ವರದಿ:ವಾಲ್ಟರ್ ಮೊಂತೇರೊ, ಬೆಳ್ಮಣ್ಣು
ಬೆಳ್ಮಣ್ಣು ಜೇಸಿಐನಿಂದ ಕೈ ತೊಳೆಯುವ ನೀರಿನ ವ್ಯವಸ್ಥೆ
ಜಗತ್ತಿನದ್ಯಾಂತ ಕೊರೊನಾ ವೈರಸ್ನಿಂದ ಕೆಮ್ಮುವಾಗ ಮತ್ತು ಸೀನುವಾಗ ಒಬ್ಬರಿಂದ ಇನ್ನೊಬ್ಬರಿಗೆ ವೈರಸ್ ಹರಡುತ್ತಿದ್ದು ಅದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಕೆಮ್ಮುವಾಗ ಬಾಯಿಗೆ ಕರವಸ್ತ್ರವನ್ನು ಹಿಡಿಯುವ ಮೂಲಕ ಮತ್ತು ಆಗಾಗ ಕೈಗಳನ್ನು ತೊಳೆದುಕೊಳ್ಳುವುದರ ಮೂಲಕ ಜಾಗೃತರಾದಗ ಮಾತ್ರ ಈ ಸೊಂಕಿನಿಂದ ಪಾರಾಗಲು ಸಾಧ್ಯ ಈ ನಿಟ್ಟಿನಲ್ಲಿ ಬೆಳ್ಮಣ್ಣು ಜೇಸಿಐ ವತಿಯಿಂದ ಕೈ ತೊಳೆಯುವ ನೀರಿನ ವ್ಯವಸ್ಥೆಯನ್ನು ಆರಂಭಿಸಿದ್ದು ಸಾರ್ವಜನಿಕರು ಇದರ ಸಂಪೂರ್ಣ ಪ್ರಯೋಜವನ್ನು ಪಡೆದುಕೊಳ್ಳಿ ಎಂದು ಬೆಳ್ಮಣ್ಣು ಜೇಸಿಐನ ಅಧ್ಯಕ್ಷ ಸತ್ಯನಾರಾಯಣ ಭಟ್ರವರು ಹೇಳಿದರು.
ಅವರು ಮಾರ್ಚ್ 23ರಂದು ಸೋಮವಾರ ಬೆಳ್ಮಣ್ಣು ಬಸ್ನಿಲ್ದಾಣದ ಬಳಿ ಸಾರ್ವಜನಿಕರಿಗಾಗಿ ಸೋಪ್ ಆಯಿಲ್ ಬಳಸಿ ಕೈ ತೊಳೆಯುವ ನೀರಿನ ವ್ಯವಸ್ಥೆಯನ್ನು ಕೈ ತೊಳೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಬೆಳ್ಮಣ್ಣು ಜೇಸಿಐನ ಪೂರ್ವಾಧ್ಯಕ್ಷ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಉಪಾಧ್ಯಕ್ಷರಾದ ವಿರೇಂದ್ರ ಆರ್.ಕೆ., ಪ್ರದೀಪ್ ಶೆಟ್ಟಿ, ಬೆಳ್ಮಣ್ಣು ಉದಯ ಬೇಕರಿ ಮಾಲಕ ಉದಯ ಕುಂದರ್, ಬಸ್ ಟೈಮ್ ಕೀಪರ್ ರವಿ, ಸ್ಥಳೀಯರಾದ ಪ್ರಕಾಶ್ ಮೊದಲಾದವರಿದ್ದರು.