ಭಂಡಾರ್ಕಾರ್ಸ್ ಯುಥ್ ರೆಡ್‍ಕ್ರಾಸ್ ವಿಂಗ್, ಎನ್.ಎಸ್.ಎಸ್ ಮತ್ತು ನೆಹರು ಯುವಕೇಂದ್ರ, ಉಡುಪಿ ಇವರ ಸಹಯೋಗದಲ್ಲಿ  ವಿವೇಕಾನಂದರ ಜನ್ಮದಿನಾಚರಣೆ ಮತ್ತು ರಾಷ್ಟ್ರೀಯ ಯುವಸಪ್ತಾಹದ  ಸಮಾರೋಪ.

JANANUDI.COM NETWRK

 

 

 

 

ಭಂಡಾರ್ಕಾರ್ಸ್ ಯುಥ್ ರೆಡ್‍ಕ್ರಾಸ್ ವಿಂಗ್, ಎನ್.ಎಸ್.ಎಸ್ ಮತ್ತು ನೆಹರು ಯುವಕೇಂದ್ರ, ಉಡುಪಿ ಇವರ ಸಹಯೋಗದಲ್ಲಿ  ವಿವೇಕಾನಂದರ ಜನ್ಮದಿನಾಚರಣೆ ಮತ್ತು ರಾಷ್ಟ್ರೀಯ ಯುವಸಪ್ತಾಹದ  ಸಮಾರೋಪ.

 

 

 

ಕುಂದಾಪುರ: ಜನೆವರಿ 18ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಯುಥ್ ರೆಡ್‍ಕ್ರಾಸ್ ವಿಂಗ್, ಎನ್.ಎಸ್.ಎಸ್, ಮತ್ತು ನೆಹರು ಯುವಕೇಂದ್ರ, ಉಡುಪಿ ಇವರ ಸಹಯೋಗದಲ್ಲಿ ನಡೆದ ವಿವೇಕಾನಂದರ ಜನ್ಮದಿನಾಚರಣೆ ಮತ್ತು ರಾಷ್ಟ್ರೀಯ ಯುವಸಪ್ತಾಹ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಲೇಜಿನ ಕನ್ನಡ ವಿಬಾಗದ ಪ್ರಾಧ್ಯಾಪಕರಾದ ಡಾ.ಅರುಣಕುಮಾರ ಎಸ್.ಆರ್ ಮಾತನಾಡಿ ವಿವೇಕಾನಂದರ ಧೀಮಂತ ವ್ಯಕ್ತಿತ್ವ ಮತ್ತು ಅವರ ಜೀವನದ ಕುರಿತು ಉದಾಹರಣೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವಿವೇಕಾನಂದರ ಜನ್ಮದಿನಾಚರಣೆ ಮತ್ತು ರಾಷ್ಟ್ರೀಯ ಯುವಸಪ್ತಾಹ ಕಾರ್ಯಕ್ರಮದ ಪ್ರಯುಕ್ತ ನಡೆದ ವಿವಿಧ ಸ್ಪರ್ಧಾಗಳಾದ ಚಿತ್ರಕಲೆ, ಬಿತ್ತಿಚಿತ್ರ ರಚನೆ, ಪ್ರಬಂಧ ಸ್ಪರ್ಧೆ ಮತ್ತು ಭಾಷಣ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಯುಥ್ ರೆಡ್‍ಕ್ರಾಸ್ ವಿಂಗ್ ಅಧಿಕಾರಿ ಪ್ರೊ.ಸತ್ಯನಾರಾಯಣ, ಮತ್ತು ವಿದ್ಯಾರಾಣಿ ಮತ್ತು ಎನ್.ಎಸ್.ಎಸ್ ಅಧಿಕಾರಿ ಅರುಣ ಎ.ಎಸ್. ಉಪಸ್ಥಿತರಿದ್ದರು.
ಉಪನ್ಯಾಸಕರಾದ ರೋಹಿಣಿ ಹೆಚ್.ಬಿ ಕಾರ್ಯಕ್ರಮ ನಿರ್ವಹಿಸಿದರು.