ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಷನ್ ಮತ್ತು ಇಂಟರ್ನಲ್ ಕ್ವಾಲಿಟಿ ಅಶ್ಯುರನ್ಶ್ ಕೋಶ ಇದರ ಸಹಯೋಗದಲ್ಲಿ “ಆನ್ ಲೈನ್ ತರಗತಿಯ ಪ್ರೆಸೆಂಟೇಶನ್ ವಿನ್ಯಾಸ” ರಾಷ್ಟ್ರೀಯ ವೆಬಿನಾರ್

JANANUDI.COM NETWORK

ಕುಂದಾಪುರ: ನವೆಂಬರ್ 6ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಷನ್ ಮತ್ತು ಇಂಟರ್ನಲ್ ಕ್ವಾಲಿಟಿ ಅಶ್ಯುರನ್ಶ್ ಕೋಶ ಇದರ ಸಹಯೋಗದಲ್ಲಿ “ಆನ್ ಲೈನ್ ತರಗತಿಯ ಪ್ರೆಸೆಂಟೇಶನ್ ವಿನ್ಯಾಸ” ಕುರಿತು ರಾಷ್ಟ್ರೀಯ ವೆಬಿನಾರ್ ನಡೆಯಿತು.
ಮಣಿಪಾಲದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಇಲ್ಲಿನ ಆನ್ ಲೈನ್ ಶಿಕ್ಷಣ ಕೇಂದ್ರದ ನಿರ್ದೇಶಕರಾದ ಡಾ. ಮನೋಜ್ ಕುಮಾರ್ ನಾಗಸಂಪಿಗೆ ಮಾತನಾಡಿ ಆನ್ಲೈನ್ ತರಗತಿಗೆ ಪ್ರೆಸೆಂಟೇಶನ್ ತಯಾರಿಸುವ ಸುಲಭದ ಉಪಯುಕ್ತ ವಿಧಾನಗಳನ್ನು ತಿಳಿಸಿದರು.
2000 ಜನ ನೋಂದಾಯಿಸಿ 1400 ಜನರು ವೆಬಿನಾರ್ ನಲ್ಲಿ ಭಾಗವಹಿಸಿದ್ದರು. ಅದರಲ್ಲಿ 17 ದೇಶಗಳ ಅಂತರಾಷ್ಟ್ರೀಯ ಮಟ್ಟದಲ್ಲಿ 54 ಜನರು ಭಾಗವಹಿಸಿದ್ದರು.
ಕಾಲೇಜಿನ ಐ.ಟಿ ತಂಡದ ಅಮರ್ ಸಿಕ್ವೆರಾ ನಿರ್ವಹಿಸಿ ಸ್ವಾಗತಿಸಿದರು.
ಕಾಲೇಜಿನ ಐಟಿ ತಂಡದ ಅಮರ್ ಸಿಕ್ವೆರಾ ಗಣೇಶ್ ಕುಮಾರ್ ಗುರುದಾಸ್ ಪ್ರಭು ಮತ್ತು ಪ್ರವೀಣ್ ಸಹಕರಿಸಿದರು.
ಐಟಿ ತಂಡದ ಸಂಯೋಜಕರಾದ ನಟರಾಜ್ ಎಂ.ಬಿ ಮತ್ತು ಐಕ್ಯೂಎಸಿ ಸಂಯೋಜಕರಾದ ಶಶಿಕಾಂತ್ ಹತ್ವಾರ್ ಉಪಸ್ಥಿತರಿದ್ದರು.