘುಟ್ಟು ರಟ್ಟಾಗುವುದೆಂಬ ವಿಚಾರದೊಂದಿಗೆ ಈ ಥರಹ ಕ್ರಮ ವ ಯೋಜನೆ ತಯಾರಿಸಲಾಯಿತು. ಈ ಪರಿ ನೋಡುವಾವಾಗ,  ಪೊಲೀಸರು ಹೇಳುವ ಪ್ರಕಾರ ಕಳ್ಳರು, ದರೋಡೆಕೋರರು, ವಂಚಕರು ಇತರ ಥರಹದ ಅಪರಾಧಿಗಳು ಕ್ರಿಮಿನಲ್ ಗಳೋ ಅಥವಾ ಈ ರೀತಿ ತಮ್ಮ ಪೊಲೀಸ್ ಇಲಾಖೆಗೆ ದ್ರೋಹ ಬಗೆದ ನಿಜಾಂಶ ಹೊರ ಬೀಳುತ್ತೆ ಎಂದು ಈ ಎನ್ ಕೌಂಟರ್ ಎಂಬ ನಾಟಕವಾಡಿ ಕೊಲೆಗಾರರಾದ ಪೊಲೀಸರು ಕ್ರಿಮಿನಲ್ ಗಳೋ ಎಂದು ಸಾಮನ್ಯ ಜನ ಚಿಂತಿಸುವಂತಾಗಿದೆ.