ಭಂಡಾರ್ಕಾರ್ಸ್ ಕಾಲೇಜಿನಲ್ಲಿ “ನಳ ಕಾರ್ಕೋಟಕ” ಯಕ್ಷಗಾನ ಪ್ರದರ್ಶನ

JANANUDI.COM NETWORK

ಭಂಡಾರ್ಕಾರ್ಸ್ ಕಾಲೇಜಿನಲ್ಲಿ “ನಳ ಕಾರ್ಕೋಟಕ” ಯಕ್ಷಗಾನ ಪ್ರದರ್ಶನ


ಕುಂದಾಪುರ: ಯಕ್ಷಗಾನ ಮತ್ತು ರಂಗ ಕಲೆಗಳು ಮುಖಾಮುಖಿಯಾಗಬೇಕು ಹೀಗೆ ಪರಸ್ಪರ ಸಂವಾದಿಯಾಗಿ ಸೇರಿದಾಗ ಯಕ್ಷಗಾನ ಕಲೆಯಲ್ಲಿ ಹೆಚ್ಚು ಪರಿಪೂರ್ಣತೆ ಪಡೆಯಲು ಸಾಧ್ಯ ಎಂದು ಉಡುಪಿಯ ಕಾರಂಗದ ನಿರ್ದೇಶಕರಾದ ಮುರಳಿ ಕಡೇಕಾರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಇಲ್ಲಿನ ಆಗಸ್ಟ್ 21ರಂದು ಭಂಡಾರ್ಕಾರ್ಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರ ಮತ್ತು ಭಾರತ ಸರಕಾರದ ಸಂಸ್ಕøತಿ ಸಚಿವಾಲಯದ ಸಹಯೋಗದಲ್ಲಿ ನಡೆದ “ನಳ ಕಾರ್ಕೋಟಕ” ಯಕ್ಷಗಾನ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ರಂಗಕಲೆಯ ಪ್ರದರ್ಶನ ಮತ್ತು ಕಲಿಯುವಿಕೆ ಯಕ್ಷಗಾನಕ್ಕಿಂತ ಭಿನ್ನವಾಗಿದೆ. ರಂಗಕಲೆಯ ಅಧ್ಯಯನದಲ್ಲಿ ಪ್ರತಿಯೊಂದು ವಿಷಯದಲ್ಲೂ ಅಂದರೆ ಬೆಳಕು, ಧ್ವನಿ, ವಿನ್ಯಾಸ, ಹಾವಭಾವ ಇವೆಲ್ಲವೂಗಳಲ್ಲೂ ಒಂದು ತೆರನಾದ ಶಿಸ್ತುಬದ್ಧತೆ, ಆಂಗಿಕ ರಚೆನೆ ಮತ್ತು ಪ್ರಯತ್ನಗಳ ಫಲಿತಾಂಶ ಕಾಣುತ್ತದೆ. ಆದರೆ ಯಕ್ಷಗಾನದ ವೃತ್ತಿ ಕಲಾವಿದರಾಗಲಿ ಅಥವಾ ಭಾಗವತಿಕೆಯಾಗಲಿ ಅಲ್ಲಿ ಯಾವುದೇ ಪರಿಪೂರ್ಣ ಕಲಿಯುವಿಕೆ ಇರುವುದಿಲ್ಲ. ಶಿಸ್ತುಬದ್ಧ ಕಲಿಯುವಿಕೆ ಯಕ್ಷಗಾನದಲ್ಲಿ ತುಂಬಾ ಅಗತ್ಯವಾಗಿ ಬೇಕಾಗಿದೆ. ಇಲ್ಲದಿದ್ದರೆ ಕೆಲವು ಭಾಗವತರ ಧ್ವನಿ ಎಳೆವೆಯಲ್ಲಿ ಹೋಗುತ್ತದೆ. ವೇಷಭೂಷಣಗಳಲ್ಲಿಯೂ ಒಂದು ರೀತಿಯ ವಿನ್ಯಾಸವಾಗಲಿ ಕಂಡುಬರಲು ಸಾಧ್ಯವಿಲ್ಲವಾಗಿದೆ. ಮುಂದಿನ ದಿನಗಳಲ್ಲಿ ರಂಗ ಅಧ್ಯಯನ ಕೇಂದ್ರವು ಈ ತೆರನಾದ ಅಧ್ಯಯನಕ್ಕೆ ಮತ್ತು ತರಬೇತಿಗೆ ಅನುವು ಮಾಡಿಕೊಡಬೇಕು. ಯಕ್ಷಗಾನ ಕಲಾವಿದರಿಗೆ ಕಲೆಯ ಆಸಕ್ತಿಯ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕು ಎಂದು ಹೇಳಿದರು.
ಕುಂದಾಪುರದಲ್ಲಿ ರಂಗ ಅಧ್ಯಯನ ಕೇಂದ್ರ ಅಥವಾ ಉಡುಪಿ ರಂಗಭೂಮಿಯಾಗಲಿ ರಂಗ ಕಲೆಗೆ ಸಂಬಂಧಪಟ್ಟಂತೆ ಬಹಳ ಕೆಲಸ ಮಾಡಿವೆ ಆದರೆ ಅದು ಸಾಮಾನ್ಯ ಜನರಿಗೆ ಮಾಧ್ಯಮಗಳ ಮೂಲಕ ತಲುಪುತ್ತಿಲ್ಲ. ಅವು ಹೊರ ಪ್ರಪಂಚಕ್ಕೆ ಮೀಸಲಾಗಿವೆ. ಉದಾಹರಣೆಗೆ ಕುಂದಾಪುರದ ಮಾಹಿತಿ ಉಡುಪಿಗೆ ಅಥವಾ ಅಲ್ಲಿನ ಜನರಿಗೆ ಪಡೆಯಲು ಸಾಧ್ಯವಾಗುತ್ತಿಲ್ಲ. ನಮ್ಮ ಸಂಸ್ಥೆ ಯಕ್ಷಗಾನ ಕಲೆಗೆ ಸಂಬಂಧಪಟ್ಟಂತೆ ಮತ್ತು ಕಲಾವಿದರಿಗೆ ಸಾಕಷ್ಟು ಬೇರಬೇರೆ ರೂಪದಲ್ಲಿ ಸಹಾಯ ತರಬೇತಿ ನೀಡುತ್ತಿದೆ. ಸಂಸ್ಥೆ ಮನಃಪೂರ್ವಕವಾಗಿ ಈ ಸಮಾಜಮುಖಿ ಕಾರ್ಯವನ್ನು ನೆರವೇರಿಸಿಕೊಂಡು ಬರುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ಮತ್ತು ರಂಗ ಅಧ್ಯಯನ ಕೇಂದ್ರದ ವಿಶ್ವಸ್ಥರಾದ ಕೆ.ಶಾಂತಾರಾಮ ಪ್ರಭು ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಾಲಿಗ್ರಾಮ ಮೇಳದ ಯಜಮಾನರಾದ ಕಿಶನ್ ಹೆಗ್ಡೆ, ಭಂಡಾರ್ಕಾರ್ಸ್ ಕಾಲೇಜಿನ ಮತ್ತು ರಂಗ ಅಧ್ಯಯನ ಕೇಂದ್ರದ ವಿಶ್ವಸ್ಥರಾದ ರಾಜೇಂದ್ರ ತೋಳಾರ್, ರಂಗ ನಿರ್ದೇಶಕರಾದ ಗೋಪಾಲಕೃಷ್ಣ ನಾಯರಿ, ರಂಗ ಅಧ್ಯಯನ ಕೇಂದ್ರದ ಸಂಚಾಲಕರಾದ ಪ್ರೊ|ವಸಂತ ಬನ್ನಾಡಿ ಉಪಸ್ಥಿತರಿದ್ದರು.
ರಂಗ ಅಧ್ಯಯನ ಕೇಂದ್ರದ ಶಿಕ್ಷಕ ಕೀರ್ತಿಪ್ರಸಾದ್ ಕಾರ್ಯಕ್ರಮ ನಿರ್ವಹಿಸಿ, ಸ್ವಾಗತಿಸಿ ವಂದಿಸಿದರು. ನಂತರ “ನಳ ಕಾರ್ಕೋಟಕ” ಯಕ್ಷಗಾನ ಪ್ರದರ್ಶನ ನಡೆಯಿತು. ಶ್ರೀ ಪ್ರಸಾದ್, ಮೊಗಬೆಟ್ಟು ಮದ್ದಲೆಯಲ್ಲಿ ಶ್ರೀ ಎನ್.ಜಿ.ಹೆಗಡೆ, ಯಲ್ಲಾಪುರ, ಚಂಡೆಯಲ್ಲಿ ಶ್ರೀ ಶ್ರೀನಿವಾಸ ಪ್ರಭು ಸಹಕರಿಸಿದರು.
ಮುಮ್ಮೇಳದಲ್ಲಿ ಬಾಹುಕನಾಗಿ ಶ್ರೀ ರಾಮಚಂದ್ರ ಹೆಗಡೆ, ಕೊಂಡದಕುಳಿ, ಋತುಪರ್ಣನಾಗಿ ಶ್ರೀ ಶಶಾಂಕ್ ಪಟೇಲ್, ಕೆಳಮನೆ, ದಮಯಂತಿಯಾಗಿ, ಶ್ರೀ ಪ್ರತೀಶ್, ಬ್ರಹ್ಮಾವರ, ಸುಬಾಹುವಾಗಿ ಶ್ರೀ ನರಸಿಂಹ ತುಂಗ, ಕೋಟ, ಛೇದಿರಾಣಿಯಾಗಿ ಶ್ರೀ ಸ್ಪೂರ್ತಿ ಭಟ್, ಮಂದಾರ್ತಿ ಅಭಿನ¬ಸಿದರು.