JANANUDI.COM NETWORK
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಐಕ್ಯೂಎಸಿ ಮತ್ತುಅರ್ಥಶಾಸ್ತ್ರ ವಿಭಾಗದ ಸಹಯೋಗದಲ್ಲಿ “ಭಾರತದ ಸುಸ್ಥಿರ ಅಭಿವೃದ್ಧಿ ಗುರಿ: ವಿಶ್ಲೇಷಣಾತ್ಮಕ ವಿಮರ್ಶೆ” ಎಂಬ ವಿಷಯದ ಕುರಿತು ರಾಷ್ಟ್ರೀಯ ವೆಬಿನಾರ್ ನಡೆಯಿತು.
ಸಂಪನ್ಮೂಲ ವ್ಯಕ್ತಿಗಲಾಗಿ ಆಗಮಿಸಿದ್ದ ಕೋಟೇಶ್ವರ ದಎಸ್.ಕೆವಿ.ಎಮ್.ಎಸ್. ಸರಕಾರಿ ಪ್ರಥಮ ದರ್ಜೆಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಸುಬ್ರಮಣ್ಯ.ಎ ಮಾತನಾಡಿ ಬಾರತೀಯ 1974ರ ಸಂದರ್ಭದಲ್ಲಿ ಬಾರತೀಯ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆ, ಆರ್ಥಿಕ ಪರಿಸ್ಥಿತಿಯ ರೂಪು ರೇಷೆಕುರಿತು ತಿಳಿಸಿದರು.
ಹಾಗೆಯೇ ಸುಸ್ಥಿರ ಅಭಿವೃದ್ಧಿಯನ್ನು ಯೋಜಿತವಾಗಿ ಮಾಡುವ ದಾರಿಯಲ್ಲಿನ ಸವಾಲುಗಳು ಮತ್ತುಆರ್ಥಿಕ ಸುಸ್ಥಿರತೆಯ ಗುರಿ ತಲುಪುವಲ್ಲಿಇರುವಂತಹ ಬಹು ಮುಖ್ಯವಾಗಿ ಹಸಿರು ಕ್ರಾಂತಿ ಮತ್ತು ಪರಿಸರ ಮತ್ತು ಸಮಾಜದೊಂದಿಗೆ ಇವೆಲ್ಲವನ್ನು ಕುರಿತು ಅವರು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ, ಐಕೂs್ಯಎಸಿಯ ಸಂಯೋಜಕರಾದ ಶಶಿಕಾಂತ್ ಹತ್ವಾರ್, ಕಾಲೇಜಿನ ಐಟಿ ತಂಡದ ಸಂಯೋಜಕರಾದ ಡಾ.ನಟರಾಜ್.ಎಂ.ಬಿ ಉಪಸ್ಥಿತರಿದ್ದರು.
ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥರಾದ ಮಂಜುನಾಥ್ಸ್ವಾಗತಿಸಿ ಪರಿಚಯಿಸಿದರು. ಉಪನ್ಯಾಸಕ ದುರ್ಗಾಪ್ರಸಾದ್ ಮಯ್ಯ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕಿ ಸುರಂಜಿನಿ ವಂದಿಸಿದರು.
ಕಾಲೇಜಿನ ಐಟಿ ತಂಡದ ಅಮರ್ ಸಿಕ್ವೆರಾ, ಗುರುದಾಸ್ ಪ್ರಭು ಶಂಕರನಾರಾಯಣ ಉಪಾಧ್ಯಾಯ, ತಾಂತ್ರಿಕವಾಗಿ ಸಹಕರಿಸಿದರು.