JANANUDI.COM NETWORK
ಭಂಡಾರ್ಕಾರ್ಸ್ ಕಾಲೇಜಿನ ಸಂಸ್ಥಾಪಕರ ದಿನಾಚರಣೆಯ ಪ್ರಯುಕ್ತ ಲಲಿತಾ ಕಲಾ ಸಂಘದ ಆಶ್ರಯದಲ್ಲಿ ಎ.ಎಸ್. ಅಂತರ್ ಕಾಲೇಜು ಸಂಗೀತ ಸ್ಪರ್ಧೆ
ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನ ಸಂಸ್ಥಾಪಕರ ದಿನಾಚರಣೆಯ ಪ್ರಯುಕ್ತ ಲಲಿತಾ ಕಲಾ ಸಂಘದ ಆಶ್ರಯದಲ್ಲಿ ನಡೆದ ಎ.ಎಸ್. ಅಂತರ್ ಕಾಲೇಜು ಸಂಗೀತ ಸ್ಪರ್ಧೆಯಲ್ಲಿ ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು.
ಒಟ್ಟು ಏಳು ವಿಧದ ಸಂಗೀತ ಸ್ಪರ್ಧೆಗಳು ನಡೆಯಿತು. ಸ್ಪರ್ಧೆಯ ಫಲಿತಾಂಶ:
ಕನ್ನಡ ಭಾವಗೀತೆಗಳು: ಪ್ರಥಮ: ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು, ಉಡುಪಿ, ದ್ವಿತೀಯ: ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ, ತೃತೀಯ- ಆರ.ಎನ್.ಶೆಟ್ಟಿ ಕಾಲೇಜು, ಕುಂದಾಪುರ
ಕನ್ನಡ ಜಾನಪದಗೀತೆಗಳು: ಪ್ರಥಮ- ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ, ದ್ವಿತೀಯ- ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು, ಉಡುಪಿ,, ತೃತೀಯ- ಪೂರ್ಣಪ್ರಜ್ಞ ಕಾಲೇಜು, ಉಡುಪಿ,
ಶಾಸ್ತ್ರೀಯ ಹಾಡುಗಾರಿಕೆ :- ಪ್ರಥಮ- ಪೂರ್ಣಪ್ರಜ್ಞ ಕಾಲೇಜು, ಉಡುಪಿ, ದ್ವಿತೀಯ- ಕೆನರಾ ಕಾಲೇಜು ಮಂಗಳೂರು, ತೃತೀಯ- ಉಪೇಂದ್ರ ಪೈ ಸ್ಮಾರಕ ಕಾಲೇಜು , ಉಡುಪಿ
ಶಾಸ್ತ್ರೀಯ ವಾದ್ಯ ಸಂಗೀತ- ಪ್ರಥಮ-ಕೆನರಾ ಕಾಲೇಜು ಮಂಗಳೂರು, ದ್ವಿತೀಯ- ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು, ಉಡುಪಿ, ತೃತೀಯ- ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ,
ದಾಸ ಕೀರ್ತನೆಗಳು:- ಪ್ರಥಮ – ಕೆನರಾ ಕಾಲೇಜು ಮಂಗಳೂರು, ದ್ವಿತೀಯ- ಉಪೇಂದ್ರ ಪೈ ಸ್ಮಾರಕ ಕಾಲೇಜು , ಉಡುಪಿ, ತೃತೀಯ- ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ,
ಚಿತ್ರಗೀತೆಗಳು: ಪ್ರಥಮ- ಶ್ರೀ ಶಾರದಾ ಕಾಲೇಜು, ಬಸ್ರೂರು, ದ್ವಿತೀಯ- ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು, ಉಡುಪಿ, ತೃತೀಯ – ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ
ಸಮೂಹ ಗಾನ: ಪ್ರಥಮ-ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು, ಉಡುಪಿ, ದ್ವಿತೀಯ- ಪೂರ್ಣಪ್ರಜ್ಞ ಕಾಲೇಜು, ಉಡುಪಿ, ತೃತೀಯ- ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಉಡುಪಿ ಪಡೆದರು.
ಸಂಸ್ಥಾಪಕರ ದಿನಾಚರಣೆಯ ಪ್ರಯುಕ್ತ ನಡೆದ ಎ.ಎಸ್. ಅಂತರ್ ಕಾಲೇಜು ಸಂಗೀತ ಸ್ಪರ್ಧೆಯನ್ನು ಪ್ರೊ.ಅರವಿಂದ ಹೆಬ್ಬಾರ್, ವಿಶ್ವಸ್ಥರು, ರಜನಿ ಮೆಮೋರಿಯಲ್ ಟ್ರಸ್ಟ್ ಉಡುಪಿ ಇವರು ಉದ್ಘಾಟಿಸಿದರು.
ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಕೆ.ಶಾಂತಾರಾಮ್ ಪ್ರಭು, ಪ್ರಬಾರ ಪ್ರಾಂಶುಪಾಲರಾದ ಡಾ. ರೇಖಾ.ವಿ.ಬನ್ನಾಡಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ರಾಮಚಂದ್ರ ಎಸ್., ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ.ಗೊಂಡ, ಲಲಿತಾ ಕಲಾ ಸಂಘದ ಸಂಯೋಜಕರಾದ ಅರ್ಚನಾ ಅರವಿಂದ ಉಪಸ್ಥಿತರಿದ್ದರು.
ವಿವಿಧ ಸ್ಪರ್ಧೆಗಳಿಗೆ ತೀರ್ಪುಗಾರರಾಗಿ ಪ್ರೊ.ಕೆ.ವಿ.ಕೆ ಐತಾಳ್,ಪದ್ಮಿನಿ ಎಸ್.ಪ್ರಭು, ನಳಿನಿ ವಿ.ರಾವ್, ಗಣೇಶ್ ಗಂಗೊಳ್ಳಿ, ಮೂಕಾಂಬಿಕಾ ಉಡುಪ, ರಮ್ಯ ರವಿ ಉಪ್ಪುಂದ ಆಗಮಿಸಿದ್ದರು.