ಬ್ರಹ್ಮಾವರ ಹೋಲಿ ಫೆಮಿಲಿ ಇಗರ್ಜಿಯಲ್ಲಿ ಶುಭ ಶುಕ್ರವಾರದ ಆಚರಣೆ

Ptotos: daina Dsouza

ಬ್ರಹ್ಮಾವರ   ಹೋಲಿ ಫೆಮಿಲಿ ಇಗರ್ಜಿಯಲ್ಲಿ ಶುಭ ಶುಕ್ರವಾರದ ಆಚರಣೆ

ಬ್ರಹ್ಮಾವರ , ಎ.29:  ಬ್ರಹ್ಮಾವರದ ಹೋಲಿ ಫೆಮಿಲಿ ಬ್ರಹ್ಮಾವ ರ ಹೋಲಿ ಫೆಮಿಲಿ ಇಗರ್ಜಿಯಲ್ಲಿ ಶುಭ ಶುಕ್ರವಾರದ ಆಚರಣೆಇಗರ್ಜಿಯಲ್ಲಿ ಶುಭ ಶುಕ್ರಾವಾರದ ಪ್ರಯುಕ್ತ ನ್ಯಾಯ ನೀತಿ ರೋಗಿಗಳಿಗೆ ಗುಣಪಡಿಸುವ ಮರಣ ಹೊಂದಿದವರನ್ನು ಜೀವಂತ ಮಾಡಿದ್ದ ಯೇಸು ಕ್ರಿಸ್ತರನ್ನು ಯಹೂದಿಗಳ ಯಾಜಕರು ಮತ್ಸರದಿಂದ ಯೇಸುವಿನ ಮೇಲೆ ಆರೋಪಗಳನ್ನು ಹೋರಿಸಿ ಮರಣ ದಂಡನೆ ನೀಡುವಂತ್ತೆ ಮಾಡಿದ ದಿನ ಶುಭ ಶುಕ್ರವಾರದಂದು, ಸಂಪ್ರಾದಾಯದೊಂದಿಗೆ ಶಿಲುಭೆ ಮರಣದ ಪ್ರಾರ್ಥನ ವಿಧಿಯನ್ನು ನೆಡಸಲಾಯಿತು. ಪ್ರಥಮ ಭಾಗದಲ್ಲಿ ದೇವರ ವಾಕ್ಯದ ಸಂಭ್ರಮ ಮತ್ತು ಯೇಸುವಿನ ಕಶ್ಟ ಮರಣದ ರೀತಿಯನ್ನು ನೆಡಸಲಾಯಿತು.

ಎರಡನೆ ಭಾಗದಲ್ಲಿ ವಿಶ್ವಾಸಿಗಳ ಪ್ರಾರ್ಥನೆ ನೆಡೆದು, ಪವಿತ್ರ ಸಭೆಗಾಗಿ, ಕಥೊಲಿಕ್ ಜಗತ್‍ಗುರು ಪೆÇೀಪರಿಗಾಗಿ, ಬಿಶಪರಿಗಾಗಿ, ಧರ್ಮಗುರುಗಳಿಗಾಗಿ, ವಿಶ್ವಾಸಿಗಳಿಗಾಗಿ, ಅನಾಥ ಬಡಬಗ್ಗರಿಗಾಗಿ, ರೋಗಿಗಳಿಗಾಗಿ, ಹೀಗೆ ಅನೆಕ ರೀತಿಯ ಪ್ರಾರ್ಥನೆಯನ್ನು ದೇವರಲ್ಲಿ ಸಮರ್ಪಣೆ ಗೊಂಡವು.
ಮೂರನೇ ಭಾಗದಲ್ಲಿ ಶಿಲುಭೆಯಲ್ಲಿ ಯೇಸುವಿನ ಮರಣದ ವಿಧಿಯನ್ನು ನೆಡಸಿ ಶಿಲುಭೆಗೆ ಮುತ್ತು ನೀಡಿ ನಮಿಸುವ ಕಾರ್ಯ ನೆಡೆಯಿತು. ಕೊನೆಯ ಭಾಗವಾಗಿ ಕ್ರಿಸ್ತ ಪ್ರಸಾದವನ್ನು ಹಂಚಲಾಯಿತು. ಯೇಸುವಿನ ಕಶ್ಟ ಮರಣದ ಶುಭ ಶುಕ್ರವಾರದ ಈ ಧಾರ್ಮಿಕ ವಿಧಿಯಲ್ಲಿ ಹಲವಾರು ಧರ್ಮಭಗಿನಿಯರು ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡರು. ಈ ಪ್ರಾಥನ ವಿಧಿಯನ್ನು ಚರ್ಚಿನ ಪ್ರಧಾನ ಧರ್ಮಗುರು ವಂ|ವಿಕ್ಟರ್ ಸಲ್ದಾನ್ಹಾ ಮತ್ತು ಸಹಾಯಕ ಧರಮ್ಗುರು ವಂ|ರೋಶನ್ ಇವರು ನೇರವೇರಿಸಿದರು.