ವರದಿ: ವಾಲ್ಟರ್ ಮೊಂತೇರೊ
ಬೆಳ್ಮಣ್ಣು ಬಿಲ್ಲವ ಸಂಘ : ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ ಮತ್ತು ಸನ್ಮಾನ
ಬೆಳ್ಮಣ್ಣು ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದ ನೇತೃತ್ವದಲ್ಲಿ ವರ್ಷಂಪ್ರತಿ ಜರಗುವ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಮಹೋತ್ಸವವು ಭಾನುವಾರ ಬೆಳ್ಮಣ್ಣು ಶ್ರೀ ಕೃಷ್ಣ ಸಭಾಭವನದಲ್ಲಿ ಜರಗಿತು.
ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸತೀಶ್ ಕೋಟ್ಯಾನ್ ವಹಿಸಿದ್ದರು. ಬೆಳ್ಮಣ್ಣು ಶ್ರೀ ಕೃಷ್ಣ ಸಮೂಹ ಸಂಸ್ಥೆಗಳ ಉದ್ಯಮಿ ಎಸ್. ಕೆ. ಸಾಲ್ಯಾನ್ ಗೌರವ ಉಪಸ್ಥಿತಿತರಿದ್ದರು. ಪಾಂಗಾಳ ಸುಧಾಕರ ಅಮೀನ್ ಧಾರ್ಮಿಕ ಉಪನ್ಯಾಸ ನೀಡಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ದೇಯಿ ಬೈದೆತಿ ತುಳು ಚಲನಚಿತ್ರದ ಖ್ಯಾತ ನಿರ್ದೇಶಕ ಸೂರ್ಯ ಪೆರಂಪಳ್ಳಿ, ಬೋಳ ಗ್ರಾಮ ಪಂಚಾಯತ್ ಅಧ್ಯಕ್ಷ ಬೋಳ ಸತೀಶ್ ಪೂಜಾರಿ, ಬೆಳ್ಮಣ್ಣು ಗ್ರಾಮ ಪಂಚಾಯತ್ ಅಧ್ಯಕ್ಷೆ ಸೂಡ ವಾರಿಜ ಸಾಲಿಯಾನ್, ಕರಾಟೆ ಶಿಕ್ಷಕ ಸತೀಶ್ ಪೂಜಾರಿಯವರನ್ನು ಸನ್ಮಾನಿಸಲಾಯಿತು.
ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರನ್ನು ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ಸುವಿನ್‍ರವರನ್ನು ಅಭಿನಂದಿಸಲಾಯಿತು.
ಸಮಾರಂಭದಲ್ಲಿ ಸಂಘದ ಪೂರ್ವಾಧ್ಯಕ್ಷರಾದ ಸುಧಾಕರ್ ಕೋಟ್ಯಾನ್, ಎನ್. ಗೋಪಾಲ, ಜಯರಾಮ್ ಸಾಲ್ಯಾನ್, ಉಪಾಧ್ಯಕ್ಷರಾದ ವಸಂತ್ ಕುಮಾರ್, ಕರುಣಾಕರ್ ಪೂಜಾರಿ, ಸತೀಶ್ ಎರ್ಮಾಳ್, ಕೋಶಾಧಿಕಾರಿ ಬೋಳ ಪ್ರಕಾಶ್ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ಕುಶಲ ಸುವರ್ಣ, ಕಾರ್ಯದರ್ಶಿ ಪುಷ್ಪ ಸಾಂತೂರುಕೊಪ್ಲ, ಯುವ ವಿಭಾಗದ ಅಧ್ಯಕ್ಷ ಕಾರ್ತಿಕ್ ಸುವರ್ಣ, ಕಾರ್ಯದರ್ಶಿ ಅವಿನಾಶ್ ಸಾಂತೂರು ಮೊದಲಾದವರಿದ್ದರು.
ಸಾಂತೂರು ವಿನೇಶ್ ಅಮೀನ್ ಮತ್ತು ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಕಾರ್ಯದರ್ಶಿ ಸುಭಾಸ್ ಕುಮಾರ್ ವಂದಿಸಿದರು. ನಂತರ ದೇಯಿ ಬೈದೆತಿ ತುಳು ಚಲನಚಿತ್ರ ಪ್ರದರ್ಶನಗೊಂಡಿತು.