ಬಸ್ರೂರು ಉದು೯ ಶಾಲೆ : ಗಾಂಧಿ ಜಯಂತಿ ಆಚರಣೆ ಮತ್ತು ಗುರುತಿನ ಚೀಟಿ ವಿತರಣೆ

JANANUDI.COM NETWORK

 

ಬಸ್ರೂರು ಉದು೯ ಶಾಲೆ : ಗಾಂಧಿ ಜಯಂತಿ ಆಚರಣೆ ಮತ್ತು ಗುರುತಿನ ಚೀಟಿ ವಿತರಣೆ

ಸ. ಹಿ. ಪ್ರಾ. ಶಾಲೆ. ಬಸ್ರೂರು (ಉದು೯) ಇಲ್ಲಿ ಮಹತ್ಮ ಗಾಂಧೀಜಿಯವರ 150ನೇ ಜಯಂತಿಯನ್ನು ಸಂಭ್ರಮಿಸಲಾಯಿತು. ದೇಶದ ರಾಷ್ಟ್ರಪಿತ ಗಾಂಧೀಜಿಯವರ ಜೀವನವೇ ಒಂದು ಆದಶ೯ .ಆಗಭ೯ ಶ್ರೀಮಂತರಾಗೀದ್ದರು ಅತ್ಯಂತ ಸರಳ ಜೀವನ ನಡೆಸಿದ ಗಾಂಧೀಜಿಯವರು ಸತ್ಯ ಮತ್ತು ಅಹಿಂಸೆಯ ಮೂಲಕವೆ ಸ್ವಾತಂತ್ರ್ಯ ಹೋರಾಟವನ್ನು ಸಂಘಟಿಸಿದರು… ಈ ಎಳೆಯ ವಯಸ್ಸಿನಲ್ಲಿ ಮಕ್ಕಳು ಅವರವರ ಜೀವನದ ಪಾಠವನ್ನು ಕರಗತ ಮಾಡಿ ಕೊಳ್ಳಬೇಕು ಎಂದು ಸಭಾಧ್ಯಕ್ಷ ತೆಯನ್ನು ವಹಿಸಿದ್ದ ಶಾಲಾ ಎಸ್. ಡಿ. ಎಂ. ಸಿ. ಅಧ್ಯಕ್ಷ ಅಬ್ದುಲ್ ಅಜೀ಼ಜ಼್ ಹೇಳಿ ದರು.

ಇದೇ ಸಂದಭ೯ದಲ್ಲಿ ಗುಲ್ವಾಡಿ ಯ ಜಮಾಲ್ ಸಾಹೇಬ್ ಅವರು ಎಲ್ಲಾ ಮಕ್ಕಳಿಗೂ ಕೊಡಮಾಡಿದ ಗುರುತು ಚೀಟಿಯನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಿ. ಎನ್. ಮೈದೀನ್ ಸಾಹೇಬ್ ಮೇಡೀ೯ ಹಾಗೂ ಜವಾದ್ ಶೇಖ್ ಹಸ್ತಾಂತರಿಸದರು. ನಿವೃತ್ತ ಅಧ್ಯಾಪಕ ಕೆ. ಪ್ರೇಮಾನಂದ ಅವರು ಮಕ್ಕಳಿಗೆ ದೇಶ ಭಕ್ತಿ ಗಾಯನವನ್ನು ನಡೆಸಿಕೊಟ್ಟರು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿಶಾಲಾಕ್ಷಿ ಸ್ವಾಗತಿಸಿ, ಶಿಕ್ಷಕಿ ಸಗೀರಾ ವಂದಿಸಿ, ಶಿಕ್ಷಕ ಮಹೇಶ್ ನಿರೂಪಿಸಿದರು.