ಮರುಭೂಮಿಯ ಅರಬ್ ನಾಡಿನಲ್ಲಿ  ೧೫ ನೇಯ ವಿಶ್ವ ಕನ್ನಡ ಸಮ್ಮೇಳನ

ವರದಿ: ವಾಲ್ಟರ್ ಮೊಂತೇರೊ

ಮರುಭೂಮಿಯ ಅರಬ್ ನಾಡಿನಲ್ಲಿ  ೧೫ ನೇಯ ವಿಶ್ವ ಕನ್ನಡ ಸಮ್ಮೇಳನ

೧೫ ನೆಯ ವಿಶ್ವ ಕನ್ನಡ ಸಂಸ್ಕೃತಿ  ಸಮ್ಮೇಳನ  ಯು . ಎ . ಇ . ಯ ರಾಜಧಾನಿ  ಅಬುಧಾಬಿಯಲ್ಲಿ ೨೨ ಮತ್ತು ೨೩ ಫೆಬ್ರವರಿ ೨೦೧೯ ರಂದು ಜರುಗಿತು. ಅಬುಧಾಬಿ ಕರ್ನಾಟಕ ಸಂಘ ಮತ್ತು ಹೃದಯವಾಹಿನಿ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದ  ಅಧ್ಯಕ್ಷತೆಯನ್ನು  ಡಾ.  ವಸುಂಧರಾ ಭೂಪತಿ (ಅಧ್ಯಕ್ಷೆ ಕನ್ನಡ ಪುಸ್ತಕ ಪ್ರಾಧಿಕಾರ ) ವಹಿಸಿದ್ದರು.

ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅವರ ನೇತೃತ್ವದಿಂದ ನಡೆದ ಸಮ್ಮೇಳನದಲ್ಲಿ ಉತ್ತಮ ಕಾರ್ಯಕ್ರಮಗಳು ಮೂಡಿ ಬಂದವು. ಯು .  ಎ. ಇ. ಯ. ಕನ್ನಡಿಗರ ಹೆಮ್ಮೆಯ ನಾಯಕ ಮತ್ತು ಅಬುದಾಬಿ ಕರ್ನಾಟಕ ಸಂಘದ ಮಹಾಪೋಷಕರಾದ  ಏನ್ . ಎಂ . ಸಿ . ಸಮೂಹ ಸಂಸ್ಥೆಯ ಅಧ್ಯಕ್ಷ  ಬಿ. ಆರ್ . ಶೆಟ್ಟಿಯವರು ಎರಡು ದಿನದ ಕಾರ್ಯಕ್ರಮದಲ್ಲಿ ಉಪಸ್ಥಿತಿರಿದ್ದು ಶುಭ ಹಾರೈಸಿದರು .

ಮೊದಲ ದಿನ ಸಾಂಪ್ರದಾಯಿಕ ಪೂರ್ಣ ಕುಂಭ , ಚಂಡೆ ನಾದದ ಮೂಲಕ ಅತಿಥಿಗಳನ್ನು ಸ್ವಾಗತಿಸಿ ವೇದಿಕೆಗೆ ಕರೆ ತರಲಾಯಿತು . ನಂತರ  ಪ್ರಾರ್ಥನೆ , ದೀಪ ಬೆಳಗಿಸಿ , ಯು . ಎ . ಇ . ಮತ್ತು ಭಾರತದ  ರಾಷ್ಟ್ರ ಗೀತೆ ಹಾಡಿ , ಗಣ್ಯರ ಪ್ರಾಸ್ತಾವಿಕ ಭಾಷಣದ ಮೂಲಕ ಸಮಾರಂಭ ಪ್ರಾರಂಭವಾಯಿತು.  ಕರ್ನಾಟಕದಿಂದ ಬಂದ ವಿವಿಧ ತಂಡಗಳ ನೃತ್ಯ , ಕಿಕ್ಕೇರಿ ಕೃಷ್ಣ ಮೂರ್ತಿ ತಂಡದವರಿಂದ ರಸಮಂಜರಿ , ಗೋಪಿಯವರಿಂದ ಮಿಮಿಕ್ರಿ , ಅಬು ಧಾಬಿಯ ಕನ್ನಡಿತಿಯರಿಂದ ಜಾನಪದ ನೃತ್ಯ ಸೊಗಸಾಗಿ ಮೂಡಿ ಬಂದವು . ಯು. ಎ . ಇ. ಕನ್ನಡಿಗರ ಕವಿ ಗೋಷ್ಠಿ ಸಭೆಗೆ ಕಳೆ ಹೆಚ್ಚಿಸಿತು . ‘’ಬುದ್ಧನ  ನಾಡು   ಭೂತಾನ್ ‘’ ಕೃತಿ   ಬಿಡುಗಡೆಯಾಯಿತು  . ಬೆಂಗಳೂರಿನ ಸ್ವಯಂ ಸೇವಾ ಸಂಸ್ಥೆಯೊಂದರ  ಶ್ರವಣ ದೋಷದ ಮಕ್ಕಳು ಮಾಡಿದ ಚಿತ್ರಕಲೆ , ಆಭರಣಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು .

ಎರಡೆನೆಯ ದಿನ, ಸುಮಧುರ ಗೀತೆ , ನೃತ್ಯ ದಿಂದ ಶುರುವಾದ ಕಾರ್ಯಕ್ರಮ ಮುಂದುವರಿದು  , ಎಂ . ಡಿ . ಕೌಶಿಕ್ ರವ ರು ಮ್ಯಾಜಿಕ್ ಜೊತೆಯಲ್ಲಿ ‘ಡಿ.ವಿ.ಜಿ . ಯವರ ಕಗ್ಗ ಮತ್ತು  ಜೀವನ ಮೌಲ್ಯ’ ದ  ಕುರಿತು ಉತ್ತಮ  ವಿವರಣೆ ನೀಡಿದರು.   ಮುಖ್ಯ ಮಂತ್ರಿ ಖ್ಯಾತಿಯ ಚಂದ್ರುವರು  ಅರ್ಧ ಘಂಟೆ ಸೊಗಸಾಗಿ ಕನ್ನಡತನದ ಬಗ್ಗೆ ಅತ್ಯುತ್ತಮ  ಭಾಷಣ ಮಾಡಿದರು .  ಅನಂತರ ನಡೆದ ಅನಿವಾಸಿ ಕನ್ನಡಿಗರಿಂದ ಮೂಡಿ ಬಂದ ‘ಹನಿಗವನ ಗೋಷ್ಠಿ’, ಸಭಿಕರನ್ನು ನಗೆ ಗಡಲಿನಲ್ಲಿ ತೇಲಿಸಿತು . ಮದ್ಯಾಹ್ನ ನಂತರ ಮಾಧ್ಯಮ ಗೋಷ್ಠಿಯಲ್ಲಿ ವಿಶ್ವವಾಣಿಯ ದಿನಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ , ಇಂದಿನ ಮಾಧ್ಯಮಗಳು ಎದುರಿಸುವ ಸವಾಲುಗಳನ್ನು ಹಂತ ಹಂತವಾಗಿ ವಿವರಿಸಿದರು . ಜೊತೆಗೆ ಸಭಿಕರೊಂದಿಗೆ  ಒಂದಷ್ಟು ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು . 

ಸಮಾರೋಪ ಸಮಾರಂಭದಲ್ಲಿ ಸಮಾಜ ಸೇವೆ , ಕನ್ನಡ ಸೇವೆ , ಸಾಹಿತ್ಯ , ಚಿತ್ರರಂಗ, ನೃತ್ಯ , ರಂಗಭೂಮಿ , ಪರಿಸರದ  ಕ್ಷೇತ್ರಗಳಲ್ಲಿ  ಎಲೆ ಮರೆಯ ಕಾಯಿಯಂತೆ  ಸೇವೆ ಸಲ್ಲಿಸಿದವರಿಗೆ ವಿಶ್ವಮಾನ್ಯ ಪ್ರಶಸ್ತಿ , ವಿಶ್ವ ಕನ್ನಡ ಸಮ್ಮೇಳನ ಪ್ರಶಸ್ತಿ  ನೀಡಿ ಗೌರವಿಲಾಯಿಸಿತು .  ಸಮ್ಮೇಳನಕ್ಕಾಗಿ ಕರುನಾಡಿನಿಂದ ಬಂದ ಗಣ್ಯರನ್ನು , ಬಿ . ಆರ್ . ಶೆಟ್ಟಿ ಯವರನ್ನು, ಸರ್ವೋತ್ತಮ ಶೆಟ್ಟಿಯವರನ್ನು ,  ದುಡಿದ ಮುಖ್ಯ ಸ್ವಯಂ ಸೇವಕರನ್ನು , ಸಹಕಾರ ನೀಡಿದ ಶ್ರಮಿಕರನ್ನು  ಆತ್ಮೀಯವಾಗಿ  ಗೌರವಿಸಲಾಯಿತು .

ಎರಡು ದಿನದ ಕಾರ್ಯಕ್ರಮ ಉಡುಪಿಯ ಅವಿನಾಶ್ ಕಾಮತ್ ರವರ ನಿರೋಪಣೆಯೊಂದಿಗೆ ಬಹಳ ಅಚ್ಚುಕಟ್ಟಾಗಿ ಮೂಡಿ ಬಂತು . ಈ ಕಾರ್ಯಕ್ರಮಕ್ಕೆ ವಿವಿಧ ತಂಡಗಳು , ಕಲಾವಿದರು , ಪುಟ್ಟ ಮಕ್ಕಳು , ಅವರ ಹೆತ್ತವರು ಕರುನಾಡಿನ ಬೇರೆ ಬೇರೆ ಭಾಗಗಳಿಂದ ಬಂದದ್ದು ವಿಶೇಷವಾಗಿತ್ತು .

ಒಟ್ಟಿನಲ್ಲಿ ಎರಡು ದಿನದ ಕಾರ್ಯಕ್ರಮ ಕನ್ನಡ ಸಾಹಿತ್ಯ, ಕಲೆ  ಮತ್ತು ಸಂಸ್ಕೃತಿ ಪ್ರೀಯರಿಗೆ ರಸದೌತಣ, ಸೇವಾ ನಿರತವರಿಗೆ ಸನ್ಮಾನ ,ಕಲಾವಿದರಿಗೆ ಪ್ರೋತ್ಸಾಹ ನೀಡಿತು . ಇಂದಿನ ನಾಗಾಲೋಟದ ತಂತ್ರಜ್ಞಾನದ ಯುಗದಲ್ಲಿ  , ಇಂತಹ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವುದು ಬಹಳ ಮುಖ್ಯ ವಾಗಿದೆ.

ಆದರೆ , ಈ ಸಮ್ಮೇಳನಕ್ಕೆ ಸಭಿಕರು ಕಡಿಮೆ ಬಂದದ್ದು ಎಲ್ಲೋ ಒಂದು ಕಡೆ ವಿಷಾದನೀಯ ಭಾವ ಮೂಡಿಸಿತು. ಕನ್ನಡ ಸಾಹಿತ್ಯ -ಕಲಾ  ಸೇವೆ ನಿರಂತರವಾಗಿ ನಡೆದು , ಕನ್ನಡದ ಹಿರಿಮೆ ಹೆಚ್ಚುವಂತಹ ಕಾರ್ಯಕ್ರಮಗಳಲ್ಲಿ  ಕನ್ನಡಿಗರ ಹೆಚ್ಚು ಹೆಚ್ಚು   ಪಾಲ್ಗೊಳ್ಳುವಿಕೆ ಬಹಳ ಅತ್ಯವಶ್ಯವಾಗಿದೆ .

ಇತೀ ನಿಮ್ಮೆಲ್ಲರ ಪ್ರೀತಿಯ  , ಅಬು ದಾಬಿ ಕರ್ನಾಟಕ ಸಂಘ

ಮರುಭೂಮಿಯ ಅರಬ್ ನಾಡಲ್ಲಿ  ೧೫ನೆಯ ವಿಶ್ವ ಕನ್ನಡ ಸಮ್ಮೇಳನ

೧೫ ನೆಯ ವಿಶ್ವ ಕನ್ನಡ ಸಂಸ್ಕೃತಿ  ಸಮ್ಮೇಳನ  ಯು . ಎ . ಇ . ಯ ರಾಜಧಾನಿ  ಅಬುಧಾಬಿಯಲ್ಲಿ ೨೨ ಮತ್ತು ೨೩ ಫೆಬ್ರವರಿ ೨೦೧೯ ರಂದು ಜರುಗಿತು. ಅಬುಧಾಬಿ ಕರ್ನಾಟಕ ಸಂಘ ಮತ್ತು ಹೃದಯವಾಹಿನಿ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದ  ಅಧ್ಯಕ್ಷತೆಯನ್ನು  ಡಾ.  ವಸುಂಧರಾ ಭೂಪತಿ (ಅಧ್ಯಕ್ಷೆ ಕನ್ನಡ ಪುಸ್ತಕ ಪ್ರಾಧಿಕಾರ ) ವಹಿಸಿದ್ದರು.

ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅವರ ನೇತೃತ್ವದಿಂದ ನಡೆದ ಸಮ್ಮೇಳನದಲ್ಲಿ ಉತ್ತಮ ಕಾರ್ಯಕ್ರಮಗಳು ಮೂಡಿ ಬಂದವು. ಯು .  ಎ. ಇ. ಯ. ಕನ್ನಡಿಗರ ಹೆಮ್ಮೆಯ ನಾಯಕ ಮತ್ತು ಅಬುದಾಬಿ ಕರ್ನಾಟಕ ಸಂಘದ ಮಹಾಪೋಷಕರಾದ  ಏನ್ . ಎಂ . ಸಿ . ಸಮೂಹ ಸಂಸ್ಥೆಯ ಅಧ್ಯಕ್ಷ  ಬಿ. ಆರ್ . ಶೆಟ್ಟಿಯವರು ಎರಡು ದಿನದ ಕಾರ್ಯಕ್ರಮದಲ್ಲಿ ಉಪಸ್ಥಿತಿರಿದ್ದು ಶುಭ ಹಾರೈಸಿದರು .

ಮೊದಲ ದಿನ ಸಾಂಪ್ರದಾಯಿಕ ಪೂರ್ಣ ಕುಂಭ , ಚಂಡೆ ನಾದದ ಮೂಲಕ ಅತಿಥಿಗಳನ್ನು ಸ್ವಾಗತಿಸಿ ವೇದಿಕೆಗೆ ಕರೆ ತರಲಾಯಿತು . ನಂತರ  ಪ್ರಾರ್ಥನೆ , ದೀಪ ಬೆಳಗಿಸಿ , ಯು . ಎ . ಇ . ಮತ್ತು ಭಾರತದ  ರಾಷ್ಟ್ರ ಗೀತೆ ಹಾಡಿ , ಗಣ್ಯರ ಪ್ರಾಸ್ತಾವಿಕ ಭಾಷಣದ ಮೂಲಕ ಸಮಾರಂಭ ಪ್ರಾರಂಭವಾಯಿತು.  ಕರ್ನಾಟಕದಿಂದ ಬಂದ ವಿವಿಧ ತಂಡಗಳ ನೃತ್ಯ , ಕಿಕ್ಕೇರಿ ಕೃಷ್ಣ ಮೂರ್ತಿ ತಂಡದವರಿಂದ ರಸಮಂಜರಿ , ಗೋಪಿಯವರಿಂದ ಮಿಮಿಕ್ರಿ , ಅಬು ಧಾಬಿಯ ಕನ್ನಡಿತಿಯರಿಂದ ಜಾನಪದ ನೃತ್ಯ ಸೊಗಸಾಗಿ ಮೂಡಿ ಬಂದವು . ಯು. ಎ . ಇ. ಕನ್ನಡಿಗರ ಕವಿ ಗೋಷ್ಠಿ ಸಭೆಗೆ ಕಳೆ ಹೆಚ್ಚಿಸಿತು . ‘’ಬುದ್ಧನ  ನಾಡು   ಭೂತಾನ್ ‘’ ಕೃತಿ   ಬಿಡುಗಡೆಯಾಯಿತು  . ಬೆಂಗಳೂರಿನ ಸ್ವಯಂ ಸೇವಾ ಸಂಸ್ಥೆಯೊಂದರ  ಶ್ರವಣ ದೋಷದ ಮಕ್ಕಳು ಮಾಡಿದ ಚಿತ್ರಕಲೆ , ಆಭರಣಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು .

ಎರಡೆನೆಯ ದಿನ, ಸುಮಧುರ ಗೀತೆ , ನೃತ್ಯ ದಿಂದ ಶುರುವಾದ ಕಾರ್ಯಕ್ರಮ ಮುಂದುವರಿದು  , ಎಂ . ಡಿ . ಕೌಶಿಕ್ ರವ ರು ಮ್ಯಾಜಿಕ್ ಜೊತೆಯಲ್ಲಿ ‘ಡಿ.ವಿ.ಜಿ . ಯವರ ಕಗ್ಗ ಮತ್ತು  ಜೀವನ ಮೌಲ್ಯ’ ದ  ಕುರಿತು ಉತ್ತಮ  ವಿವರಣೆ ನೀಡಿದರು.   ಮುಖ್ಯ ಮಂತ್ರಿ ಚಂದ್ರುರವರು  ಅರ್ಧ ಘಂಟೆ ಸೊಗಸಾಗಿ ಕನ್ನಡತನದ ಬಗ್ಗೆ ಅತ್ಯುತ್ತಮ  ಭಾಷಣ ಮಾಡಿದರು .  ಅನಂತರ ನಡೆದ ಅನಿವಾಸಿ ಕನ್ನಡಿಗರಿಂದ ಮೂಡಿ ಬಂದ ‘ಹನಿಗವನ ಗೋಷ್ಠಿ’, ಸಭಿಕರನ್ನು ನಗೆ ಗಡಲಿನಲ್ಲಿ ತೇಲಿಸಿತು . ಮದ್ಯಾಹ್ನ ನಂತರ ಮಾಧ್ಯಮ ಗೋಷ್ಠಿಯಲ್ಲಿ ವಿಶ್ವವಾಣಿಯ ದಿನಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ , ಇಂದಿನ ಮಾಧ್ಯಮಗಳು ಎದುರಿಸುವ ಸವಾಲುಗಳನ್ನು ಹಂತ ಹಂತವಾಗಿ ವಿವರಿಸಿದರು . ಜೊತೆಗೆ ಸಭಿಕರೊಂದಿಗೆ  ಒಂದಷ್ಟು ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು .