ಭಂಡಾರ್ಕಾರ್ಸ್ ಕಾಲೇಜಿನಲ್ಲಿಇಂಗ್ಲೀಷ್, ಮನಃಶಾಸ್ತ್ರ ಮತ್ತು ಪತ್ರಿಕೋದ್ಯಮ ವಿಭಾಗಗಳ ಸಹಯೋಗದಲ್ಲಿ ನಡೆದ ಸಂವೇದನಾ– 2020 ಬಹುಮಾನ ವಿತರಣಾಕಾರ್ಯಕ್ರಮ

JANANUDI.COM NETWORK

 

 

ಭಂಡಾರ್ಕಾರ್ಸ್ ಕಾಲೇಜಿನಲ್ಲಿಇಂಗ್ಲೀಷ್, ಮನಃಶಾಸ್ತ್ರ ಮತ್ತು ಪತ್ರಿಕೋದ್ಯಮ ವಿಭಾಗಗಳ ಸಹಯೋಗದಲ್ಲಿ ನಡೆದ ಸಂವೇದನಾ– 2020 ಬಹುಮಾನ ವಿತರಣಾಕಾರ್ಯಕ್ರಮ

 

 

ಕುಂದಾಪುರ: ಯಶಸ್ಸುಎನ್ನುವುದು ಸುಲಭಕ್ಕೆ ಸಿಗುವುದಿಲ್ಲ. ಅದರ ಹಿಂದೆತುಂಬಾ ಪರಿಶ್ರಮವಿದೆ. ಎಂದುಉದಯವಾಣಿ ಪತ್ರಿಕೆಯ ವರದಿಗಾರರಾದ ಲಕ್ಷ್ಮಿ ಮಚ್ಚಿನಅವರು ಹೇಳಿದರು.
ಅವರು ಮಾರ್ಚ್ 13ರಂದು ಇಲ್ಲಿನ ಭಂಡಾರ್ಕಾರ್ಸ್‍ಕಾಲೇಜಿನಲ್ಲಿಇಂಗ್ಲೀಷ್, ಮನಃಶಾಸ್ತ್ರ ಮತ್ತು ಪತ್ರಿಕೋದ್ಯಮ ವಿಭಾಗಗಳ ಸಹಯೋಗದಲ್ಲಿ ನಡೆದ ಸಂವೇದನಾ– 2020 ಬಹುಮಾನ ವಿತರಣಾಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಧನೆಅನ್ನುವುದು ಸತತ ಪರಿಶ್ರಮ ಮತ್ತುಕಾಯುವಿಕೆಯಲ್ಲಿ ಸಿಗುವಂತಹ ಅಪ್ಯಾಯಮಾನ ಕುಷಿ ಪರಿಪೂರ್ಣಯಶಸ್ಸಾಗಿದೆ. ಜೀವನದಲ್ಲಿ ಅವಕಾಶಗಳು ನಮಗೆ ಸಿಕ್ಕಾಗ ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಮತ್ತೆ ಆ ಅವಕಾಶಗಳು ನಮಗೆ ಒದಗಿ ಬರುವುದಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಅಧ್ಯಕ್ಷತೆಯನ್ನುಕಾಲೇಜಿನ ಪ್ರಾಂಶುಪಾಲರಾದಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.
ಇಂಗ್ಲೀಷ್ ವಿಭಾಗ ಮುಖ್ಯಸ್ಥರಾದ ಮೀನಾಕ್ಷಿಎನ್,ಎಸ್ ಸ್ವಾಗತಿಸಿದರು. ಪತ್ರಿಕೋದ್ಯಮ ವಿಭಾಗದ ಸುಮಲತಾ ಪ್ರಾಸ್ರಾವಿಕವಾಗಿ ಮಾತನಾಡಿದರು. ಮನಃಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸವಿತಾ ಕೆ ವಂದಿಸಿದರು.
ವಿದ್ಯಾರ್ಥಿನಿಯರಾದಕೀರ್ತಿಎಸ್, ಮೇಘನಾ ಪ್ರಭು ಮತ್ತುಗೌತಮಿಗಾಣಿಗ ಅನಿಸಿಕೆ ವ್ಯಕ್ತಪಡಿಸಿದರು.
ವಿದ್ಯಾರ್ಥಿನಿ ಪ್ರಿಯಾ ಮಂಜದೇವಾಡಿಗಕಾರ್ಯಕ್ರಮ ನಿರ್ವಹಿಸಿದರು. ಸಾಹಿತ್ಯಎಂ.ದೇವರಾಜ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಶರಧಿ ಅತಿಥಿಗಳನ್ನು ಪರಿಚಯಿಸಿದರು.