JANANUDI.COM NETWORK
ಕುಂದಾಪುರ: ಡಿಸೆಂಬರ್ 5ರಂದು ಇಲ್ಲಿನ ಭಂಡಾರ್ಕಾರ್ಸ್ಕಾಲೇಜಿನಲ್ಲಿ ಸಂಸ್ಥಾಪಕರ ಸಂಸ್ಮರಣೆ ಕಾರ್ಯಕ್ರಮ ನಡೆಯಿತು.
ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಶ್ರೀಕಾಂತ್, ರೀಜನಲ್ ಹೆಲ್ತ್ಕೇರ್ಗ್ರೂಪ್,ಸಿಂಗಾಪುರ ಇವರು ಮಾತನಾಡಿ“ಶ್ರೇಷ್ಠ ಮತ್ತುಉದಾತ್ತಜೀವನ” ಎಂಬ ವಿಷಯದ ನೆಲೆಯಲ್ಲಿ ಮಾತನಾಡಿ ಬದುಕು ನಮ್ಮವಿಚಾರಗಳಿಗೆ ಪೂರಕವಾಗಿರುತ್ತದೆ. ಅಮೂಲ್ಯವಾದ ಈ ಬದುಕು ಸದಾಉದಾತ್ತ ಆಲೋಚನೆಗಳೊಂದಿಗೆ ಖುಷಿಯಾಗಿರಬೇಕು. ನಮ್ಮನ್ನು ನಾವು ಚೆನ್ನಾಗಿ ಖುಷಿಯಾಗಿರಿಸಿಕೊಳ್ಳಬೇಕೆಂದರೆ ಇರುವ ಸಮಯದಲ್ಲಿ ಒಳ್ಳೆಯ ವಿಚಾರಗಳನ್ನು ಸಹ ಅಳವಡಿಸಿಕೊಳ್ಳಬೇಕು. ಯಾಕೆಂದರೆ ಸಮಯವೆಂದಿಗೂ ನಮಗಾಗಿ ಕಾಯುವುದಿಲ್ಲ’ ಎಂದು ಹೇಳಿದರು.
ಅಲ್ಲದೇನಮ್ಮ ಶ್ರೇಷ್ಠ ವಿಚಾರಗಳು ನಮ್ಮೊಳಗೆ ಪರಿಪೂರ್ಣತೆಯನ್ನುರೂಪಿಸುತ್ತದೆ. ನಿರಂತರವಾಗಿಉದಾತ್ತ ಮೌಲ್ಯಗಳ ನೆಲೆಯಲ್ಲಿ ನಮ್ಮ ಬದುಕು ನಡೆಸಬೇಕು. ನಮ್ಮ ನಿತ್ಯದ ಬದುಕಿನಲ್ಲಿಆದಷ್ಟು ಒಳ್ಳೆಯ ವಿಚಾರ ಮತ್ತು ಮೌಲ್ಯಗಳನ್ನು ಅಳವಡಿಸಿಕೊಂಡು ನಮ್ಮ ಬದುಕನ್ನು ಖುಷಿಯಾಗಿರಿಸಬೇಕು ಎಂದು ಅಭಿಪ್ರಾಯಪಟ್ಟರು.
ಭಂಡಾರ್ಕಾರ್ಸ್ ಕಾಲೇಜು ವಿಶ್ವಸ್ಥ ಮಂಡಳಿಯ (ರಿ) ಅಧ್ಯಕ್ಷರಾದ ಶ್ರೀಶಾಂತಾರಾಮ್ ಎ.ಭಂಡಾರ್ಕಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಸಿ ಮಾತನಾಡಿ ಜೀವನದ ಗುರಿಯನ್ನು ತಿಳಿಯಬೇಕೆಂದರೆ ಭಗವದ್ಗೀತೆಯನ್ನು ಅರ್ಥೈಸಿಕೊಳ್ಳಬೇಕು. ಅಲ್ಲದೇ ದೇವರ ಭಯವೇಜ್ಞಾನದ ಮೂಲವಾಗಿದೆ ಎಂದು ಹೇಳಿದರು.
ಭಂಡಾರ್ಕಾರ್ಸ್ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ.ಹೆಚ್.ಶಾಂತಾರಾಮ್ ದಿಕ್ಸೂಚಿ ಭಾಷಣ ಮಾಡಿದರು.
ವೇದಿಕೆಯಲ್ಲಿ ಭಂಡಾರ್ಕಾರ್ಸ್ ಕಾಲೇಜು ವಿಶ್ವಸ್ಥ ಮಂಡಳಿಯ (ರಿ) ಸದಸ್ಯರಾದ ಶ್ರೀ. ಕೆ.ಶಾಂತಾರಾಮ್ ಪ್ರಭು ಉಪಸ್ಥಿತರಿದ್ದರು.
ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ ಸ್ವಾಗತಿಸಿದರು.
ಭಂಡಾರ್ಕಾರ್ಸ್ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲಡಾ. ಜಿ.ಎಂ.ಗೊಂಡ ವಂದಸಿದರು.
ಉಪನ್ಯಾಸಕಿ ರೋಹಿಣಿ.ಹೆಚ್.ಬಿ ಕಾರ್ಯಕ್ರಮ ನಿರ್ವಹಿಸಿದರು. ತಾಂತ್ರಕವಾಗಿಕಾಲೇಜಿನ ಐಟಿ ತಂಡದ ಸದಸ್ಯರಾದ ಅಮರ್ ಸಿಕ್ವೆರಾ, ಶಂಕರನಾರಾಯಣ ಉಪಾಧ್ಯಾಯ ಮತ್ತು ವಿಕ್ರಮ್ಅವರು ಸಹಕರಿಸಿದರು.