ವರದಿ: ಚಂದ್ರಶೇಖರ, ಬೀಜಾಡಿ
ಬೀಜಾಡಿ:ಉಚಿತ ಸಮವಸ್ತ್ರದ ಜೊತೆ ಪ್ರತಿ ಮಗುವಿಗೊಂದು ಸಸಿ ವಿತರಣೆ
ಕುಂದಾಪುರ:ಯುವ ಜನತೆ ಮನಸ್ಸು ಮಾಡಿದರೆ ಸಾಧನೆ ಸಾಧ್ಯ.ಊರಿನ ಅಭಿವೃದ್ಥಿಗೆ ಸಂಘ ಸಂಸ್ಥೆಗಳು ನೀಲನಕ್ಷೆ ಸಿದ್ದಪಡಿಸಿ ದಾನಿಗಳು ಮತ್ತು ಸರಕಾರದ ಗಮನ ತರಬೇಕು.ಆಗ ಅವರು ನೀಡುವ ಸಹಕಾರದಿಂದ ಊರನ್ನು ಅಭಿವೃದ್ಧಿ ಪಡಿಸಲು ಸಾಧ್ಯ. ಈ ನಿಟ್ಟಿ ಮಿತ್ರ ಸಂಗಮದ ಪ್ರಯತ್ನ ಶ್ಲಾಘನೀಯ ಎಂದು ಸಾಸ್ತಾನ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಶ್ರೀಧರ ಪಿ.ಎಸ್ ಹೇಳಿದರು.
ಅವರು ಭಾನುವಾರ ಬೀಜಾಡಿ ಗೋಪಾಡಿ ಮಿತ್ರ ಸಂಗಮದ ಆಶ್ರಯದಲ್ಲಿ ಬೀಜಾಡಿ ಮೂಡು ಶಾಲಾ ಅಂಗನವಾಡಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ ಹಾಗೂ ಪ್ರತಿ ಮಗುವಿಗೊಂದು ಸಸಿ ವಿತರಣೆಯ ಸಮಾರಂಭದಲ್ಲಿ ಆಶಯ ಭಾಷಣ ಮಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಬೀಜಾಡಿ ಮೂಡು ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿಯ ಸದಸ್ಯ ಬಿ.ವಾದಿರಾಜ ಹೆಬ್ಬಾರ್ ವಹಿಸಿದ್ದರು.ಇದೇ ಸಂದರ್ಭದಲ್ಲಿ ಸಮವಸ್ತ್ರದ ದಾನಿ,ಕುಂದಾಪುರದ ವಕೀಲರಾದ ಕೆ.ಪ್ರದೀಪಕುಮಾರ್ ಶೆಟ್ಟಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಿದರು.
ಶಿಕ್ಷಣ ಪ್ರೇಮಿ ಬೀಜಾಡಿ ಶೇಷಗಿರಿ ಗೋಟ, ಕುಂದಾಪುರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ಮೇಲ್ವಿಚಾರಕಿ ರಾಜೇಶ್ವರೀ,ಬೀಜಾಡಿ ಮೂಡು ಅಂಗನವಾಡಿ ಕೇಂದ್ರದ ಶಿಕ್ಷಕಿ ಸುಜಾತ ಮೊದಲಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಮಿತ್ರ ಸಂಗಮದ ಮಾಜಿ ಅಧ್ಯಕ್ಷ ವೇದಮೂರ್ತಿ ಶಂಕರನಾರಾಯಣ ಬಾಯರಿ, ಪ್ರಧಾನ ಕಾರ್ಯದರ್ಶಿ ಚಂದ್ರ ಬಿ.ಎನ್ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಮಂಜುನಾಥ ಸ್ವಾಗತಿಸಿದರು. ಅನುಪ್ ಕುಮಾರ್ ಬಿ.ಆರ್.ವಂದಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.