ಪಿ.ಡಿ.ಓ ಎಂ.ರಾಮಕೃಷ್ಣ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಧಾರಾಣಿ ವಿರುದ್ಧ ಕೋಲಾರ ಭ್ರಷ್ಟಚಾರ ನಿಗ್ರಹ ದಳ ಪ್ರಕರಣ ದಾಖಲು.

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

 

ಪಿ.ಡಿ.ಓ ಎಂ.ರಾಮಕೃಷ್ಣ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಧಾರಾಣಿ ವಿರುದ್ಧ ಕೋಲಾರ ಭ್ರಷ್ಟಚಾರ ನಿಗ್ರಹ ದಳ ಪ್ರಕರಣ ದಾಖಲು

 

 

 

ಕೋಲಾರ : ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆದೇಶದಂತೆ ಬಂಗಾರಪೇಟೆ ತಾಲ್ಲೂಕು ಐನೋರಹೊಸಹಳ್ಳಿ ಗ್ರಾಮ ಪಂಚಾಯಿತಿಯ ಪಿ.ಡಿ.ಓ , ಎಂ.ರಾಮಕೃಷ್ಣ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಧಾರಾಣಿ ವಿರುದ್ಧ ಕೋಲಾರ ಭ್ರಷ್ಟಚಾರ ನಿಗ್ರಹ ದಳ ಪ್ರಕರಣ ದಾಖಲು ಮಾಡಿಕೊಂಡಿದೆ . ಐನೋರಹೊಸಹಳ್ಳಿಯ ಗ್ರಾಮ ಪಂಚಾಯಿತಿಯಲ್ಲಿ 2016-17 ನೇ ಸಾಲಿನಲ್ಲಿ ನಡೆದಿರುವ ಭ್ರಷ್ಟಚಾರ , ಅವ್ಯವಹಾರ ಅಧಿಕಾರ ದುರುಪಯೋಗದ ಬಗ್ಗೆ ಸಾಮಾಜಿಕ ಕಾರ್ಯಕರ್ತ
ನಿರ್ಣಯ ಎಸ್ ನಾರಾಯಣಸ್ವಾಮಿ ದಿ : 05-09-2018 ರಂದು ಸರ್ಕಾರದ ಕಾರ್ಯದರ್ಶಿಗಳು , ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಗೆ ದಾಖಲೆಗಳೊಂದಿಗೆ ದೂರನ್ನು ನೀಡಿ ತನಿಖೆ ನಡೆಸಲು ಕೋರಿದ್ದರು .
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಪತ್ರ ಸಂಖ್ಯೆ : ಗ್ರಾಅಪ / 493 / ಗ್ರಾಪಂಕ / 2018 ದಿನಾಂಕ : 09-11-2018 ರಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಅಗತ್ಯ ಕ್ರಮ ತೆಗೆದುಕೊಳ್ಳಲು ಹಾಗೂ ಸರ್ಕಾರಕ್ಕೆ ವರದಿ ನೀಡಲು ಆದೇಶಿಸಿತ್ತು .
ಆದರೆ , ಇದುವರೆಗೂ ಕ್ರಮ ತೆಗೆದುಕೊಳ್ಳಲು ಜಿಲ್ಲಾ ಪಂಚಾಯಿತಿಯು ವಿಫಲವಾದ ಹಿನ್ನಲೆಯಲ್ಲಿ ದಿ : 07-09-2019 ರಂದು ಕೋಲಾರದ ಭ್ರಷ್ಟಾಚಾರ ನಿಗ್ರಹದಳಕ್ಕೆ ಎಸ್ . ನಾರಾಯಣಸ್ವಾಮಿ ದೂರನ್ನು ದಾಖಲಿಸಿ 2016-17 ನೇ ಸಾಲಿನಲ್ಲಿ ರೂ .3,96,195 / – ಗಳ ದುರುಪಯೋಗ ರೂ .1,82,635 / – ಗಳ ಆಕ್ಷೇಪಣೆ ಮೊತ್ತಕ್ಕೆ ಹಾಗೂ ಇತರೆ ಗಂಭೀರವಾದ 4 ಅಂಶಗಳಾದ ( 1 ) ಆಯವ್ಯಯ ( budget ) ತಯಾರಿಸದೆ ಅಧಿಕಾರ ದುರುಪಯೋಗಪಡಿಸಿಕೊಂಡು ಖರ್ಚು ಮಾಡಿರುವುದು . ( 2 ) ಸರ್ಕಾರದ ತೆರಿಗೆ ( Tax ) ಕಡಿತ ಮಾಡದಿರುವುದು . ( 3 ) ಸರ್ಕಾರಕ್ಕೆ ಸೆಸ್‌ಗಳನ್ನು ಕಟ್ಟದೆ ದುರುಪಯೋಗಪಡಿಸಿರುವುದು . ( 4 ) ಕೊಟೇಷನ್ ಪಡೆಯದೆ ಖರೀದಿಸಿರುವುದಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಕೋರಲಾಗಿತ್ತು .
ತನಿಖೆಯು ಆಮೆಗತಿಯಲ್ಲಿ ನಡೆಯುತ್ತಿದ್ದ ಹಿನ್ನಲೆಯಲ್ಲಿ ಎಸ್.ನಾರಾಯಣಸ್ವಾಮಿ ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ತ್ವರಿತಗತಿಯಲ್ಲಿ ತನಿಖೆ ನಡೆಸಲು ಎ.ಸಿ.ಬಿ. ಗೆ ನಿರ್ದೇಶನ ನೀಡಲು ಖ್ಯಾತ ವಕೀಲರಾದ ಬಿ.ಎನ್.ಶ್ರೀನಿವಾಸ್ ರವರ ಮೂಲಕ ಮನವಿ ಮಾಡಿಕೊಂಡರು .
ಇದನ್ನು ಪುರಸ್ಕರಿಸಿದ ನ್ಯಾಯಾಲಯವು ತನಿಖೆ ನಡೆಸಿ 2 ತಿಂಗಳ ಒಳಗೆ ವರದಿ ನೀಡಲು ಆದೇಶಿಸಿದೆ . ಇದರನ್ವಯ ಕೋಲಾರ ಭ್ರಷ್ಟಾಚಾರ ನಿಗ್ರಹದಳ ಪ್ರಕರಣದ ಸಂಖ್ಯೆ : 4/2020 ರಂತೆ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988 ರಂತೆ ಕಲಂ 13 ( 1 ) ( 2 ) ಐ.ಪಿ.ಸಿ. ಕಲಂ 465 , 466 , 467 , 468 , 471 ರ ಅನ್ವಯ ಪಿ.ಡಿ.ಒ , ಎಂ.ರಾಮಕೃಷ್ಣ , ಹಾಲಿ ಹರಟಿ ಗ್ರಾಮ ಪಂಚಾಯಿತಿ , ಸುಧಾರಾಣಿ , ಅಧ್ಯಕ್ಷರು , ಐನೋರಹೊಸಹಳ್ಳಿ ಗ್ರಾಮ ಪಂಚಾಯಿತಿ ಇವರ ವಿರುದ್ಧ ಎ.ಸಿ.ಬಿ , ಪೊಲೀಸ್ ಉಪಾಧೀಕ್ಷಕರಾದ ಎಂ.ಎಲ್.ಪುರುಷೋತ್ತಮ್ ಪ್ರಕರಣ ದಾಖಲಿಸಿಕೊಂಡು ಜಿ.ಎನ್.ವೆಂಕಟಾಚಲಪತಿ , ಪೊಲೀಸ್ ನಿರೀಕ್ಷಕರು ಇವರನ್ನು ತನಿಖಾಧಿಕಾರಿಯಾಗಿ ನೇಮಿಸಿದ್ದಾರೆ . ಹೈಕೋರ್ಟ್‌ನಲ್ಲಿ ಪ್ರಕರಣ : ಸದರಿ ಪಿ.ಡಿ.ಒ , ಎಂ.ರಾಮಕೃಷ್ಣ ಮತ್ತಿತರರ ವಿರುದ್ಧ ಬಂಗಾರಪೇಟೆ ತಾಲ್ಲೂಕು ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುವಾಗ ನಡೆದಿರುವ 2.00 ಕೋಟಿ ರೂಪಾಯಿಗಳಿಗೂ ಮೇಲ್ಪಟ್ಟ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ನಿರ್ಣಯ ನಾರಾಯಣಸ್ವಾಮಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿದ್ದು W.P. No.11018 / 2019 ವಿಚಾರಣಾ ಹಂತದಲ್ಲಿರುತ್ತದೆ . ಪಿ.ಡಿ.ಒ. ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲು : ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಮೀಸಲಾಗಿದ್ದಂತಹ ಜಮೀನನ್ನು ಸದರಿ ಪಿ.ಡಿ.ಒ , ಎಂ.ರಾಮಕೃಷ್ಣ ಬಂಗಾರಪೇಟೆ ತಾಲ್ಲೂಕು ಡಿ.ಕೆ.ಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುವಾಗ ಸುಮಾರು 175 ನಿವೇಶನಗಳನ್ನು ಅಕ್ರಮವಾಗಿ ಖಾತೆ ಮಾಡಿರುವ ಸಂಬಂಧ ವಿ.ಕೃಷ್ಣಮೂರ್ತಿ ಡಿ.ಕೆ.ಹಳ್ಳಿ ಇವರು ದೂರು ನೀಡಿ ಲೋಕಾಯುಕ್ತದಲ್ಲಿ Complaint Number – LOK / BD / 10215 / 2019 ದಾಖಲಾಗಿರುತ್ತದೆ